ಉದಯರಶ್ಮಿ ದಿನಪತ್ರಿಕೆ
ಚಡಚಣ: ಹಲವು ವರ್ಷಗಳಿಂದ ಪಟ್ಟಣದಲ್ಲಿ ಸಾರ್ವಜನಿಕರಿಗೆ ಸೇವೆ ನೀಡುತ್ತಿರುವ ಸಿದ್ಧಸಿರಿ ಬಹುರಾಜ್ಯ ಬಹುಉದ್ದೇಶ ಸಹಕಾರಿ ಸೊಸೈಟಿ ನಿ, ಇದೀಗ ನೂತನ ಮತ್ತು ವಿಶಾಲ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಸೋಮವಾರ ನಡೆದ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ವ್ಯಾಪಾರಸ್ಥರು, ರೈತರು ಹಾಗೂ ಸ್ಥಳೀಯ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡರು.
ಹೊಸ ಕಟ್ಟಡದ ಉದ್ಘಾಟನೆ
ನಿರ್ದೇಶಕರಾದ ಜಗದೀಶ್ ಕ್ಷತ್ರಿ
ನೆರವೇರಿಸಿದರು. ಅವರು ಮಾತನಾಡಿ, “ಸಿದ್ಧಸಿರಿ ಬ್ಯಾಂಕ್ ಹಲವು ವರ್ಷಗಳಿಂದ ಚಡಚಣದ ಆರ್ಥಿಕ ಬೆಳವಣಿಗೆಗೆ ದೊಡ್ಡ ಬೆಂಬಲವಾಗಿದೆ. ಈಗ ಹೊಸ ಕಟ್ಟಡದ ಮೂಲಕ ಗ್ರಾಹಕರಿಗೆ ಇನ್ನಷ್ಟು ಉತ್ತಮ, ಸುಗಮ ಮತ್ತು ಆಧುನಿಕ ಬ್ಯಾಂಕಿಂಗ್ ಸೇವೆಗಳು ದೊರೆಯಲಿವೆ,” ಎಂದು ಹೇಳಿದರು.
ವಲಯ ಅಧಿಕಾರಿ ಚಂದ್ರಕಾಂತ ಗಿಣ್ಣಿ ಅವರು ಮಾತನಾಡಿ, “ಹಳೆಯ ಕಟ್ಟಡದಲ್ಲಿ ಜಾಗದ ಅಭಾವ ಮತ್ತು ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯನ್ನು ಮನಗಂಡು ನಾವು ಈ ನೂತನ ಕಟ್ಟಡಕ್ಕೆ ಸ್ಥಳಾಂತರಿಸಿದ್ದೇವೆ. ಇಲ್ಲಿ ಡಿಜಿಟಲ್ ಬ್ಯಾಂಕಿಂಗ್, ಗೋಲ್ಡ್ ಲೋನ್ ಸೌಲಭ್ಯ, ಹೆಚ್ಚಿನ ಕೌಂಟರ್‌ಗಳು ಹಾಗೂ ಸುಧಾರಿತ ಗ್ರಾಹಕ ಸೇವಾ ವ್ಯವಸ್ಥೆಗಳನ್ನು ನಿರ್ಮಿಸಲಾಗಿದೆ,” ಎಂದು ವಿವರಿಸಿದರು.
ಸ್ಥಳೀಯ ವ್ಯಾಪಾರಸ್ಥರು ಮತ್ತು ರೈತರು ಹೊಸ ಕಟ್ಟಡದೊಂದಿಗೆ ಬ್ಯಾಂಕಿಂಗ್ ಕಾರ್ಯಗಳು ಇನ್ನಷ್ಟು ವೇಗವಾಗಿ, ಸುಗಮವಾಗಿ ನಡೆಯುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಖಾ ವ್ಯವಸ್ಥಾಪಕರು ಶಶಿಧರ್ ಬಸರಗಿ, ಬಸವರಾಜ ಹಕ್ಕೆ, ಅಮಿತ್ ಕುಲಕರ್ಣಿ, ಸಿದ್ದು ಮಠ, ಸತ್ಯಪ್ಪ ವಾಲಿಕಾರ, ಸಿದ್ದು ಶಿರಶ್ಯಾಡ, ಬಸವರಾಜ ಕೊನೇರಿ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು.

