ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ “ಮಗಳನ್ನು ರಕ್ಷಿಸಿ ಮಗಳನ್ನು ಓದಿಸಿ” ಯೋಜನೆಯಡಿ “ಒಂದು ದಿನದ ಸಾಮರ್ಥ ಬಲವರ್ಧನೆ” ಕಾರ್ಯಾಗಾರವನ್ನು ರುಡ್ ಸೆಟ್ ತರಭೇತಿ ಸಂಸ್ಥೆ ವಿಜಯಪುರದಲ್ಲಿ ಹಮ್ಮಿಕೊಳ್ಳಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಮೊದಲಿಗೆ “ಮಗಳನ್ನು ರಕ್ಷಿಸಿ ಮಗಳನ್ನು ಓದಿಸಿ” ಯೋಜನೆಯಡಿ ಕೆ.ಕೆ.ಚವ್ಹಾಣ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಜಯಪುರ ಇವರು ಕಾರ್ಯಕ್ರಮದ ಆಹ್ವಾನಿತ ಎಲ್ಲ ಗಣ್ಯ ಮಾನ್ಯರನ್ನು ಸ್ವಾಗತಿಸಿ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಕುರಿತು ಪ್ರಸ್ತಾವಿಕ ನುಡಿಗಳನ್ನು ಹೇಳಿದರು.
ನಂತರ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಶ್ರೀ ಅರವಿಂದ ಎಸ್ ಹಾಗರಗಿ, ಮಾನ್ಯ ಹಿರಿಯ ಸಿವ್ಹಿಲ್ ನ್ಯಾಯಾಧೀಶರು, ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರ ರವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾನ್ಯ ನ್ಯಾಯಾಧೀಶರು ಮಾತನಾಡುತ್ತಾ, ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ಇರುವ ತಾರತಮ್ಯವನ್ನು ಕಡಿಮೆ ಮಾಡುವುದಲ್ಲದೆ ಇದನ್ನು ಸಮಾಜದಿಂದ ಬೇರು ಸಮೇತ ಕಿತ್ತೊಗೆಯುವ ಕಾರ್ಯವನ್ನು ಮಾಡಬೇಕು. ಹೆಣ್ಣು ಮಗುವಿನ ಜನನದ ಮೊದಲು ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆಯನ್ನು ತಡೆಗಟ್ಟಬೇಕು ಹಾಗೂ ಸಮಾಜಕ್ಕೆ ಅತಿ ದೊಡ್ಡ ಪಿಡುಗಾದ ಬಾಲ್ಯ ವಿವಾಹ ಪದ್ದತಿಯನ್ನು ತಡೆದು ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡುವಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಕಾರ್ಯಪ್ರರ್ವತರಾಗಬೇಕು, ಹೆಣ್ಣು ಮಕ್ಕಳು ಯಾವುದರಲ್ಲಿಯು ಕಡಿಮೆ ಇಲ್ಲ, ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮದೇಯಾದ ಕೊಡುಗೆ ಸಮಾಜಕ್ಕೆ ನೀಡುತ್ತಿದ್ದಾರೆ. ಕೇವಲ ಪುರುಷರಿಗೆ ಸೀಮಿತವಾದ ಕ್ರಿಕೆಟ್ ಇಂದು ನಮ್ಮ ಭಾರತದ ವನೀತೆಯರು ವಿಶ್ವ ಕಪ್ ಗೆಲ್ಲುವ ಮೂಲಕ ನಮ್ಮ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಯಾವುದೇ ರೀತಿಯ ಕಿಳರಿಮೆ ಬೆಳೆಸಿಕೊಳ್ಳದೇ ಈ ದಿನದ ಕಾರ್ಯಕ್ರಮಕ್ಕೆ ನಿಜವಾದ ಅರ್ಥ ಬರಬೇಕಾದರೆ ಎಲ್ಲರೂ ಶಿಕ್ಷಣವನ್ನು ಹೊಂದಬೇಕು, ಸ್ವಾವಲಂಬನೆ ಹೊಂದಬೇಕು ಎಂದು ತಿಳಿಸಿದರು.
ನಂತರ ಕುಮಾರಿ ಶಿಲ್ಪಾ ನಾಯಿಕ ಮೇಲ್ವಿಚಾರಕಿ, ಇವರು ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಪ್ರತಿಜ್ಞಾ ವಿಧಿ ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಉಮಾಶ್ರೀ ಕೋಳಿ, ಕಾರ್ಮಿಕ ಅಧಿಕಾರಿಗಳು ಮಾತನಾಡಿ, ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣದ ವ್ಯಾಮೋಹಕ್ಕೆ ಒಳಗಾಗಿ ತಮ್ಮ ವಿದ್ಯಾರ್ಥಿ ಜೀವನ ವ್ಯರ್ಥ ಮಾಡಕೊಳ್ಳದೆ ಇರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.
ಇನ್ನೊರ್ವ ಮುಖ್ಯಅತಿಥಿಗಳಾಗಿ ಆಗಮಿಸಿದ ರಾಜಶೇಖರ ದೈವಾಡಿ, ನಿರ್ದೇಶಕರು, ಯುವ ಜನ ಮತ್ತು ಕ್ರೀಡಾ ಇಲಾಖೆ ರವರು ಮಾತನಾಡಿ, ಹೆಣ್ಣು ಮಕ್ಕಳ ಮಹತ್ವ ಕುರಿತು ಮಾಡನಾಡಿದರು.
ಶ್ರೀಮತಿ ಆರ್.ಎ. ದಿನ್ನಿ ಪೋಲಿಸ್ ಸಬ್ ಇನಸ್ಪೇಕ್ಟರ್, ಸಿ.ಕೆ ಸುರೇಶ ಕಾರ್ಯಕ್ರಮ ಸಂಯೋಜಕರು ಮಾತನಾಡಿದರು.
ಈ ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಿ.ಎಲ್.ಡಿ.ಇ (DU) ಎಂ.ಬಿ ಪಾಟೀಲ ಮೆಡಿಕಲ್ ಕಾಲೇಜು ಹಾಗೂ ಸಂಶೋದನಾ ಕೇಂದ್ರದ ಡಿ.ಜಿ.ಓ ಪ್ರೋಫೆಸರ್ ಹಾಗೂ ಮುಖ್ಯಸ್ಥರು ಡಾ: ಶೋಭಾ ಗುಡದಿನ್ನಿ (ಶಿರಗುರ) ರವರು ಪಿ.ಸಿ.&ಪಿಎನ್.ಡಿ.ಟಿ ಮತ್ತು ಎಂ.ಟಿ.ಪಿ ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು.
ಇನ್ನೊರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ: ಪರಶುರಾಮ ಹಿಟ್ನಳ್ಳಿ ಆರ.ಸಿ.ಎಚ್. ಅಧಿಕಾರಿಗಳು, ವಿಜಯಪುರ ರವರು Teenage Pregnency ಬಗ್ಗೆ ಉಪನ್ಯಾಸ ನೀಡಿದರು.
ಶ್ರೀಮತಿ ಟಿ.ಎಸ್.ಕೊಲ್ಹಾರ ಜಿಲ್ಲಾ ಸಮನ್ವಯ ಅಧಿಕಾರಿಗಳು, ಶಿಕ್ಷಣ ಇಲಾಖೆಯಿಂದ ಹೆಣ್ಣು ಮಕ್ಕಳಿಗಾಗಿ ಇರುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು.
ಶ್ರೀಮತಿ ಭಾರತಿ ಪಾಟೀಲ ಜಿಲ್ಲಾ ಮಿಷನ್ ಶಕ್ತಿ ಸಂಯೋಜಕರು, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಅನುಷ್ಠಾನ, ಗುರಿ, ಉದ್ದೇಶ, ಸಮನ್ವಯ ಇಲಾಖೆಗಳ ಕುರಿತು ಮತ್ತು ಮಿಷನ್ ಶಕ್ತಿ ಯೋಜನೆಯ ಕುರಿತು ಮಾಹಿತಿಯನ್ನು ತಿಳಿಸಿದರು.
ಶ್ರೀಮತಿ ನೀಲಮ್ಮ ಅರಳಗುಂಡಗಿ, ಆಪ್ತ ಸಮಾಲೋಚಕಿ ಇವರು, ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಸಹಾಯವಾಣಿ ಕುರಿತು ಮಾಹಿತಿಯನ್ನು ನೀಡಿದರು.
ಸದರಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಡಾ: ಆಶಾ ಆನಂದ ಕೆ ವೈದ್ಯಾಧಿಕಾರಿಗಳು, ಜಿಲ್ಲಾ ಸರ್ಕಾರಿ ಆಸ್ಪತ್ರೆ ವಿಜಯಪುರ, ಶ್ರೀಮತಿ ದೀಪಾ ಕಾಳೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ವಿಜಯಪುರ, ಶ್ರೀಮತಿ ದೀಪಾಕ್ಷಿ ಜಾನಕಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿಜಯಪುರ, ಜಯವಂತ ದುಲಾಡಿ, ಸಿ.ಪಿ.ಐ ಮಹಿಳಾ ಪೋಲಿಸ ಠಾಣೆ ವಿಜಯಪುರ, ಶ್ರೀಮತಿ ಬಸಮ್ಮ ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ ವಿಜಯಪುರ, ಮಹೇಶ ಮಾಳವಾಡೆಕರ, ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ವಿಜಯಪುರ, ಶ್ರೀಮತಿ ವಿಜಯಲಕ್ಷ್ಮೀ ಬಾಳಿ, ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರು, ವಿಜಯಪುರ, ಮುಕುಂದ ಝಳಕಿ, ನಿರ್ದೇಶಕರು, ರುಡಸೆಟ್ ಸಂಸ್ಥೆ ವಿಜಯಪುರ, ಎಸ್.ಸಿ ಮ್ಯಾಗೇರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವಿಜಯಪುರ ಗ್ರಾಮೀಣ, ಬಸವರಾಜ ಜಿಗಳೂರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ವಿಜಯಪುರ ನಗರ, ಶ್ರೀಮತಿ ಗೀತಾ ಗುತ್ತರಗಿಮಠ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇಂಡಿ, ಶ್ರೀಮತಿ ಶಿಲ್ಪಾ ಹಿರೇಮಠ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಬಸವನ ಬಾಗೇವಾಡಿ, ಸಾಹೆಬಗೌಡ ಜುಂಜರವಾಡ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಚಡಚಣ, ಶಿವಮೂರ್ತಿ ಕುಂಬಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮುದ್ದೇಬಿಹಾಳ, ಹಾಗೂ ಜಿಲ್ಲೆಯ ಎಲ್ಲಾ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಹಿರಿಯ/ಕಿರಿಯ ಅಂಗನವಾಡಿ ಮೇಲ್ವಿಚಾರಕಿಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲ ಸಿಬ್ಬಂಧಿ ವರ್ಗದವರು ಹಾಗೂ ಶಕ್ತಿ ಸದನ, ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಭಾರತಿ ಪಾಟೀಲ ಜಿಲ್ಲಾ ಮಿಷನ್ ಶಕ್ತಿ ಸಂಯೋಜಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಜಯಪುರ ಇವರು ನಿರೂಪಿಸಿದರು. ಶ್ರೀಮತಿ ಯಶೋಧಾ ಜೋಶಿ, Gender Specialist ಮಹಿಳಾ ಸಬಲೀರಣ ಘಟಕ ವಿಜಯಪುರ ಇವರು ವಂದನಾರ್ಪಣೆ ಹೇಳಿದರು.

