ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಯರನಾಳ-ಉಕ್ಕಲಿ ವಿರಕ್ತಮಠದ ಗುರುಸಂಗನಬಸವ ಸ್ವಾಮೀಜಿ, ದಿ. ಸಿದ್ದಪ್ಪ ಮಲ್ಲಪ್ಪ ಗುಂದಗಿ ಸ್ಮರಣಾರ್ಥ, ದಿ. ಬಸವರಾಜ ಓಂಕಾರಪ್ಪ ಕುಂಟೋಜಿ ಸ್ಮರಣಾರ್ಥ ಡಿ. 2 ರಂದು ಬೆಳಗ್ಗೆ 10.30 ಗಂಟೆಗೆ ಶರಣ ಸಾಹಿತ್ಯ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮವನ್ನು ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸುವರು. ಅಧ್ಯಕ್ಷತೆ ಮಹಾವಿದ್ಯಾವಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ದತ್ತಿ ದಾನಿ ಗಂಗಾಧರ ಕುಂಟೋಜಿ, ಶಾಂತಾ ಬಿರಾದಾರ, ದತ್ತಿ ಸಂಚಾಲಕ ಬಿ.ವ್ಹಿ.ಚಕ್ರಮನಿ ಆಗಮಿಸುವರು. ಶಿಕ್ಷಣ ಸಂಯೋಜಕ ಷಣ್ಮುಖಪ್ಪ ಅಂಬಲಿ ಉಪನ್ಯಾಸ ನೀಡುವರು ಎಂದು ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಶಿವು ಮಡಿಕೇಶ್ವರ ತಿಳಿಸಿದ್ದಾರೆ.
