ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಯಾಣಿಕರ ಬೇಡಿಕೆಯಂತೆ, ವಿಜಯಪುರ-ಬೆಂಗಳೂರ ಮಾರ್ಗದ ಕಲ್ಯಾಣ ರಥ ವೊಲ್ಲೋ ಮಲ್ಟಿ ಎಕ್ಸಲ್ ಎಸಿ ಸ್ಲಿಪರ್ ಬಸ್ ಪ್ರಯಾಣ ದರದಲ್ಲಿ ರೂ.100 ಅಂದರೆ, ಶೇ 6% ರಷ್ಟು ರಿಯಾಯಿತಿ ನೀಡಲಾಗಿದೆ.
ವಿಜಯಪುರ-ಬೆಂಗಳೂರ ಕಲ್ಯಾಣ ರಥ ಬಸ್ಸಿನ ದರ ರೂ. 1,399 ನಿಗದಿಪಡಿಸಲಾಗಿದ್ದು, ಪ್ರಯಾಣಿಕರು ಈ ರಿಯಾಯತಿ ದರದ ಉಪಯೋಗ ಪಡೆದುಕೊಳ್ಳುವಂತೆ
ಕೆಕೆಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಾಯಣಪ್ಪ ಕುರುಬರ ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.
