ವಿಜಯಪುರ: ನಗರದಿಂದ ಅಲಿಯಾಬಾದ ಎಲ್.ಟಿ.ನಂ.೧, ಎಲ್.ಟಿ.ನಂ.೨ ಮತ್ತು ಗೋಲ್ಡನ್ ದೊಡ್ಡಿಯವರೆಗೆ ನೂತನವಾಗಿ ಬಸ್ ಚಾಲನೆಯನ್ನು ಶಾಸಕ ವಿಠ್ಠಲ ಕಟಕದೋಂಡ ಚಾಲನೆ ನೀಡಿದರು.
ಈ ಸಮಯದಲ್ಲಿ ಮಾತನಾಡಿದ ಅವರು, ಅಲಿಯಾಬಾದ ಎಲ್.ಟಿ.ನಂ.೧, ಎಲ್.ಟಿ.ನಂ.೨ ಮತ್ತು ಗೋಲ್ಡನ್ ದೊಡ್ಡಿಯವರೆಗೆ ಜನರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ದೂರದ ವಿಜಯಪುರ-ಸೋಲಾಪುರ ಇನ್ನಿತರ ಭಾಗಗಳಿಗೆ ಪ್ರಯಾಣ ಬೆಳೆಸುತ್ತಿದ್ದು ಈ ಬೇಡಿಕೆಯು ಹಲವಾರು ವರ್ಷಗಳಿಂದ ಇದ್ದು, ಇದನ್ನು ನಮ್ಮ ಸರಕಾರದಲ್ಲಿ ಮಾಡಲಾಗಿದೆ. ಇದರ ಸದುಪಯೋಗವನ್ನು ಸದರ ಗ್ರಾಮಗಳ ಜನರು, ವಿದ್ಯಾರ್ಥಿಗಳು, ವೃದ್ದರು, ಮಹಿಳೆಯರು ಪಡೆದುಕೊಂಡು ಶಾಂತರೀತಿಯಿಂದ ಬಸ್ ಪ್ರಯಾಣ ಬೆಳೆಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಜಯ ವಾಲು ಲಮಾಣಿ, ಶಿವನಗೌಡ ಪಾಟೀಲ, ಬಿ.ಎಮ್. ಜಾಧವ, ರಮೇಶ ಲಮಾಣಿ, ಭರತ ನಾಯಕ, ನೀಲು ರಾಠೋಡ, ರಮೇಶ ವಾಲು ಲಮಾಣಿ, ಯಶವಂತ್ರಾಯ ರಾಠೋಡ ಇನ್ನಿತರ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
Related Posts
Add A Comment