ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ವಾರ್ಡುಗಳ ಮನೆಗಳ ಗಣಕೀಕೃತ ಉತಾರೆ ನೀಡಲು ಕ್ರಮವಹಿಸುವಂತೆ ಆಗ್ರಹಿಸಿ ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿದ ಕರವೇ ಕಾರ್ಯಕರ್ತರು ಮನೆಗಳ ಉತಾರೆ ಒದಗಿಸುವಲ್ಲಿ ಆದ ಸಮಸ್ಯೆಗಳ ಕುರಿತು ಗಮನ ಸೆಳೆದರು.
ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ರಹಿಮಾನ ಕಣಕಾಲ ಮಾತನಾಡಿ, ಪಟ್ಟಣದ ೫,೮,೧೫, ೧೬, ೧೭ ವಾರ್ಡುಗಳ ಮನೆಗಳಿಗೆ ಗಣಕೀಕೃತ ಉತಾರೆ ನೀಡುತ್ತಿಲ್ಲ. ಈ ಬಗ್ಗೆ ಪಟ್ಟಣ ಪಂಚಾಯಿತಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಯಾವ ಕಾರಣದಿಂದ ಉತಾರೆ ನೀಡುತ್ತಿಲ್ಲ ಎಂಬುವುದೇ ಅರ್ಥವಾಗಿಲ್ಲ. ಆದ್ದರಿಂದ ಕೂಡಲೇ ತಹಶೀಲ್ದಾರರು ಉತಾರೆ ನೀಡಲು ಕ್ರಮ ವಹಿಸಬೇಕೆಂದು ಆಗ್ರಹಿಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ, ಪಂಚಾಯಿತಿ ಮುಖ್ಯಾಧಿಕಾರಿಗಳೊಂದಿಗೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕರವೇ ಘಟಕದ ಉಪಾಧ್ಯಕ್ಷ ನಾಗೇಶ ಕಮತಗಿ, ಪ್ರಧಾನಕಾರ್ಯದರ್ಶಿ ಅಶೋಕ ಗೊಲ್ಲರ, ಭೀಮನಗೌಡ ನಾಗರಾಳ, ಶೇಖಸಾಬ್ ಹವಾಲ್ದಾರ, ಹಸನ್ ಹರನಾಳ, ಹುಸೇನ್ ಗೌಂಡಿ, ದಿಲೀಪ ದೊಡ್ಡಮನಿ, ಪ್ರಕಾಶ ಮಣೂರ, ಮೈಬೂಬ್ ದಫೇದಾರ ಇದ್ದರು.

