ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ದ್ರಾಕ್ಷಿ ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರಿ ಸಂಘದ ಜಿಲ್ಲಾ ಆದ್ಯಕ್ಷರಾಗಿ ಪೀರಗೊಂಡ ಮಲಕಪ್ಪ ಗದ್ಯಾಳ (ಮೂರನೇ ಬಾರಿ) ಹಾಗೂ ಉಪಾಧ್ಯಕ್ಷರಾಗಿ ಮಲ್ಲಪ್ಪ ರಾಮಣ್ಣಾ ತುಂಗಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ನಿರ್ದೇಶಕರಾಗಿ ಸುರೇಶ ಬಿರಾದಾರ, ಮಲ್ಲಪ್ಪ ಬಂಡಿ, ಪ್ರಕಾಶ ಚಿನಗುಂಡಿ, ಮಹಾವೀರ ಕುಸನಾಳ, ಇಂದಿರಾಬಾಯಿ ಪಾಟೀಲ, ಶಾಂತಾಬಾಯಿ ಹಿರೇಮಠ, ಭೀಮರಾಯ ಹಂಗರಗಿ, ಯಲ್ಲಪ್ಪ ಹೊನಕಟ್ಟಿ, ಸಂಜಯ ಬಸನಗೌಡ ಪಾಟೀಲ, ವಿಠ್ಠಲ ಪೂಜಾರಿ, ಚನ್ನಪ್ಪ ದಯಗೊಂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಆರ್.ಎನ್.ಆಳೂರ ಪ್ರಕಟಿಸಿದ್ದಾರೆ.

