ಉದಯರಶ್ಮಿ ದಿನಪತ್ರಿಕೆ
ಇಂಡಿ: ಶ್ರೀ ಶಾಂತೇಶ್ವರ ಜಾತ್ರೆ ನಿಮಿತ್ಯ ಇಂದು ಬೆಳಗಿನ ಜಾವ ೫ ಗಂಟೆಗೆ ಕಳ್ಳಿಮಠದಿಂದ ನಂದಿಕೋಲುಗಳ ಭವ್ಯ ಮೆರವಣೆಗೆ ನಡೆಯಿತು.
ಮೆರವಣೆಗೆಯಲ್ಲಿ ಬಾಜಾ ಬೆಂಜೋ. ಕರಡಿ ಕುಣಿತ, ನವೀಲು ಕುಣಿತ, ಪುರವಂತರ ಕುಣಿತ ಸೇರಿದಂತೆ ಆಕರ್ಷಕ ಮೆರವಣೆಗೆ ನಡೆಯಿತು.
ಮೆರವಣೆಗೆ ಕಳ್ಳಿಮಠದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಗುಡಿಗೆ ತಲುಪಿತು.
ಬಾರಾ ಬಲೂತಿ ಚಾಜದವರು, ಪಟ್ಟಣದ ಗೌಡರು,ನಾಡಗೌಡರು, ದೇಶಪಾಂಡೆಯವರು, ಬಗಲಿಯವರು, ದೇವಾಲಯದ ಅರ್ಚಕರು, ಪುರವಂತರು, ಕಂಬಾರರು, ಅಕ್ಕಸಾಲಿಗರು, ಬಡಿಗರು, ಕಂಬಾರರು, ಅಗಸರು, ಮೇತ್ರಿಯವರು ಹೀಗೆ ಹನ್ನೆರಡು ಚಾಜದವರು ಕೂಡಿಕೊಂಡು ಅಪಾರ ಭಕ್ತ ಸಮೂಹದೊಂದಿಗೆ ಮೆರವಣೆಗೆಯಲ್ಲಿ ಪಾಲ್ಗೊಂಡಿದ್ದರು.
ಪುರವಂತರಾದ ವಿಠ್ಠಲ ಅಹಿರಸಂಗ, ಬಸವರಾಜ ಬಳೂರಗಿ, ವೀರಣ್ಣಾ ಬಡಿಗೇರ, ಮಲ್ಲಿಕಾರ್ಜುನ ಬಡಿಗೇರ, ಸಂಗಣ್ಣ ಶಾಬಾದಿ, ಸಿದ್ರಾಮ ಪತ್ತಾರ, ಶರಣಪ್ಪ ಮಲಘಾಣ, ನಿಂಗಣ್ಣ ಬಡಿಗೇರ, ಚೆನ್ನವೀರಯ್ಯ ಹಿರೇಮಠ ಪುರವಂತರ ಕುಣಿತದಲ್ಲಿ ಶಸ್ತç ಪವಾಡ ಮಾಡಿದರು. ಗಲ್ಲಕ್ಕೆ ಒಂದು ತುದಿಯಿಂದ ಶಸ್ತç ಹಚ್ಚಿ ಇನ್ನೊಂದು ತುದಿಗೆ ಶಸ್ತç ತೆಗೆಯುವದು ದೃಶ್ಯ ಜನಸಾಮಾನ್ಯರನ್ನು ಆಕರ್ಷಿಸಿತು.
ವಾದ್ಯ ವೈಭವಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ಮುಖಾಂತರ ಗುಡಿಯ ಮಹಾದ್ವಾರಕ್ಕೆ ಬಂದಿತು. ನಂತರ ಬೇಡಿಕೊಂಡ ಭಕ್ತರು ಸಿಡಿಗಾಯಿ ಒಡೆದರು. ಪುರವಂತರು ಆಡುವದು ಆಮೇಲೆ ಬಾಸಿಂಗ ನಂದಿಕೋಲು ಪಲ್ಲಕ್ಕಿ ಗುಡಿಯ ಸುತ್ತ ಪ್ರದಕ್ಷಣೆ ನಡೆದವು. ಬೆಳಿಗ್ಗೆಯಿಂದ ಶ್ರೀ ಸದ್ಗುರು ಶಾಂತೇಶ್ವರ ಕೃಷಿ ಉತ್ಪನ ಮಾರುಕಟ್ಟೆ ಇವರಿಂದ ಪ್ರಸಾದ ಸೇವೆ ನಡೆಯಿತು. ಶ್ರೀ ಶಾಂತೇಶ್ವರ ಕಾಲೇಜು ಮೈದಾನದಲ್ಲಿ ಜಂಗಿ ನಿಕಾಲಿ ಕುಸ್ತಿಗಳು ನಡೆದವು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ , ದೇವಸ್ಥಾನ ಸಮಿತಿಯ ಅಧ್ಯಕ್ಷ ಕಾಸುಗೌಡ ಬಿರಾದಾರ, ಸಿದ್ದಲಿಂಗ ಹಂಜಗಿ, ಶ್ರೀಕಾಂತ ಕುಡಿಗನೂರ , ಅಶೋಕ ಪಾಟೀಲ, ಈರಣ್ಣ ಮೈದರಗಿ, ರಾಜು ಹದಗಲ್ಲ, ಸೇರಿದಂತೆ ದೇವಸ್ಥಾನ ಸಮಿತಿ ಸದಸ್ಯರು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಸ್ಪಂದನಾ ಸುಪರ್ ಸ್ಪೇಷಾಲಿಟಿ ಆಸ್ಪತ್ರೆ ಇವರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಬಿ.ಪಿ, ಸುಗರ್, ಮಂಡಿನೋವು, ಹಾಗೂ ಇನ್ನಿತರ ರೋಗಗಳಿಗೆ ಸೂಕ್ತ ಪರಿಹಾರ ಹಾಗೂ ಚಿಕಿತ್ಸೆ ನೀಡಲಾಯಿತು.

