ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ೬ನೇ ತರಗತಿ ಪ್ರವೇಶಕ್ಕಾಗಿ ಡಿ.೧೩. ಶನಿವಾರದಂದು ಬೆಳಿಗ್ಗೆ ೧೧ ರಿಂದ ೧:೩೦ಗಂಟೆಯವರೆಗೆ ಜರುಗುವ ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯು ಸಿಂದಗಿ ಪಟ್ಟಣದ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜು, ಜಿ.ಪಿ.ಪೋರವಾಲ ಕಾಲೇಜು, ಹೆಚ್.ಜಿ ಪದವಿ ಪೂರ್ವ ಕಾಲೇಜ್, ಸಿ.ಎಮ್.ಮನಗೂಳಿ ಪದವಿ ಕಾಲೇಜು, ಸರ್ಕಾರಿ ಆದರ್ಶ ವಿದ್ಯಾಲಯ, ಅಂಜುಮನ್ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಎಲೈಟ್ ಆಂಗ್ಲ ಮಾಧ್ಯಮ ಶಾಲೆ, ಜ್ಞಾನಭಾರತಿ ಪ್ರೌಢ ಶಾಲೆ, ಶ್ರೀ ಚೆನ್ನವೀರ ಸ್ವಾಮೀಜಿ ಪ್ರೌಢಶಾಲೆ ಸೇರಿದಂತೆ ೧೦ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ ತಿಳಸಿದ್ದಾರೆ.
ಈ ಪರೀಕ್ಷೆಗೆ ಒಟ್ಟು ೩೦೪೮ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಪರೀಕ್ಷೆಗೆ ಅಗತ್ಯವಾದ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಪರೀಕ್ಷೆಗೆ ನೊಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು ಪ್ರವೇಶ ಪತ್ರ ಹಾಗೂ ತಮ್ಮ ಆಧಾರ ಕಾರ್ಡಿನೊಂದಿಗೆ ಬೆಳಿಗ್ಗೆ ೧೦ಗಂಟೆಗೆ ಹಾಜರಿರಬೇಕು ಎಂದು ಪರೀಕ್ಷೆಯ ನೋಡಲ್ ಅಧಿಕಾರಿಂ ಎಸ್.ಎಂ.ಕಪನಿಂಬರಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
