ವೃಕ್ಷಥಾನ್ ಹೆರಿಟೇಜ್ ರನ್ | ವೃಕ್ಷ ಕಿಡ್ಸ್ ರನ್, ವಾಕ್ ಮತ್ತು ಶ್ರವಣದೋಷ ಮಕ್ಕಳ ಓಟ & ಮಾಧ್ಯಮ ಪ್ರತಿನಿಧಿಗಳ ಓಟ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವೃಕ್ಷಥಾನ್ ಹೆರಿಟೇಜ್ ರನ್-2025 ಅಂಗವಾಗಿ ಇಂದು ಶುಕ್ರವಾರ ನಗರದ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ ವೃಕ್ಷ ಕಿಡ್ಸ್ ರನ್, ವಾಕ್ ಮತ್ತು ಶ್ರವಣದೋಷ ಮಕ್ಕಳ ಓಟ ಹಾಗೂ ಮಾಧ್ಯಮ ಪ್ರತಿನಿಧಿಗಳ ಓಟಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಓಟಗಾರರು ಉತ್ಸಾಹದಿಂದ ಪಾಲ್ಗೋಂಡಿದ್ದಾರೆ.
ಬೆಳಿಗ್ಗೆ ಎಂಟು ಗಂಟೆಗೆ ಪ್ರಾರಂಭವಾದ ನಾನಾ ವಿಭಾಗಗಳ ಓಟಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ವೃಕ್ಷಥಾನ್ ಧ್ವಜ ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಬೆಳಿಗ್ಗೆ ಏಳು ಗಂಟೆಯಿಂದಲೇ ಜಿಲ್ಲಾ ಕ್ರೀಡಾಂಗಣದಲ್ಲಿ ಸೇರಿದ ಎಲ್. ಕೆ. ಜಿ, ಯು.ಕೆ.ಜಿ, ಮತ್ತು ಒಂದರಿಂದ 5ನೇ ತರಗತಿ ವರೆಗಿನ ಮಕ್ಕಳು, ವಾಕ್ ಮತ್ತು ಶ್ರವಣ ದೋಷ ಮಕ್ಕಳು ಅತ್ಯುತ್ಸಾಹದಿಂದ ಓಟದಲ್ಲಿ ಪಾಲ್ಗೋಂಡರು. ಅಷ್ಟೇ ಅಲ್ಲ, ಓಡುತ್ತಿದ್ದ ಮಕ್ಕಳಿಗೆ ಚಪ್ಪಾಳೆ ತಟ್ಟುವ ಮೂಲಕ, ಘೋಷಣೆ ಹಾಕುವ ಮೂಲಕ ಹುರುದುಂಬಿಸಿದರು.
ಇದೇ ವೇಳೆ, ವಾಕ್ ಮತ್ತು ಶ್ವರಣದೋಶ ಮಕ್ಕಳು ಕೂಡ ಓಟದಲ್ಲಿ ಪಾಲ್ಗೋಂಡು ಗಮನ ಸೆಳೆದರು. ಪತ್ರಕರ್ತರೂ ಕೂಡ ತಮ್ಮ ದೈನಂದಿನ ಜಂಜಾಟದಿಂದ ಸ್ವಲ್ಪ ವಿರಾಮ ಪಡೆದು ಓಟದಲ್ಲಿ ಪಾಲ್ಗೋಂಡಿದ್ದು ಗಮನ ಸೆಳೆಯಿತು.
ಓಟ ನಡೆದ ನಾನಾ ವಿಭಾಗಗಳು, ವಿಜೇತರ ಮತ್ತು ಶಾಲೆಯ ಹೆಸರು ಹಾಗೂ ಬಹುಮಾನದ ಮೊತ್ತದ ಮಾಹಿತಿ ಇಲ್ಲಿದೆ.
ವೃಕ್ಷ ಕಿಡ್ಸ್ ರನ್ 50 ಮೀ. ಓಟ(ನರ್ಸರಿ, ಎಲ್.ಕೆ.ಜಿ, ಯುಕೆಜಿ ಮತ್ತು ಒಂದನೇ ತರಗತಿ ಮಕ್ಕಳಿಗೆ)
ಬಾಲಕಿಯರ ವಿಭಾಗ
- ಶ್ರಾವ್ಯ ಸಿಂಗೆ- ಪ್ರಥಮ- ಜಿಎಂಪಿಎಸ್, ಕಂಬಾಗಿ – ರೂ. 2500
- ಭುವನೇಶ್ವರಿ ಅಂಗಡಿ- ದ್ವಿತೀಯ- ವಿಜಯಪುರ ನಗರದ ಸಾಯಿಚೇತನ ಶಾಲೆ- ರೂ. 1500
- ಪೂರ್ವಾ ಪಾಟೀಲ- ತೃತೀಯ- ವಿಜಯಪುರ ನಗರದ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆ- ರೂ. 1000
- ಹಿಬಾಫಾತಿಮಾ ಹೆಬ್ಬಾಳ ಮತ್ತು ಸುದೀಕ್ಷಾ ಗಂಗಾಧರ ಸಂಬಣ್ಣಿ- ಸಮಾಧಾನಕರ- ವಿಜಯಪುರ ನಗರದ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆ, ತಲಾ ರೂ. 500
ಬಾಲಕರ ವಿಭಾಗ - ಪ್ರೇಮಕುಮಾರ ಅಂಬಿ- ಪ್ರಥಮ- ವಿಜಯಪುರ ನಗರದ ಬಿದರಿ ಸ್ಕೂಲ್- ರೂ. 2500.
- ಅಫ್ತಾಬ್ ಎ. ಜೈನಾಪುರ- ದ್ವಿತೀಯ- ವಿಜಯಪುರ ಶಿಶುನಿಕೇತನ ಸೈನಿಕ ಶಾಲೆ- ರೂ. 1500
- ಪ್ರೀತಂ ರಾಠೋಡ- ತೃತೀಯ- ಕಗ್ಗೊಡ ಪ್ರಕೃತಿ ಪ್ರಾಥಮಿಕ ಮತ್ತು ಪ್ರೌಢಶಾಲೆ- ರೂ. 1000
- ವಿರಾಜ ಎ. ರಾಠೋಡ- ಸಮಾಧಾನಕರ- ಕಗ್ಗೊಡ ಪೃಕೃತಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಜೈದೇವ ಹೇರಲಗಿ- ವಿಜಯಪುರ ನಗರದ ಕಕ್ಷಾ ಸ್ಕೂಲ್, ಮೊನೇಶ ಝಿಂಗಾಡೆ- ವಿಜಯಪುರ ನಗರದ ಹನಿ ಕಿಡ್ಸ್ ಸ್ಕೂಲ್- ತಲಾ ರೂ. 500
200 ಮೀ. ಓಟ ಬಾಲಕಿಯರ ವಿಭಾಗ(2ನೇ ಮತ್ತು 3ನೇ ತರಗತಿ ಮಕ್ಕಳಿಗೆ)
ಬಾಲಕಿಯರ ವಿಭಾಗ - ಚಂದನಾ ಮಂಟೂರ- ಪ್ರಥಮ- ಕಂಬಾಗಿ ಪಿಎಂ ಶ್ರೀ ಸರಕಾರಿ ಎಂ.ಪಿ.ಎಸ್ ಶಾಲೆ- ರೂ. 5000
- ಸ್ಪೂರ್ತಿ ಜಂಬಗಿ- ದ್ವಿತೀಯ- ಕೆಂಗಲಗುತ್ತಿ ಸರಕಾರಿ ಜಿ.ಎಚ್.ಪಿ.ಎಸ್ ಶಾಲೆ- ರೂ. 3000
- ಆಯತ್ತ ರಾಠೋಡ- ತೃತೀಯ- ಕಗ್ಗೊಡ ಪ್ರಕೃತಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ- ರೂ. 2000
- ದೀಪಾ ಆರ್. ಬೇತ- ವಿಜಯಪುರ ನಗರದ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಸ್ಕೂಲ ಮತ್ತು ಜೋಯಾ ಮುಲ್ಲಾ- ವಿಜಯಪುರ ನಗರದ ಇಕ್ರಾ ಉರ್ದು ಪ್ರಾಥಮಿಕ ಶಾಲೆ ಹಾಗೂ ಶ್ರೀವಿದ್ಯಾ ಜೋಶಿ- ವಿಜಯಪುರ ನಗರದ ಶ್ರೀವಿದ್ಯಾ ಜೋಶಿ- ಸಮಾಧಾನಕರ- ತಲಾ ರೂ. 1000
ಬಾಲಕರ ವಿಭಾಗ - ಓಂಕಾರ ಮಣ್ಣೂರ- ಪ್ರಥಮ- ವಿಜಯಪುರ ನಗರದ ಆ್ಯಕ್ಟ್ ಶಾರದಾ ಪಬ್ಲಿಕ್ ಸ್ಕೂಲ್- ರೂ.5000
- ಸ್ಪರ್ಷ ಅಂಬಿಗೇರ- ದ್ವೀತಿಯ- ವಿಜಯಪುರ ನಗರದ ವೇದ ಅಕಾಡೆಮಿ- ರೂ.3000
- ವಿಷ್ಣು ಪರೀಟ- ತೃತೀಯ- ವಿಜಯಪುರ ನಗರದ ವೇದ ಅಕಾಡೆಮಿ- ರೂ. 2000
- ಪ್ರಥ್ವಿರಾಜ ಬಳ್ಳಾರಿ- ವಿಜಯಪುರ ನಗರದ ಆ್ಯಕ್ಟ್ ಶಾರದಾ ಪಬ್ಲಿಕ್ ಸ್ಕೂಲ್, ಕೇಶವ ಸಾತಿಹಾಳ- ಕಗ್ಗೊಡ ಪ್ರಕೃತಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಶ್ರೀವಾತ್ಸವ ಜೋಶಿ, ವಿಜಯಪುರ ನಗರದ ಶಮ್ಸ್ ಸ್ಕೂಲ್- ಸಮಾಧಾನಕರ- ತಲಾ ರೂ. 1000
400 ಮೀ. ಓಟ (4ನೇ ಮತ್ತು 5ನೇ ತರಗತಿ ಮಕ್ಕಳಿಗೆ)
ಬಾಲಕಿಯರ ವಿಭಾಗ - ಅಫ್ರೀನ್ ನದಾಪ- ಪ್ರಥಮ- ಜಿ.ಎಚ್.ಪಿ.ಎಸ್ ಕೆಂಗಲಗುತ್ತಿ- ರೂ. 10000
- ಲಕ್ಷ್ಮಿ ಹೊಸಮನಿ- ದ್ವಿತೀಯ- ಜಿ.ಎಚ್.ಪಿ.ಎಸ್ ಕೆಂಗಲಗುತ್ತಿ- ರೂ. 7500
- ಶ್ರುದ್ದಾ ಪವಾರ- ತೃತೀಯ- ಜಿ.ಎಚ್.ಪಿ.ಎಸ್ ಕೆಂಗಲಗುತ್ತಿ- ರೂ. 5000
- ಸೃಷ್ಠಿ ಕುಂದರಗಿ- ಸಮಾಧಾನಕರ- ಕಂಬಾಗಿಯ ಪಿಎಂ ಶ್ರೀ ಸರಕಾರಿ ಎಂ.ಪಿ.ಎಸ್ – ರೂ. 2500
- ಜಿತಾಂಕ್ಷಾ ಶಹಾ- ವಿಜಯಪುರ ಕಕ್ಷಾ ಪ್ರಿ ಪಬ್ಲಿಕ್ ಸ್ಕೂಲ್- ರೂ. 2500
ಬಾಲಕರ ವಿಭಾಗ - ಅಮೀತ ಚವ್ಹಾಣ- ಪ್ರಥಮ- ವಿಜಯಪುರ ನಗರದ ಕನ್ನಡ ಗಂಡು ಮಕ್ಕಳ ಶಾಲೆ ಸಂಖ್ಯೆ- 24- ರೂ. 10000
- ವಿವೇಕ ಬೈಚಬಾಳ- ದ್ವಿತೀಯ- ವಿಜಯಪುರ ನಗರದ ವೇದ ಅಕಾಡೆಮಿ- ದ್ವಿತೀಯ- ರೂ. 7500
- ವಿಠ್ಠಲ ಹಾಲಳ್ಳಿ- ತೃತೀಯ- ಕಂಬಾಗಿ ಪಿಎಂ ಶ್ರೀ ಸರಕಾರಿ ಎಂಪಿಎಸ್- ರೂ. 5000
- ಕೃಷ್ಣಕುಮಾರ ಹಜೇರಿ-ವಿಜಯಪುರ ನಗರದ ವಿ. ಬಿ. ದರಬಾರ ಹೈಸ್ಕೂಲ್ ಮತ್ತು ಫಾರೂಖ ದಳವಾರ- ಜಿ.ಎಚ್.ಪಿ.ಎಸ್ ಕೆಂಗಲಗುತ್ತಿ- ಸಮಾಧಾನಕರ- ತಲಾ ರೂ. 2500
ವಾಕ್ ಮತ್ರು ಶ್ರವಣದೊಷ ಮಕ್ಕಳಿಗಾಗಿ 400 ಮೀ. ಓಟ
ಬಾಲಕಿಯರ ವಿಭಾಗ - ಅಕ್ಷತಾ ಗೊರಡ- ಪ್ರಥಮ- ವಿಜಯಪುರ ನಗರದ ಸ್ವಪ್ನಾ ಶ್ರವಣದೋಷ ಮಕ್ಕಳ ಪ್ರಾಥಮಿಕ ಮತ್ತು ಪ್ರೌಢ ವಸತಿ ಶಾಲೆ- ರೂ. 10000
- ಅನಸೂಯ ಚರಾಟೆ- ದ್ವಿತೀಯ- ವಿಜಯಪುರ ನಗರದ ಸ್ವಪ್ನಾ ಶ್ರವಣದೋಷ ಮಕ್ಕಳ ಪ್ರಾಥಮಿಕ ಮತ್ತು ಪ್ರೌಢ ವಸತಿ ಶಾಲೆ- ರೂ. 5000
- ಸಾವಿತ್ರಿ ಗರಸಂಗಿ- ತೃತೀಯ- ವಿಜಯಪುರ ನಗರದ ಸ್ವಪ್ನಾ ಶ್ರವಣದೋಷ ಮಕ್ಕಳ ಪ್ರಾಥಮಿಕ ಮತ್ತು ಪ್ರೌಢ ವಸತಿ ಶಾಲೆ- ರೂ. 2500
- ತೇಜಸ್ವಿನಿ ಕುಂಟೋಜಿ ಮತ್ತು ಸೃಷ್ಠಿ ಹಯ್ಯಾಳ- ಸಮಾಧಾನಕರ- ವಿಜಯಪುರ ನಗರದ ಸ್ವಪ್ನಾ ಶ್ರವಣದೋಷ ಮಕ್ಕಳ ಪ್ರಾಥಮಿಕ ಮತ್ತು ಪ್ರೌಢ ವಸತಿ ಶಾಲೆ- ರೂ. 1000
ಬಾಲಕರ ವಿಭಾಗ - ಆದಿತ್ಯ ಹರಿಜನ- ಪ್ರಥಮ- ವಿಜಯಪುರ ನಗರದ ಸ್ವಪ್ನಾ ಶ್ರವಣದೋಷ ಮಕ್ಕಳ ಪ್ರಾಥಮಿಕ ಮತ್ತು ಪ್ರೌಢ ವಸತಿ ಶಾಲೆ- ರೂ. 10000
- ಮುತ್ತು ಎಮ್ಮಿ- ದ್ವಿತೀಯ- ವಿಜಯಪುರ ನಗರದ ಸ್ವಪ್ನಾ ಶ್ರವಣದೋಷ ಮಕ್ಕಳ ಪ್ರಾಥಮಿಕ ಮತ್ತು ಪ್ರೌಢ ವಸತಿ ಶಾಲೆ- ರೂ. 5000
- ಹರೀಶ ಶೆತವಾಜ- ತೃತೀಯ- ವಿಜಯಪುರ ಸ್ವಪ್ನಾ ಶ್ರವಣದೋಷ ಮಕ್ಕಳ ಪ್ರಾಥಮಿಕ ಮತ್ತು ಪ್ರೌಢ ವಸತಿ ಶಾಲೆ- ರೂ. 2500
- ವಿನೋದ ರಾಠೋಡ ಮತ್ತು ಸ್ವಯಂ ಅಂಬಿ- ಸಮಾಧಾನಕರ- ವಿಜಯಪುರ ನಗರದ ಸ್ವಪ್ನಾ ಶ್ರವಣದೋಷ ಮಕ್ಕಳ ಪ್ರಾಥಮಿಕ ಮತ್ತು ಪ್ರೌಢ ವಸತಿ ಶಾಲೆ- ರೂ. 1000
ಮಾಧ್ಯಮ ಪ್ರತಿನಿಧಿಗಳಿಗಾಗಿ 800 ಮೀ. ಹ್ಯಾಪಿ ರನ್ - ಹಣಮಂತ ಕರಕೂರ- ಪ್ರಥಮ- ಟಿವಿ9 ಕನ್ನಡ- ಪ್ರಥಮ
- ಸಿದ್ದಣ್ಣ ವಿಜಾಪುರ- ದ್ವಿತೀಯ- ಗಡಿನಾಡ ಕ್ರಾಂತಿ
- ಗುರು ಲೋಕುರಿ- ತೃತೀಯ- ವಿಜಯವಾಣಿ.
30ಕ್ಕೂ ಹೆಚ್ಚು ಜನ ದೈಹಿಕ ಶಿಕ್ಷಕರು ಈ ಓಟವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ವೃಕ್ಷಥಾನ್ ಹೆರಿಟೆಜ್ ರನ್-2025 ಸಮಿತಿಯ ಡಾ. ಮಹಾಂತೇಶ ಬಿರಾದಾರ, ಸಂಕೇತ ಬಗಲಿ, ಶಿವು ಕುಂಬಾರ, ರಮೇಶ ಬಿರಾದಾರ, ಅಮೀತ ಬಿರಾದಾರ, ಅಸ್ಪಾಕ ಮನಗೂಳಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

