ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಹೊನ್ನಳ್ಳಿ ಗ್ರಾಮದ ಗುರು ವೀರಘಂಟೈ ಮಡಿವಾಳೇಶ್ವರ ರಥೋತ್ಸವ ಅದ್ದೂರಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಭಕ್ತರು ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು, ಬೆಂಡು ಹಾರಿಸಿ ಭಕ್ತಿ ಸಮರ್ಪಿಸಿದರು. ಬೆಳಗ್ಗೆಯಿಂದ ಮಡಿವಾಳೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ ೬ಗಂಟೆಗೆ ಶ್ರೀಮಠದ ಗುರುಲಿಂಗಯ್ಶ ಸ್ವಾಮೀಜಿ ಅವರಿಂದ ಅಗ್ಗಿ ಪ್ರವೇಶ ನಡೆಯಿತು. ಬಳಿಕ ಹುಬ್ಬಳ್ಳಿಯ ಸಿದ್ಧಾರೂಢ ಮಹಾಸ್ವಾಮಿಗಳ ಪುರಾಣ ಮಹಾ ಮಂಗಲಗೊಂಡಿತು. ಪ್ರವಚನಕಾರ ಮಹಾದೇವಯ್ಶ ಶಾಸ್ತ್ರೀಜಿ ಹಿರೇಮಠ, ಅಯ್ಯಪ್ಪಯ್ಶ ಶ್ರೀಗಳು ಇದ್ದರು. ರಥೋತ್ಸವದಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ಪಾಲ್ಗೊಂಡಿದ್ದರು. ಕಲಕೇರಿ ಪೋಲಿಸ್ ಠಾಣೆಯ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

