ವಿಜಯಪುರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸ್ಥಾಪನೆಯ ೫೦ನೇ ವರ್ಷದ ಪರಿಪೂರ್ಣತೆಯ ಅಂಗವಾಗಿ ಈ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪ್ರಸಿದ್ಧ ದಿವಟಗೇರಿ ಓಣಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸ್ಥಾಪನೆಯ ೫೦ನೇ ವರ್ಷದ ಪರಿಪೂರ್ಣತೆಯ ಅಂಗವಾಗಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಡಿ.೫ ರಿಂದ ಮೂರು ದಿನಗಳ ಕಾಲ ಶ್ರದ್ಧಾ-ಭಕ್ತಿಯಿಂದ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ ಎಂದು ಶ್ರೀ ರಾಘವೇಂದ್ರ ಮಠದ ಆಡಳಿತ ಮಂಡಳಿ ಅಧ್ಯಕ್ಷ, ವಿಡಿಎ ಮಾಜಿ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಸುವರ್ಣ ಮಹೋತ್ಸವದಂಗವಾಗಿ ದರಬಾರ ಶಾಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದರು.
ಡಿ. ೫ ರಂದು ಸಂಜೆ ೬ ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ ೭ ಕ್ಕೆ ಮೈಸೂರಿನ ರಾಮಚಂದ್ರಾಚಾರ್ಯ ಅವರಿಂದ ದಾಸವಾಣಿ, ರಾತ್ರಿ ೮.೩೦ ಕ್ಕೆ ಪಂ. ಮಧ್ವಾಚಾರ್ಯ ಮೊಕಾಶಿ ಅವರಿಂದ ಆಶೀರ್ವಚನ ನಡೆಯಲಿದೆ. ಡಿ.೬ ರಂದು ಸಂಜೆ ೬ ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದ್ದು, ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳು ಮತ್ತು ಕೊಡಲಿ ಮಠದ ಶ್ರೀ ರಘು ವಿಜಯತೀರ್ಥ ಶ್ರೀಪಾದಂಗಳು ಸಾನ್ನಿಧ್ಯ ವಹಿಸುವರು. ಅದೇ ದಿನ ಸಂಜೆ ೭ಕ್ಕೆ ಕಲಬುರ್ಗಿಯ ವಿದ್ಯಾಧೀಶ ಅವರಿಂದ ದಾಸವಾಣಿ ಕಾರ್ಯಕ್ರಮ, ಸಂಜೆ ೮ಕ್ಕೆ ಪಂ. ಡಾ. ಸತ್ಯಧ್ಯಾನಾಚಾರ್ಯ ಕಟ್ಟಿ ಅವರಿಂದ ಪ್ರವಚನ ಜರುಗಲಿದೆ ಎಂದರು. ನಂತರ ೮.೩೦ಕ್ಕೆ ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳು ಮತ್ತುನ ಕೊಡಲಿ ಮಠದ ಶ್ರೀ ರಘುವಿಜಯತೀರ್ಥ ಶ್ರೀಪಾದಂಗಳವರಿಂದ ಅನುಗ್ರಹ ಸಂದೇಶ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಟ್ರಸ್ಟ್ನ ಉಸ್ತುವಾರಿ ಗೋಪಾಲ ಜೀ, ಸಂಸದ ರಮೇಶ ಜಿಗಜಿಣಗಿ, ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ನಿಕಟಪೂರ್ವ ಅಧ್ಯಕ್ಷ ಅಶೋಕ ಹಾರನಹಳ್ಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಆರ್‌ಎಸ್‌ಎಸ್ ಪ್ರಮುಖ ಅರವಿಂದರಾವ್ ದೇಶಪಾಂಡೆ, ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ, ಜಲಸಂಪನ್ಮೂಲ ಇಲಾಖೆಯ ತಾಂತ್ರಿಕ ಸಲಹೆಗಾರ ಅನೀಲಕುಮಾರ ಮರಳಿ, ವಿ.ಪ. ಸದಸ್ಯರಾದ ಹಣಮಂತ ನಿರಾಣಿ, ಸುನೀಲಗೌಡ ಪಾಟೀಲ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿ.ಪ. ಮಾಜಿ ಸದಸ್ಯ ಅರುಣ ಶಹಾಪುರ ಹಾಗೂ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಉಪಸ್ಥಿತಿ ವಹಿಸುವರು.
ಸಾಂಸ್ಕೃತಿಕ ವೈಭವ
ಸುವರ್ಣ ಮಹೋತ್ಸವದ ಅಂಗವಾಗಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಜರುಗಲಿದ್ದು, ಡಿ. ೭ ರಂದು ಸಂಜೆ ೬ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಸಂಜೆ ೭ಕ್ಕೆ ಮುಂಬಯಿ ಸತ್ಯಧಾನ ವಿದ್ಯಾಪೀಠದ ಕುಲಪತಿ ಪಂ. ಡಾ. ವಿದ್ಯಾಸಿಂಹಾಚಾರ್ಯ ಮಾಹುಲಿ ಪ್ರವಚನ ನೀಡುವರು, ಸಂಜೆ ೭.೩೦ಕ್ಕೆ ಗಣ್ಯರಿಗೆ ಸನ್ಮಾನ ಹಾಗೂ ಆರ್ಶೀವಚನ, ೮.೩೦ಕ್ಕೆ ಸೇವಾಕರ್ತರಿಗೆ ಸನ್ಮಾನ ಮತ್ತು ೮.೩೦ಕ್ಕೆ ಉತ್ತರಾದಿಮಠದ ಶ್ರೀ ೧೦೦೮ ಶ್ರೀಸತ್ಯಾತ್ಮತೀರ್ಥ ಪಾದಂಗಳವರಿAದ ಅನುಗ್ರಹ ಸಂದೇಶ ನೆರವೇರಲಿದೆ.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ವಿ.ಪ. ಸದಸ್ಯ ಪಿ.ಎಚ್. ಪೂಜಾರ, ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ, ಶಾಸಕ ವಿಠಲ ಕಟಕಧೊಂಡ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿಕಟಪೂರ್ವ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಮಾಜಿ ಶಾಸಕ ನಿರ್ಮಲಕುಮಾರ ಸುರಾನಾ, ಸಿನ್‌ಫಿನಿಟಿ ಮ್ಯಾನೇಜಮೆಂಟ್ ಕನ್ಸಲ್ಟೆಂಟ್‌ನ ಮುಖ್ಯಸ್ಥ ದಿಲೀಪ ಸತ್ಯ, ಮೇಯರ್ ಎಂ.ಎಸ್. ಕರಡಿ ಹಾಗೂ ಪಾಲಿಕೆ ಸದಸ್ಯ ಕಿರಣ ಪಾಟೀಲ ಆಗಮಿಸುವರು. ನಂತರ ಕೊನೆಯಲ್ಲಿ ದಿಲೀಪ ಸತ್ಯ ಅವರಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪ್ ವಿತರಣೆ ನಡೆಯಲಿದೆ ಎಂದು ವಿವರಿಸಿದರು.
ಪ್ರಮುಖರಾದ ಕೃಷ್ಣಾ ಗುನ್ನಾಳಕರ, ಶ್ರೀನಿವಾಸ ಬೇಟಗೇರಿ, ಉಪೇಂದ್ರ ದೇಸಾಯಿ, ವಿಕಾಸ ಪದಕಿ, ವಿಜಯ ಜೋಶಿ, ವಿಲಾಸ ಕುಲಕರ್ಣಿ, ವಾಮನ ಕುಲಕರ್ಣಿ, ಜ್ಞಾನೇಶ್ವರ ಕುಲಕರ್ಣಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

