ಉದಯರಶ್ಮಿ ದಿನಪತ್ರಿಕೆ
ರೇವತಗಾಂವ: ಗ್ರಾಮದ ಶ್ರೀಶೈಲ ಮಾಳಿ ಶಿಕ್ಷಕರು ಚಡಚಣ ತಾಲೂಕು ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಂಗಳವಾರದಂದು ಚಡಚಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ. ಪ್ರಸ್ತುತ ದೇವರ ನಿಂಬರಗಿಯ ಸರ್ಕಾರಿ ಕಿರಿಯ ಪ್ರಾಥಮಿಕ ಮಣಿಯಾರ ವಸ್ತಿ ಶಾಲೆಯಲ್ಲಿ ಶಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಿಕ್ಷಕ ಸಂಯೋಜಕ ಸುರೇಶ ನಾಯಕ, ಬಿಆರ್‌ಪಿ ಶ್ರೀಮತಿ ರಾಜೇಶ್ವರಿ ಕಾಮಗೊಂಡ, ಎಸ್.ಎಸ್.ಪಾಟೀಲ, ಗುರು ಜೇವೂರ, ಸುನೀಲ ಯಳಮೇಲಿ, ಸುನೀಲ ಶಾಹ, ಜಗದೀಶ ಚಲವಾದಿಯವರುಗಳು ಸೇರಿದಂತೆ ಇತರು ಉಪಸ್ಥಿತರಿದ್ದರು.

