ಕೆಂಭಾವಿ:
ಪಟ್ಟಣದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಹೈ ಮಾಸ್ಟ್ ವಿದ್ಯುತ್ ದೀಪ ಅಳವಡಿಸುವಂತೆ ನಮ್ಮ ಕರ್ನಾಟಕ ಸೇನೆಯ ಕಾರ್ಮಿಕ ಘಟಕದ ಹೋಬಳಿ ಅಧ್ಯಕ್ಷ ಗುರುರಾಜ ಎಸ್ ಅಂಗಡಿ ಒತ್ತಾಯಿಸಿದ್ದಾರೆ.
ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚೆನ್ನಮ್ಮ ವೃತ್ತದಲ್ಲಿ ಜನದಟ್ಟಣೆ ಹಾಗೂ ವಾಹನ ಸಂಚಾರ ಹೆಚ್ಚಾಗಿದ್ದು, ಕೃಷ್ಣಾ ಕಾಲುವೆ ಪಕ್ಕದಲ್ಲಿ ಇರುವ ಕಾರಣ ಪಾದಚಾರಿಗಳು ಸಂಚಾರ ಮಾಡುವಾಗ ಬೆಳಕಿನ ಅಭಾವ ಎದುರಾಗಿ ಅಪಘಾತ ಸಂಭವಿಸುತ್ತವೆ. ಕೂಡಲೇ ಚೆನ್ನಮ್ಮ ವೃತ್ತದಲ್ಲಿ ಹೈ ಮಾಸ್ಟ್ ವಿದ್ಯುತ್ ದೀಪ ಅಳವಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.

