ಉದಯರಶ್ಮಿ ದಿನಪತ್ರಿಕೆ
ಇಂಡಿ: ಇಂದು ನಮ್ಮ ದೇಶದ ಹಳ್ಳಿಗಳಲ್ಲಿ ಮಾತ್ರ ಧರ್ಮ, ಸಂಸ್ಕೃತಿ ಮತ್ತು ಸಂಪ್ರದಾಯ ಉಳಿದಿವೆ. ಅದನ್ನು ಮತ್ತಷ್ಟು ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕು ಎಂದು ಚೌಡಾಪುರ ಮಹಾಂತೇಶ ಮಠದ ವೀರ ಮಹಾಂತ ಶ್ರೀಗಳು ಹೇಳಿದರು.
ಪಟ್ಟಣದ ಶಿರಶ್ಯಾಡ ಶಾಖಾ ಮಠದಲ್ಲಿ ನಿರ್ಮಾಣಗಿಳ್ಳುತ್ತಿರುವ ಬಡ ಮಕ್ಕಳ ಶಿಕ್ಷಣ ಉಚಿತ ಪ್ರಸಾದ ನಿಲಯ ಹೊಸ್ತಿಲ ಪೂಜಾ ಕಾರ್ಯಕ್ರಮ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಪ್ರತಿ ಹಳ್ಳಿಯಲ್ಲೂ ಕನಿಷ್ಠ ೧೦ ರಿಂದ ೨೦ ದೇವಸ್ಥಾನಗಳು ಸಿಗುತ್ತವೆ. ಅದಕ್ಕೆ ಅವರದೇ ಆದ ಸಂಪ್ರದಾಯ ಮತ್ತು ಆಚರಣೆ ನಡೆಯುತ್ತಿರುತ್ತವೆ. ಆ ದೇವಸ್ಥಾನಗಳಿಗೆ ಉತ್ಸವ ಜಾತ್ರೆಗಳು ಸಹ ನಡೆಯುತ್ತವೆ. ಅದಕ್ಕೆಲ್ಲ ಅಪಾರ ಜನಸ್ತೋಮ ಸೇರುವದು. ದೇವರು ಧರ್ಮ ಸಂಪ್ರದಾಯದ ಮೇಲೆ ಇರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದರು.
ಮಡಿವಾಳೇಶ್ವರ ಶ್ರೀಗಳು ಮಾತನಾಡಿ ದೇವರು ಹಲವು ದೈವತ್ವ ಒಂದೇ, ನಾಮಗಳು ಹಲವು ಅದರ ಹಿಂದೆ ಇರುವ ಭಕ್ತಿ ಒಂದೇ. ನಮ್ಮದೇ ಆದ ಸಂಸ್ಕೃತಿ ಸಂಪ್ರದಾಯ ಎಲ್ಲವೂ ನಮ್ಮವೇ,ನಾವೆಲ್ಲರೂ ಆಸ್ತಿಕರಾಗಿ ಬದುಕಬೇಕು ಎಂದರು.
ಬಿಜೆಪಿ ಧುರೀಣ ಸುರೇಶ ಬಿರಾದಾರ ಮಾತನಾಡಿ ಜನರಿಗೆ ಸುಖ ಜೀವನ ನಡೆಸಲು ಹಣ ಆಸ್ತಿ ಮುಖ್ಯವಲ್ಲ, ಬದಲಾಗಿ ಜನರು ಸಂತೋಷ ನೆಮ್ಮದಿ ಸುಖದಿಂದ ಇರಲು ಆಧ್ಯಾತ್ಮ ಇದ್ದರೆ ಸಾಕು, ನಮ್ಮ ದೇಶದಲ್ಲಿ ಸಂಸ್ಕೃತಿ ಸಂಪ್ರದಾಯ ಉಳಿದುಕೊಂಡಿರುವದಕ್ಕೆ ಇಂತಹ ಧಾರ್ಮಿಕ ಕಾರ್ಯಕ್ರಮಗಳೇ ಸಾಕ್ಷಿಯಾಗಿವೆ. ಇಂದು ಕೂಡಾ ಕೆಲವರು ಸನಾತನ ಸಂಸ್ಕೃತಿಗೆ ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು..
ಜೈನಾಪುರದ ರೇಣುಕಾ ಶ್ರೀಗಳು, ಶಿರಶ್ಯಾಡದ ಮುರಗೇಂದ್ರ ಶಿವಾಚಾರ್ಯರರು, ಬಾಬುಗೌಡ ಬಿರಾದಾರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಗುರಲಿಂಗಪ್ಪ ಅಂಗಡಿ, ರಾಘವೇಂದ್ರ ಕಾಪಸೆ, ಅವದಿ ಶಿಕ್ಷಕರು. ವಾಯ್.ಜಿ. ಬಿರಾದಾರ, ಅದೃಷ್ಟಪ್ಪಾ ವಾಲಿ ಮಾತನಾಡಿದರು.
ವೇದಿಕೆಯ ಮೇಲೆ ಕಾಸುಗೌಡ ಬಿರಾದಾರ, ಅನೀಲ ಪ್ರಸಾದ ಏಳಗಿ, ಬಸವರಾಜ ಸಾಹುಕಾರ ಕುಮಸಗಿ, ಮಂಜುನಾಥ ವಂದಾಲ, ಮುತ್ತುದೇಸಾಯಿ, ಸೋಮಶೇಖರ ದೇವರ, ಯಶವಂತ ಗುಗ್ಗರಿ, ಅಪ್ಪುಗೌಡ ಪಾಟೀಲ, ಡಿ.ಡಿ.ಮಡಗೊಂಡ, ಸುನೀಲಗೌಡ ಬಿರಾದಾರ, ರಾಮಪ್ಪ ಎಲ್.ಕೆ, ಮಾಪಸಿಂಗ ಪರಮಾರ, ವಿಜಯಕುಮಾರ ರಾಠೋಡ, ಪ್ರಶಾಂತ ಪಾಟೀಲ ಮತ್ತಿತರಿದ್ದರು.
ಮಧುವನ ಹೋಟೇಲ ಮಾಲಿಕ ಬಾಬುಗೌಡ ಬಿರಾದಾರ ಅನ್ನ ಸಂತರ್ಪಣೆ ನೇರವೇರಿಸಿದರು.

