ಸಿಂದಗಿ: ಶಿಕ್ಷಕ ಸಾಹಿತಿಗಳ ರಾಜ್ಯ ಮಟ್ಟದ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಿಂದಗಿಯ ಮಕ್ಕಳ ಸಾಹಿತ್ಯ ಸಂಗಮದ ಗೌರವಾಧ್ಯಕ್ಷ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗೂ ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಗೌರವ ಆಮಂತ್ರಣ ನೀಡಲಾಯಿತು.
ಈ ಸಮ್ಮೇಳನದಲ್ಲಿ ರಾಷ್ಟçಮಟ್ಟದ ಶಿಕ್ಷಣ ತಜ್ಞ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳುವರು ಎಂದು ಬಾಗಲಕೋಟ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಶಿವಾನಂದ ಕೆಲ್ಲಿಕೇರಿ ಹೇಳಿದರು.
ಪಟ್ಟಣದ ಮಕ್ಕಳ ಸಾಹಿತಿ ಹ.ಮ.ಪೂಜಾರ ಅವರ ಮನೆಯಲ್ಲಿ ನಡೆದ ಗೌರವ ಆಮಂತ್ರಣ ಹಾಗೂ ಗೌರವಾರ್ಪಣೆ ಸಭೆಯಲ್ಲಿ ಮಾತನಾಡಿದ ಅವರು, ಅ.೧೨ರಂದು ಬಾಗಲಕೋಟೆಯ ನವನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶಿಕ್ಷಕ ಸಾಹಿತಿಗಳ ಪ್ರಥಮ ಸಮ್ಮೇಳನ ಜರುಗಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಜಾನಪದ ವಿದ್ವಾಂಸ ಡಾ.ಎಂ.ಎಂ.ಪಡಶೆಟ್ಟಿ ಮಾತನಾಡಿದರು.
ಈ ವೇಳೆ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಪ್ರಾ.ಎ.ಆರ್ ಹೆಗ್ಗಿನದೊಡ್ಡಿ, ಬಾಗಲಕೋಟ ತಾಲೂಕು ಕ.ಸಾ.ಪ. ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಾಗಲಕೋಟ ಜಿಲ್ಲಾ ಕ.ಸಾ.ಪ. ಅಧ್ಯಕ್ಷರು ಸಮಾರಂಭದ ಆಮಂತ್ರಣ ಪತ್ರಿಕೆ, ವಾಲ್ ಪೋಸ್ಟರ್ ವಿತರಿಸಿ, ಆಮಂತ್ರಿಸಿ ಹ.ಮ. ಪೂಜಾರ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕ.ಸಾ.ಪ. ಜಿಲ್ಲಾ ಗೌರವ ಕಾರ್ಯದರ್ಶಿ ಸಿದ್ರಾಮ ಶಿರೋಳ ಹಾಗೂ ಶಿರೋಳ ಹೋಬಳಿ ಪರಿಷತ್ತು ಘಟಕದ ಅಧ್ಯಕ್ಷ ಸಂಜಯ ನಡುವಿನಮನಿ, ಶಿವಪ್ಪ ಗವಸಾನೆ, ಚನ್ನಪ್ಪ ಕತ್ತಿ, ಎಂ.ಎಂ. ಹೂಗಾರ, ಸಿ.ಎಮ್. ಪೂಜಾರ, ಶಂಕರ ಕಟ್ಟಿಮನಿ, ಎಸ್.ಎಸ್. ಸಾತಿಹಾಳ, ಶಿವಕುಮಾರ ಶಿವಸಿಂಪಿ, ರಾಜಶೇಖರ ಪೂಜಾರ, ಶಾಂತು ರಾಣಗೋಳ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.
ಸಮ್ಮೇಳನಾಧ್ಯಕ್ಷರಿಗೆ ಅಭಿನಂದನೆಗಳ ಸುರಿಮಳೆ
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹ.ಮ.ಪೂಜಾರ ಗುರುಗಳಿಗೆ ಶಾಸಕ ಅಶೋಕ ಮನಗೂಳಿ, ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಹಿರಿಯ ಸಾಹಿತಿ ಪ.ಗು.ಸಿದ್ದಾಪುರˌ ಡಾ.ಜಿ.ಎಸ್.ಭೂಸಗೊಂಡ, ರಾಚು ಕೊಪ್ಪಾ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ತಾಲೂಕಾಧ್ಯಕ್ಷ ಆನಂದ ಶಾಬಾದಿ, ಕಾನಿಪ ಸದಸ್ಯರಾದ ಮಹಾಂತೇಶ ನೂಲಾಣವರ, ಭೀಮು ಕೆಂಭಾವಿ, ರವಿ ಮಲ್ಲೇದ, ಮಲ್ಲಿಕಾರ್ಜುನ ಅಲ್ಲಾಪುರ, ರಮೇಶ ಪೂಜಾರ, ಸತೀಶ ಬಸರಕೋಡ, ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಡಾ.ಶರಣಬಸವ ಜೋಗುರ, ಸಿದ್ದಲಿಂಗ ಕಿಣಗಿ, ಸುನಂದಾ ಯಂಪೂರೆ, ಕಾರ್ಯದರ್ಶಿ ಸೈನಜ ಮಸಳಿ, ಸದಸ್ಯೆ ನೀಲಮ್ಮ ಯಡ್ರಾಮಿ, ಅನಸೂಯಾ ಪರಗೊಂಡ, ಭಾರತಿ ಪ್ರಭಾಕರ, ಸಂಗೀತಾ ತಿಕೋಟಾ ಸೇರಿದಂತೆ ಮುಂತಾದವರು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.