Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮರಳಿ ಬಂದು ಬಿಡು ಪ್ರೀತಿಯ ಹೂಗುಚ್ಛ ಹಿಡಿದು

ಚಿನ್ನ ಬೇಕಾ? ಬೆಳ್ಳಿ ಬೇಕಾ?

ಪರೀಕ್ಷೆಯ ಒತ್ತಡ ಎದುರಿಸುವುದು ಹೇಗೆ?

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ನೀನೆಂದರೆ ಮುಗಿಯದ ಸಂತೋಷ ನನಗೆ
ವಿಶೇಷ ಲೇಖನ

ನೀನೆಂದರೆ ಮುಗಿಯದ ಸಂತೋಷ ನನಗೆ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨

ಉದಯರಶ್ಮಿ ದಿನಪತ್ರಿಕೆ

ನನ್ನೊಲವೆ,
ಸುಮತಿ ಸುಮತಿ ಶ್ರೀಮತಿ
ಮುದ್ದು ಪೆದ್ದು ಕೋತಿ ಎಂದು ಚೇಡಿಸುತ್ತ, ಬೈಯ್ಯುತ್ತ ಸಣ್ಣ ಮಕ್ಕಳ ತರ ಜಗಳ ಆಡುವಾಗ ಇತಿಶ್ರೀ ಹಾಕುವವನು ನಾನೇ ಆಗಿರುತ್ತಿದ್ದೆ. ಕಾಲೇಜಿನ, ಕ್ಯಾಂಟೀನಿನ, ಗೆಳೆಯ, ಗೆಳೆತಿಯರ ಬಗೆಗೆ ಹರಟುತ್ತಿದ್ದರೆ ಸಮಯ ಸರಿದದ್ದೇ ಗೊತ್ತಾಗುತ್ತಿರಲಿಲ್ಲ. ಆ ಕೆಲಸ ಈ ಕೆಲಸವೆಂದು ಭಾರವಾಗಿದ್ದ ಹೃದಯವನ್ನು ಹತ್ತಾರು ಕ್ಷಣಗಳಲ್ಲಿ ಹಗುರವಾಗಿಸಿ ಒಲವ ಲೋಕದಲ್ಲಿ ಹಾರಿಸುವಷ್ಟು ಚಾಲಾಕಿ ನೀನು. ಬಾಲ್ಯದಲ್ಲಿದ್ದಾಗಿನ ಮಾತು ನೋಟ ಒಂದೇ ಆಗಿದ್ದರೂ ಹರೆಯದ ಮನದಲ್ಲಿ ಹೊಸ ತರ ಏನೋ ಒಂಥರ ಹೇಳಲಾಗದ ಅನುಭವ.. ನೀ ಚೆಲ್ಲುವ ನಗುವೆಲ್ಲ ಎದೆಯಂಗಳದಿ ಬೆಳದಿಂಗಳು ಚೆಲ್ಲಿದಂತಿದೆ. ದಿನಗಳು ಸಾಲುವುದಿಲ್ಲ ನಿನ್ನ ಅಂದ ಚೆಂದ ಹೊಗಳಲು ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನೀನೆಂದರೆ ಮುಗಿಯದ ಸಂತೋಷ ನನಗೆ
ಎಲ್‌ಕೆಜಿಯ ಮೊದಲ ದಿನದಿಂದ ಶುರುವಾದ ನಮ್ಮಿಬ್ಬರ ಗೆಳೆತನ ಅದ್ಯಾವಾಗ ಪ್ರೇಮ ಲೋಕಕ್ಕೆ ಪದಾರ್ಪಣೆ ಮಾಡಿತೋ ಗೊತ್ತೇ ಆಗಲಿಲ್ಲ. ರಾಯಲ್ ಎನ್‌ಫೀಲ್ಡ್ನ ಹಿಂದಿನ ಸೀಟಿನಲ್ಲಿ ಭುಜದ ಮೇಲೆ ಕೈಯಿಟ್ಟು ಹಂಪ್ ಬಂದಾಗಲೆಲ್ಲ ಮೈಗೆ ಮೈ ತಾಗಿದಾಗ ಆಗುವ ರೋಮಾಂಚನ ಪದಗಳಲ್ಲಿ ಹೇಳಲಾಗದು. ಹರೆಯಕ್ಕೆ ಕಾಲಿಟ್ಟಾಗಿನಿಂದ ಹೊಸ ಹೊಸ ಬಯಕೆಗಳು ಸರದಿಯಲ್ಲಿ ಸರದಾಡುತಿವೆ. ಆ ಎಲ್ಲ ಬಯಕೆಗಳ ಆಗಮನಕೆ ಕಾರಣಳಾದವಳು ನೀನೇ. ಸಿಕ್ಕವರನ್ನೆಲ್ಲ ಲೋಹ ಚುಂಬಕದಂತೆ ಸೆಳೆವ ಸ್ನೇಹಜೀವಿ. ಅದರಲ್ಲೂ ನಾನು ನೀನು ಮಾತ್ರ ಕ್ಲೋಸ್ ಫ್ರೆಂಡ್ಸ್ ಅಂತ ಫೇಮಸ್. ಕ್ಷಣ ಕ್ಷಣ ಅನುಕ್ಷಣ ಮನದಲಿ ಮೂಡುವ ಮನದಾಸೆಗಳ ಒಡತಿಯೂ ನೀನಾದೆ. ಮನವ ಹೂಬನವ ಮಾಡಿದೆ. ಬಾಳಿನ ಬೆಳಕು, ಹೃದಯದ ಪ್ರೀತಿ, ಮನದಿ ಅರಳಿದ ಹೊಸ ಬಗೆಯ ಒಲವು, ಎಲ್ಲ ಎಂದರೆ ಎಲ್ಲವೂ ನೀನೇ ಆಗಿರುವೆ.


ನವಂಬರ್ ತಿಂಗಳ ಮಾತ್ರ ಕನ್ನಡಮ್ಮನ ಕಂದಮ್ಮಗಳಾಗುವವರ ನಡುವೆ ಕನ್ನಡ ಭಾಷೆ ಸಾಹಿತ್ಯವನ್ನು ಸದಾ ಪ್ರೀತಿಸುವ ನೀನು. ಪುಸ್ತಕ ಓದಲು ಎಲ್ಲರನ್ನೂ ಹುರುದುಂಬಿಸುತ್ತಿದ್ದೆ. ಪ್ರೇಮಿಗಳ ದಿನದಂದು ಪ್ರೀತಿಯ ಒಳಗೂ ಹೊರಗೂ ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟ ನೆನಪು ಹಸಿರಾಗಿದೆ. ಸಂಗೀತ ಸಾಹಿತ್ಯದ ತವರೂರು ವಿದ್ಯಾಕಾಶಿ, ಪೇಡಾ ನಗರಿ ಎಂದೇ ಹೆಸರಾದ ಧಾರವಾಡದ ಚೆಂದದ ಬೆಡಗಿ ನೀನಾದರೆ ಕುಂದಾ ನಗರಿ ಸುಂದರಾಂಗ ನಾನು. ನನ್ನ ಜನ್ಮ ದಿನದಂದು ನಿನ್ನ ಸುಶ್ರಾವ್ಯ ಕಂಠದಿಂದ ಹಾಡಿದ ‘ಈ ಸುದಿನ ನಿನ್ನ ಜನುಮದಿನ’ ಎಂಬ ಸುಮಧುರ ಹಾಡು ಕೇಳುಗರನ್ನು ಅಕ್ಷರಶಃ ಮಂತ್ರಮುಗ್ಧರನ್ನಾಗಿಸಿತ್ತು. ನಾ ಭೂಮಿಗಿಳಿದ ಸುಸಮಯ ನೆನೆಯುವಂತೆ ಮಾಡಿತ್ತು. ನನ್ನನ್ನು ಪ್ರೇಮಲೋಕಕ್ಕೆ ಕರೆದೊಯ್ದಿತ್ತು.. ಹುಟ್ಟು ಹಬ್ಬ ಸಂಭ್ರಮಾಚರಣೆಯಾಗಿ ಬದಲಾಗಿತ್ತು ನಿನ್ನ ಮೇಲೆ ಹೆಮ್ಮೆ ತರಸಿತ್ತು. ಅದು ಇಂದಿಗೂ ಮುಂದುವರೆದಿದೆ. ಅಂದು ನಿನ್ನೊಂದಿಗೆ ಕಳೆದ ಒಂದೊಂದು ಗಳಿಗೆಯೂ ಕೂಡ ನನ್ನ ಮನಸ್ಸಿನ ಮೇಲೆ ನಿಜವಾದ ಪ್ರೀತಿಯ ಮುದ್ರೆಯನ್ನು ಒತ್ತಿದೆ. ಇಬ್ಬನಿ ಹೊಳಪಿನ ಚಿಗುರಾಗಿ ಎನ್ನ ಮನದ ದನಿಯಾಗಿ ಬದುಕನ್ನು ಕಟ್ಟಿಕೊಟ್ಟದ್ದನ್ನು ಮರೆಯುವುದಿಲ್ಲ ಸುಮತಿ, ಅಪ್ಪಟ ಕನ್ನಡತಿ. ಅಂದು ಪ್ರೀತಿ ಕಡಲಲ್ಲಿ ನೀ ಬಿಟ್ಟ ಆ ಹಾಡಿನ ದೋಣಿ ಹೃದಯದ ಬಾಗಿಲು ತಟ್ಟಿತು. ನವಜೀವನದ ನವಬಂಧನಕೆ ದಾರಿ ಮಾಡಿಕೊಟ್ಟಿತು. ನಿನ್ನ ರೀತಿ ನೀತಿ ಪ್ರೀತಿ ಮತ್ತೆ ಮತ್ತೆ ನೆನಪಿಸಿಕೊಳ್ಳುವ ಸುರಳಿಯಾಯಿತು.
ಹಾಲು ಬಿಳುಪಿನ ಮೈ ಬಣ್ಣ, ನೀಲಿ ಕಂಗಳ, ಗುಳಿ ಕೆನ್ನೆ ಚೆಲುವೆ.. ನಿನ್ನ ನೋಡಿದ ಹರೆಯದ ಹೈಕಳ ಹೃದಯದ ಬಡಿತ ಏರೋದು ಖಚಿತ. ದಂತದ ಬೊಂಬೆ ನೀನು. ನಿನ್ನ ಕೈಯಲ್ಲಿ ಕೀಲಿ ಕೊಟ್ಟ ಬೊಂಬೆಯಂತೆ ನಾನು. ಆಗಾಗ ನನ್ನ ಮೇಲೆ ಹುಸಿಮುನಿಸು ತೋರುವ ರೀತಿಯಂತೂ ಅತಿ ಚೆಂದ. ಕಣ್ಣಲ್ಲಿ ಕಣ್ಣಿಟ್ಟು ಬದುಕಿನ ಚಿತ್ರಗಳನ್ನು ಅರಳು ಹುರಿಯುವಂತಹ ಮಾತುಗಳಲ್ಲಿ ಕಟ್ಟಿಕೊಡುವದಂತೂ ಇನ್ನೂ ಚೆಂದ.


ಅಂದು ಕಾಲೇಜಿನ ಕೊನೆಯ ದಿನ ಹಸಿರು ಒಡಲಿನ ರಂಗು ರಂಗಿನ ಸೀರೆಯುಟ್ಟ್ದು ಅದಕ್ಕೊಪ್ಪುವ ಕಿತ್ತಳೆ ಬಣ್ಣದ ತೆಳುವಾದ ನೂಲು ಕಟ್ಟಿದ ರವಿಕೆ ತೊಟ್ಟು ಗೆಳತಿಯರೊಂದಿಗೆ ಪಬ್ಲಿಕ್ ಪಾರ್ಕಿನಲ್ಲಿ ಜೋಕಾಲಿಯಾಡುತ್ತಿದ್ದೆ. ಅದನ್ನು ಕಂಡು ನನ್ನ ಕಣ್ಣು ಸನಿಹಕೆ ಬಾ ಎಂದು ಕರೆಯಿತು. ಮರಳಿ ನಿನ್ನ ಕಣ್ಣು ಹ್ಞೂಂಗುಟ್ಟಿತು.. ಕಣ್ಣು ಕಣ್ಣಲ್ಲೇ ಮಾತನಾಡುವಾಗ ನನಗೆ ಮುಗಿಲು ಮೂರೇ ಗೇಣು ಉಳಿದಿತ್ತು. ಬರಸೆಳೆದು ಬಿಗಿದಪ್ಪಿಕೊಳ್ಳುವುದೊಂದೇ ಬಾಕಿ ಉಳಿದಿತ್ತು. ಇದೆಲ್ಲ ಅನುಭವಿಸಿದ ಮನ ಹೊಸ ಜೀವನದ ಮುಂದಿನ ಕ್ಷಣ ನೆನೆದು ಕುಣಿಯತೊಡಗಿತು. ಹೃದಯ ಪುಳಕಗೊಂಡಿತು. ಇಷ್ಟು ವರ್ಷದಿಂದ ಹೆಣೆದು ಹೆಣೆದು ಅವಿತಿಟ್ಟಿದ್ದ ಕನಸುಗಳೆಲ್ಲವೂ ಅಂದು ಅನಾವರಣಗೊಳ್ಳಲು ನಾ ಮುಂದೆ ತಾ ಮುಂದೆ ಎಂದು ನೂಕು ನುಗ್ಗುಲಿನ್ನಲ್ಲಿ ಬೀಳತೊಡಗಿದವು.
ಮೊದಲೇ ಮಾತನಾಡಿದಂತೆ, ಅದೇ ಸಂಜೆ ಇಬ್ಬರೂ ಬೈಕೇರಿದೆವು. ಇನ್ನೇನು ಮುಸ್ಸಂಜೆ ಮಾಯವಾಗುತ್ತಿದ್ದ ಸಮಯ ಸುತ್ತ ಜನರ ದನಿಯೂ ಕಮ್ಮಿಯಾಗುತ್ತಿತ್ತು ಅಷ್ಟೊತ್ತಿಗೆ ಮಾಮೂಲಿ ಭೇಟಿ ಜಾಗಕ್ಕೆ ತಲುಪಿದೆವು. ಕೆಂಪು ಬೆಟ್ಟದ ಹಸಿರು ತುಂಬಿದ ಮರದ ಕೆಳಗೆ ಕೈ ಕೈ ಹಿಡಿದು ಕೂತೆವು. ನನಗರಿವಿಲ್ಲದಂತೆ ಎದೆ ಬಡಿತ ಒಮ್ಮೆಗೇ ಹೆಚ್ಚಾಯಿತು. ತಹಬದಿಗೆ ಬರುವ ಸೂಚನೆಯನ್ನೇ ನೀಡಲಿಲ್ಲ. ಅದೇ ಸಮಯಕ್ಕೆ ಇಳಿಜಾರಿನಲ್ಲಿ ಸುಳಿವ ಸುಳಿ ಗಾಳಿಗೆ ಸೀರೆಯ ಅಂಚು ಮೆಲ್ಲ ಮೆಲ್ಲ ಜಾರುತ್ತಿತು. ರವಿಕೆಯಿಂದ ಇಣುಕುತ್ತಿದ್ದ ನಿನ್ನ ತುಂಬಿದೆದೆಯ ಪರಿಮಳವ ನನ್ನೆದೆಗೆ ಒತ್ತಿ ಹಿಡಿಯಲು ನನ್ನ ಕಣ್ಣು ತುಂಟಾಟದಿ ಸೂಚಿಸುತ್ತಿತ್ತು.. ಕಣ್ಮುಚ್ಚಿ ಹಣೆಗೊಂದು ಮೆಲ್ಲನೆ ಸಿಹಿಮುತ್ತನೊತ್ತಿದೆ. ಎರಡು ತೋಳುಗಳನ್ನು ಬಿಗಿಯಾಗಿ ಕುತ್ತಿಗೆಗೆ ಸುತ್ತಿದೆ. ಒಂದೆರಡು ನಿಮಿಷದ ನಂತರ ಮೃದುವಾಗಿ ತೋಳುಗಳನ್ನು ಸವರಿದೆ. ತೋಳುಗಳಿಂದ ತೋಳುಗಳನ್ನು ಬಳಸಿದೆ. ಹೂಬಳ್ಳಿ ನವಿರಾಗಿ ಬಳುಕಿ ಮರವ ತಬ್ಬಿದಂತೆ ನನ್ನ ಬಾಚಿ ತಬ್ಬಿದ್ದೆ. ಅಷ್ಟೊತ್ತಿಗೆ ನಿನ್ನ ತುಟಿಗಳು ಕಂಪಿಸುತ್ತಿದ್ದವು. ಆಧರಗಳಿಗೆ ಅಧರಗಳನು ಸೇರಿಸಬೇಕೆನ್ನುವಷ್ಟರಲ್ಲಿ ಅಮವಾಸ್ಯೆಯಲ್ಲಿ ಬೆಳದಿಂಗಳು ಹರಡಿದಂತಾಗಿ ರೋಮಾಂಚನವಾಯಿತು. ನೀ ಮೌನ ಮುರಿಯಲು ಮುಂದಾಗಿದ್ದೆ. ಒಮ್ಮೆಲೇ ಮಿಂಚಿತು ಮಳೆ ರಪರಪನೆ ಸುರಿಯತೊಡಗಿತು. ಸುರಿವ ಮಳೆಗೆ ಮೈಗಳೆರಡು ಮೃದುವಾಗಿ ಬೆಸೆದುಕೊಂಡವು. ಒದ್ದೆಯಾದ ಮೈಗಳು ಮೆಲ್ಲ ಮೆಲ್ಲನೆ ಅರಳಿ ಹೊಳೆಯತೊಡಗಿದವು. ಮಳೆಯಲ್ಲೂ ಮೈಯೆಲ್ಲ ಬೆವರಿದ ರಸಮಯ ಕ್ಷಣವದು.
ಸುಮತಿ ನೀನೀಗ ನನ್ನ ಶ್ರೀಮತಿ.ಅಷ್ಟೇ ಅಲ್ಲ ಮನೆಯೊಡತಿ ಮನದೊಡತಿ. ಕೂಡ. ಮೂರು ಗಂಟಿನ ನಂಟಿನಲ್ಲಿ ಒಂದಾದ ಮನಸ್ಸುಗಳಿಗೆ ಅಂಥ ರಸಮಯ ಕ್ಷಣಗಳಿಗೆ ಇನ್ನು ಲೆಕ್ಕವಿಲ್ಲ. ಬೆಳಗು ಬೈಗು ಒಳಗು ಹೊರಗೂ ಮೈಗೆ ಮೈ ಬೆಸೆದುಕೊಳ್ಳಲು ಕಾದು ಕೂತಿದೆ ನಿನ್ನಿಯನ ಮನ. ಬಂದು ಬಿಡು ತಡ ಮಾಡದೆ.ಪ್ರಣಯದ ರಸಮಂಚಕೆ ಪ್ರತಿ ಇರುಳು ಕೂಡಿ ಬಿಡಿಸೋಣ ಶೃಂಗಾರದ ಚಿತ್ತಾರವ.
ಇಂತಿ ನಿನ್ನ ಪತಿ
ಭೂಪತಿ

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮರಳಿ ಬಂದು ಬಿಡು ಪ್ರೀತಿಯ ಹೂಗುಚ್ಛ ಹಿಡಿದು

ಚಿನ್ನ ಬೇಕಾ? ಬೆಳ್ಳಿ ಬೇಕಾ?

ಪರೀಕ್ಷೆಯ ಒತ್ತಡ ಎದುರಿಸುವುದು ಹೇಗೆ?

ಫೆ.೭ರಂದು ಜವಾಹರ ನವೋದಯ ವಿದ್ಯಾಲಯ: ಪ್ರವೇಶ ಪರೀಕ್ಷೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮರಳಿ ಬಂದು ಬಿಡು ಪ್ರೀತಿಯ ಹೂಗುಚ್ಛ ಹಿಡಿದು
    In ವಿಶೇಷ ಲೇಖನ
  • ಚಿನ್ನ ಬೇಕಾ? ಬೆಳ್ಳಿ ಬೇಕಾ?
    In ವಿಶೇಷ ಲೇಖನ
  • ಪರೀಕ್ಷೆಯ ಒತ್ತಡ ಎದುರಿಸುವುದು ಹೇಗೆ?
    In ವಿಶೇಷ ಲೇಖನ
  • ಫೆ.೭ರಂದು ಜವಾಹರ ನವೋದಯ ವಿದ್ಯಾಲಯ: ಪ್ರವೇಶ ಪರೀಕ್ಷೆ
    In (ರಾಜ್ಯ ) ಜಿಲ್ಲೆ
  • ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
    In (ರಾಜ್ಯ ) ಜಿಲ್ಲೆ
  • ನಮಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ಹೆಚ್.ಡಿ.ಕೋಟೆ ತಾಲೂಕು
    In (ರಾಜ್ಯ ) ಜಿಲ್ಲೆ
  • ಅರ್ಜುನ ನೆನಪಿಸಲು ಇದೇ 30 ರಂದು ಬರ್ತಿದೆ ‘ಮಾವುತ’
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯಲ್ಲಿ ೨೦ಸಾವಿರ ಅಕ್ರಮ ಬಾಂಗ್ಲಾ ವಾಸಿಗಳು!
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯಲ್ಲಿ ೨೦ಸಾವಿರ ಅಕ್ರಮ ಬಾಂಗ್ಲಾ ವಾಸಿಗಳು!
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಜಲಾಶಯ ಭದ್ರತೆ ಪರೀಕ್ಷಿಸಿದ ಕಮಾಂಡೆಂಟ್ 
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.