ವಿಜಯಪುರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಜನರಿಗೆ ತಲುಪಿಸುವ ಬೀದಿನಾಟಕ ಮತ್ತು ಜಾನಪದ ಕಲಾ ತಂಡಗಳ ಪ್ರಾಯೋಗಿಕ ಪ್ರದರ್ಶನ ಜರುಗಿತು.
ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡ ಪ್ರಾಯೋಗಿಕ ಪ್ರದರ್ಶನದಲ್ಲಿ ಪ್ರೇರಣಾ ಗ್ರಾಮೀಣಾಭಿವೃದ್ದಿ ಸಂಸ್ಥೆ, ವಿಶ್ವ ಚೇತನ ಕಲಾ ಸಂಸ್ಥೆ ಹಾಗೂ ಗುರುಪ್ರಸಾದ ಜಾನಪದ ಕಲಾ ತಂಡಗಳು ಭಾಗವಹಿಸಿ ಸರ್ಕಾರದ ಜನಪರ ಯೋಜನೆಗಳ ಮಾಹಿತಿಯ ಬೀದಿನಾಟಕ ಹಾಗೂ ಜಾನಪದ ಪ್ರದರ್ಶನ ಜರುಗಿತು. ಈ ಕಲಾ ತಂಡಗಳು ಅಕ್ಟೋಬರ್ ಮಾಹೆಯಿಂದ ಜಿಲ್ಲೆಯ ವಿವಿಧ ಗ್ರಾಮಗಳಿಗೆ ತೆರಳಿ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪ್ರದರ್ಶನಗಳ ಮೂಲಕ ತಲುಪಿಸಲಿವೆ.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎ.ಇನಾಂದಾರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ.ಕೋಲೂರ, ಸಮಾಜ ಕಲ್ಯಾಣ ಇಲಾಖೆ ಅರವಿಂದ ಲಂಬು, ಕ್ರೀಡಾ ಇಲಾಖೆ ನಿವೃತ್ತ ಅಧಿಕಾರಿ ಚಿಂಚಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಉಪಸ್ಥಿತರಿದ್ದರು.
Related Posts
Add A Comment