ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಸಂವಿಧಾನ ದಿನ ಮತ್ತು ರಾಷ್ಟ್ರೀಯ ಕಾನೂನು ಸೇವಾ ದಿನವನ್ನು ಆಚರಿಸಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಸಂವಿಧಾನದ ರಚನೆ, ಇತಿಹಾಸ ಮತ್ತು ಸಂವಿಧಾನದ ರಚನಾ ಸಭೆಯ ಕುರಿತು ಅವರು ಮಾತನಾಡಿದರು.
ಸುಜ್ಲಾನ್ ರಿನಿವೆಬಲ್ ಎನರ್ಜಿ ಡೆವಲಪ್ಮೆಂಟ್ ಲಿಮಿಟೆಡ್ ನ ಸೀನಿಯರ್ ಜನರಲ್ ಮ್ಯಾನೇಜರ್ ಸಚಿನ ಪಾಟೀಲ ಮಾತನಾಡಿ, ಸಂವಿಧಾನ ರಚನಾ ಸಭೆ ಬೆಳೆದು ಬಂದ ದಾರಿ ಹಾಗೂ ಭಾರತದ ಸಂವಿಧಾನದ ರಚನೆಯ ಪೂರ್ವದಲ್ಲಿ ಅಳವಡಿಸಿಕೊಂಡಿರುವ ಕಾಯಿದೆಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ರಘುವೀರ ಜಿ. ಕುಲಕರ್ಣಿ, ಸಹಾಯಕ ಪ್ರಾಧ್ಯಾಪಕಿ ಡಾ. ಜೈ ಸಂತೋಷಿಮಾ, ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.
ಶಿವಾನಂದ ಬಸರಗಿ ಸ್ವಾಗತಿಸಿದರು. ಎಲ್.ಎಲ್.ಬಿ ದ್ವಿತೀಯ ವರ್ವದ ವಿದ್ಯಾರ್ಥಿ ಗುರುರಾಜ ಇಟಗಿ ನಿರೂಪಿಸಿದರು. ದಾನಮ್ಮ ತೇಲಿ ವಂದಿಸಿದರು.

