ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಮದರ್ ಥೆರೆಸ್ಸಾ ವಿಶ್ವವಿದ್ಯಾಲಯ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗೌರವ ಡಾಕ್ಟರೆಟ್ ಪ್ರದವಿ ಪ್ರಧಾನ ಕಾರ್ಯಕ್ರಮದಲ್ಲಿ ನಗರದ ಇಂಡಿಯನ್ ನ್ಯಾಶನಲ್ ಟ್ರೇಡ್ ಯೂನಿಯನ್ ಕಾಂಗ್ರೇಸ್ ಜಿಲ್ಲಾಧ್ಯಕ್ಷ ತೌಫಿಕ್ ಎಂ. ಪಾರ್ಥನಳ್ಳಿ ಅವರ ಸಮಾಜ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೆಟ್ ಪದವಿಯನ್ನು ನೀಡಿ ಗೌರವಿಸಿದೆ.
ಈ ಸಂದರ್ಭದಲ್ಲಿ ಎಎಂಟಿಯೂ ಚೆರಮನ್/ಕರ್ನಾಟಕ ಮ್ಯಾನೇಜ್‌ಮೆಂಟ ಅಸೋಸಿಯೇಶನ್ ವಿವಿ ರಜಿಸ್ಟರ್ ಡಾ.ವಿ.ಆರ್. ರವಿಕುಮಾರ, ಸಿಂಡಿಕೇಟ್ ಸದಸ್ಯ ಡಾ.ರಾಜಣ್ಣ ಸೇರಿದಂತೆ ಇತರರಿದ್ದರು. ಹಾಗೂ ಜಮಖಂಡಿ ಕಾಂಗ್ರೇಸ್ ಯುವ ಘಟಕದ ಅಧ್ಯಕ್ಷ ಹನಮಂತ ತೇಲಿ ಅಭಿನಂದನೆ ಸಲ್ಲಿಸಿದರು.

