ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ತಾಲ್ಲೂಕಿನ ಆರೇಶಂಕರ ಕೆರೆಯಲ್ಲಿ ಭಾನುವಾರ ಪತ್ತೆಯಾದ ದೊಡ್ಡ ಗಾತ್ರದ ಮೊಸಳೆಯನ್ನು ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಸೇರಿ ಹಿಡಿದು ಸೇರಿಸಿದ್ದಾರೆ.
ವಿಜಯಪುರ ಜಿಲ್ಲೆಯ ಎರಡನೇ ಅತಿ ದೊಡ್ಡ ಕೆರೆಯಾಗಿರುವ ಆರೇಶಂಕರ ಕೆರೆಯಲ್ಲಿ ಮೊಸಳೆ ಸಂತತಿ ಹೆಚ್ಚಿದ್ದು ಭಾನುವಾರ ಒಂದು ದೊಡ್ಡ ಮೊಸಳೆ ರಸ್ತೆಗೆ ಬಂದಿದೆ.
ರಾತ್ರಿ ಒಂಬತ್ತು ಗಂಟೆಗೆ ದಾರಿಯಲ್ಲಿ ಹೋಗುವವರು ಮೊಸಳೆ ನೋಡಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.
ಗ್ರಾಮಸ್ಥರು ಧಾವಿಸಿ ಬಂದು ಮೊಸಳೆ ಇರುವ ಜಾಗವನ್ನು ಸುತ್ತುವರಿದು ಮೊಸಳೆ ಬೇರೆ ಕಡೆ ಎಲ್ಲೂ ಹೋಗದ ಹಾಗೆ ಸುತ್ತುವರೆದು ಕಾಯ್ದರು.
ಮುದ್ದೇಬಿಹಾಳ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮೊಸಳೆ ರಕ್ಷಕ ನಾಗೇಶ್ ಮೋಪಗಾರ ಮೊಸಳೆ ಇರುವ ಸ್ಥಳಕ್ಕೆ ಭೇಟಿ ನೀಡಿ ಊರಿನ ಗ್ರಾಮಸ್ಥರ ಸಹಕಾರದೊಂದಿಗೆ ಮೊಸಳೆ ಹಿಡಿಯುವುವಲ್ಲಿ ಯಶಸ್ವಿಯಾಗಿದ್ದಾರೆ. ಮೊಸಳೆಯನ್ನು ಕೃಷ್ಣಾ ನದಿ ಹಿನ್ನೀರಿನಲ್ಲಿ ಬಿಡಲಾಗಿದೆ .
ಶಾಸಕರ ವಿರುದ್ಧ ಹಾಗೂ ಗ್ರಾ.ಪಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ:
ಸುಮಾರು ಎರಡು ಮೂರು ವರ್ಷಗಳಿಂದ ಕುಡಿಯುವ ನೀರು ಸರಬರಾಜು ಯೋಜನೆ ಇರುವುದರಿಂದ ಕೆರೆ ತುಂಬುವ ಯೋಜನೆಯಿಂದ ಆರೇಶಂಕರ ಕೆರೆಗೆ ನೀರನ್ನು ನಾಲೆಯ ಮೂಲಕ ನೀರು ತುಂಬಿಸಲಾಗುತ್ತಿದ್ದೆ ಕೆರೆ ತುಂಬಿದ್ದು ತುಂಬಿದ ಹಾಗೆ ಇದ್ದಿದ್ದರಿಂದ ಮೊಸಳೆಗೆಳ ಸಂತತಿ ಹೆಚ್ಚಾಗಿದೆ ಆದರಿಂದ ಯಾವ ಅಧಿಕಾರಿಗಳೂ ಇದರ ಬಗ್ಗೆ ಗಮನಹರಿಸಿಲ್ಲ? ಮೊಸಳೆ ಗಳಿಸಿವೆ ಎಂದು ನಾಮಫಲಕ ಕೂಡ ಅಳವಡಿಸಿಲ್ಲ? ಗ್ರಾಮಸ್ಥರ ಜೀವದ ಬಗ್ಗೆ ಕಾಳಜಿ ಇಲ್ಲಾ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆರೇಶಂಕರ ಗ್ರಾಮದ ಜನರಿಗೆ ಕೆರೆ ನೀರು ಇರುವುದರಿಂದ ಜನ ಜಾನುವಾರುಗಳಿಗೆ ನೀರು ಕುಡಿಸಲು ಕೆರೆ ದಂಡೆಗೆ ಹೋಗುತ್ತಾರೆ, ಹಬ್ಬ ಹರಿದಿನಗಳಲ್ಲಿ ಹಾಸಿಗೆಯನ್ನು ಸ್ವಚ್ಚತೆ ಗೆ ಕೆರೆ ಕಡೆ ಹೋಗುವುದರಿಂದ ಯಾವುದೇ ರೀತಿಯ ಭದ್ರತೆ ಇಲ್ಲಾ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ್ ಅವರು ಈ ಆರೇಶಂಕರ ಗ್ರಾಮಸ್ಥರ ಕಷ್ಟವನ್ನು ಅರಿತು ಕೂಡಲೇ ಎಚ್ಚೆತ್ತುಕೊಂಡು ಗ್ರಾಮಸ್ಥರ ಜೀವ ಹಾನಿ ಆಗದಂತೆ ಕ್ರಮವಹಿಸಬೇಕು ಎಂದು ಬಸವರಾಜ ಸಜ್ಜನ ಹಾಗೂ ಗ್ರಾಮಸ್ಥರು.
ಈ ಸಂದರ್ಭದಲ್ಲಿ, ವಲಯ ಅರಣ್ಯ ಅಧಿಕಾರಿ ಬಸನಗೌಡ ಬಿರಾದಾರ, ಈಶ್ವರಯ್ಯ ಹೀರೆಮಠ ಗಸ್ತು ಅರಣ್ಯ ಪಾಲಕರು , ಮುತ್ತು ಮಾದಾರ, ಮೊಸಳೆ ರಕ್ಷಕ ನಾಗೇಶ್ ಮೋಪಗಾರ . ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು

