ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ ನೋಂದಣಿ ಮಾಡಿರುವ ಓಟಗಾರರಿಗೆ ಟಿ-ಶರ್ಟ್ ಹಾಗೂ ಬಿಬ್ ವಿತರಣೆ ಮತ್ತು ಪೂರ್ವಭಾವಿ ಕಾರ್ಯಕ್ರಮಗಳು ಡಿಸೆಂಬರ್ 5 ಮತ್ತು 6 ರಂದು ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿವೆ.
ಟಿ-ಶರ್ಟ್ ಮತ್ತು ಬಿಬ್ ವಿತರಣೆ
ಡಿಸೆಂಬರ್ 5 ಮತ್ತು 6 ರಂದು ಟಿ-ಶರ್ಟ್ ಮತ್ತು ಬಿಬ್ ವಿತರಿಸಲಾಗುವುದು. ಈಗಾಗಲೇ ನೋಂದಣಿ ಮಾಡಿಸಿರುವ ಓಟಗಾರರು ಸೂಕ್ತ ನೋಂದಣಿ ದಾಖಲೆಗಳೊಂದಿಗೆ ಆಗಮಿಸಿ, ಟಿ-ಶರ್ಟ್ ಮತ್ತು ಬಿಬ್ ಪಡೆದುಕೊಳ್ಳಬೇಕು ಎಂದು ಸಮಿತಿಯ ಪ್ರಮುಖರಾದ ಅಪ್ಪು ಭೈರಗೊಂಡ ಹಾಗೂ ಸಚಿನ ಪಾಟೀಲ ತಿಳಿಸಿದ್ದಾರೆ.
ವಿಚಾರಗೋಷ್ಠಿ ಮತ್ತು ಬಹುಮಾನ ವಿತರಣೆ
ಡಿಸೆಂಬರ್ 6 ರಂದು ಶನಿವಾರ ಬೆ.10.30 ರಿಂದ 12ಗಂಟೆಯವರೆಗೆ ವಿಚಾರಗೋಷ್ಠಿ ಮತ್ತು ಬಹುಮಾನ ವಿತರಣೆ ನಡೆಯಲಿದೆ. ವಿಜಯಪುರ ಹೆರಿಟೇಜ್ ಕುರಿತು ಇತಿಹಾಸ ತಜ್ಞ ಡಾ. ಕೃಷ್ಣ ಕೋಲ್ಹಾರಕುಲಕರ್ಣಿ, ಧಾರವಾಡ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆ ಅಧಿಕಾರಿ ರಮೇಶ ಮೂಲಿಮನಿ, ಇತಿಹಾಸ ತಜ್ಞ ಆನಂದ ಕುಲಕರ್ಣಿ ಮುಖ್ಯ ಭಾಷಣ ಮಾಡಲಿದ್ದಾರೆ. ಅಮೀನುದ್ದೀನ ಹುಲ್ಲೂರ ಸಮಾಲೋಚಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇದೇ ವೇಳೆ ಇತ್ತಿಚೇಗೆ ಆಯೋಜಿಸಲಾದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಲಿದೆ.
ಮ.12 ಗಂಟೆಯಿಂದ ಮ. 1.30 ಗಂಟೆಯವರಿಗೆ ಆರೋಗ್ಯ ಮತ್ತು ಒತ್ತಡ ನಿರ್ವಹಣೆ ಕುರಿತು ಕೈಗಾರಿಕಾ ಸಚಿವ ಆಪ್ತಕಾರ್ಯದರ್ಶಿ ನರೇಂದ್ರ, ವೈದ್ಯ ಡಾ.ಶಂಕರಗೌಡ ಪಾಟೀಲ, ಮುಖಂಡ ಆರ್.ಎಸ್.ಪಾಟೀಲ ಕುಚಬಾಳ ಉಪನ್ಯಾಸ ನೀಡಲಿದ್ದಾರೆ. ಉದ್ಯಮಿ ಅನುಪಮ್ ರುಣವಾಲ ಸಮಾಲೋಚಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವೃಕ್ಷ ಕಿಡ್ಸ್ ಮತ್ತು ವಾಕ್ ಮತ್ತು ಶ್ರವಣದೋಷ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಓಟದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.
ಮ.3 ರಿಂದ ಸಂ.4.30 ಗಂಟೆಯವರೆಗೆ ಪರಿಸರ ವಿಷಯದ ಕುರಿತು ಕಾಖಂಡಕಿಯ ಗುರುದೇವಾಶ್ರಮದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ, ಕೆ.ಎಸ್.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ ಪಿ.ಕೆ.ಎಂ ಮತ್ತು ಪರಿಸರ ಕಾರ್ಯಕರ್ತ ಬಸವರಾಜ ಬೈಚಬಾಳ ಉಪನ್ಯಾಸ ನೀಡಲಿದ್ದಾರೆ. ಬಿ.ಎಲ್.ಡಿ.ಇ ಎಂಜನಿಯರಿಂಗ್ ಕಾಲೇಜಿನ ಪ್ರೊ. ಅನುರಾಧಾ ಟಂಕಸಾಲಿ ಸಮಾಲೋಚಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇದೇ ವೇಳೆ ಇತ್ತಿಚೇಗೆ ಮಕ್ಕಳಿಗಾಗಿ ಆಯೋಜಿಸಲಾದ ವಿಜಯಪುರ ಹಸಿರೀಕರಣ ವಿಷಯ ಕುರಿತ ನಿಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.
ಸಂಜೆ 4.30 ರಿಂದ 6 ಗಂಟೆಯವರೆಗೆ ಕ್ರೀಡೆಗಳಿಂದಾಗುವ ಲಾಭದ ಕುರಿತು ಅಮೆಚೂರ ಫಿಟ್ನೆಸ್ ಟ್ರೇನರ್ ಕಿರಣ ಬೇಟಗೇರಿ, ಕಲಬುರಗಿ ಅಬಕಾರಿ ಇಲಾಖೆ ಉಪ ಆಯುಕ್ತ ಡಾ.ಸಂಗನಗೌಡ ಹಾಗೂ ನಿವೃತ್ತ ಸೇನಾಧಿಕಾರಿ ಎಸ್. ಹರಿನಾಥ ಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಹೊಟೇಲ್ ಉದ್ಯಮಿ ಶಾಂತೇಶ ಕಳಸಕೊಂಡ ಸಮಾಲೋಚಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇದೇ ವೇಳೆ ಇತ್ತಿಚೇಗೆ ಪಿಯುಸಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾದ ವಿಜಯಪುರ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಹಸಿರೀಕರಣ ವಿಷಯ ಕುರಿತ ನಿಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಸಮಿತಿಯ ಪ್ರಮುಖ ಅಮಿತ ಬಿರಾದಾರ, ಶಿವು ಕುಂಬಾರ ಹಾಗೂ ರಮೇಶ ಬಿರಾದಾರ ತಿಳಿಸಿದ್ದಾರೆ.

