ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ನೂತನ ಕೈಗಾರಿಕಾ ತರಬೇತಿ ಕೇಂದ್ರ(ಐಟಿಐ) ಕಟ್ಟಡವನ್ನು ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಇಂಜನೀಯರ್ ನೀಲಕಂಠಯ್ಯ ಹಾಗೂ ತಂಡ ಪರಿವೀಕ್ಷಣೆ ನಡೆಸಿದರು.
ತಾಲ್ಲೂಕಿನ ಇಂಗಳಗಿಕ್ರಾಸ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ಕೈಗಾರಿಕಾ ತರಬೇತಿ ಕೇಂದ್ರದ ಕಟ್ಟಡಕ್ಕೆ ಮಂಗಳವಾರ ಸಿಬ್ಬಂದಿ ಹಾಗೂ ಗುತ್ತಿಗೆದಾರರೊಂದಿಗೆ ಆಗಮಿಸಿದ ಪರಿವೀಕ್ಷಣೆ ತಂಡ ೧೦೭೦ ಚ.ಮೀ ವಿಸ್ತಿರ್ಣ ಹೊಂದಿರುವ ೨.೩೦ಕೋಟಿ ಅಂದಾಜು ಮೊತ್ತದ ಕಟ್ಟಡದ ತಳಪಾಯ, ಪ್ರತಿಕೋಣೆ, ಶೌಚಾಲಯ ಸಹಿತ ನಿರ್ಮಾಣದಲ್ಲಿ ಉಪಯೋಗಿಸಿದ ಇಟ್ಟಿಗೆಗಳ ಕುರಿತು ಸಂಪೂರ್ಣ ಮಾಹಿತಿ ಪಡೆದು ಎಲ್ಲ ಕೋಠಡಿಗಳ ಸಹಿತ ಕಟ್ಟಡವನ್ನು ವಿಕ್ಷೀಸಿ ಗುಣಮಟ್ಟದ ಕುರಿತು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಕಿಟಕಿಗಳಿಗೆ ಅಳವಡಿಸಬೇಕಾದ ಮೆಶ್, ಮೇಲಿನ ಪ್ಯಾರಾಪೂಟ್, ಕಾಲಂಗಳಿಗೆ ಕಾಂಕ್ರೀಟ್ ತುಂಬುವುದು, ಹೆಡ್‌ರೂಮ್ ಮತ್ತು ಸುತ್ತಲಿನ ಕಂಪೌಂಡ್, ಗೇಟ್ ಅಳವಡಿಕೆಗಳು ಬಾಕಿ ಇದ್ದು ಅವುಗಳ ಅಗತ್ಯತೆಗಳಿಗೆ ಹೆಚ್ಚುವರಿ ಅನುದಾನ ಅವಶ್ಯಕತೆಯ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದರು.
ಗುತ್ತಿಗೆದಾರ ಸೋಮನಗೌಡ ಕರೇಕಲ್, ಪ್ರಾಚಾರ್ಯೆ ಶಗುಪ್ತಾ ಪರ್ವಿನ್ ಮಲ್ಲಾಡಕರ, ಎಂ.ಎಂ.ಚಟ್ಟೇರ, ಮಲ್ಲಿಕಾರ್ಜುನ ದೇವೂರ, ಬಸವರಾಜ ಹುಣಶ್ಯಾಳ ಇದ್ದರು.

