ವಿಜಯಪುರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬನ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಮಂಗಳವಾರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ಜನಜಾಗೃತಿ ಜಾಥಾಕ್ಕೆ ಹಿರಿಯ ಸಿವ್ಹಿಲ್ ನ್ಯಾಯಾಧೀಶ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ ಕುಂದರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಬಸವರಾಜ ಹುಬ್ಬಳ್ಳಿ ಜಂಟಿಯಾಗಿ ಚಾಲನೆ ನೀಡಿದರು.
ಜನಜಾಗೃತಿ ಜಾಥಾವು ವಿವಿಧ ವೃತ್ತಗಳ ಮೂಲಕ ಸಂಚರಿಸಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳ ಆವರಣದವರೆಗೆ ಸಂಚರಿಸಿ, ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಅನುಷ್ಠಾನ ಅಧಿಕಾರಿ ಡಾ.ಸಂಪತ್ ಗುಣಾರಿ, ಡಾ.ಕೆ.ಡಿ.ಗುಂಡಬಾವಡಿ, ಡಾ.ಜೈಬುನ್ನೀಸಾ ಬೀಳಗಿ, ಡಾ.ಕವಿತಾ ದೊಡಮನಿ, ಡಾ.ಪರಶುರಾಮ ಹಿಟ್ನಳ್ಳಿ, ಮನೋರೋಗ ತಜ್ಞ ಡಾ.ನಾಗರಾಜ್ ಎಚ್.,ಜೆ.ಎಂ.ಕೊಲೂರ, ಎನ್.ಆರ್.ಬಾಗವಾನ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳು, ಬಿಎಲ್‌ಡಿಇಎಯ ಶ್ರೀ.ಬಿ.ಎಂ.ಪಾಟೀಲ ಶೂಶ್ರುಷ ಮಹಾವಿದ್ಯಾಲಯ ವಿದ್ಯಾರ್ಥಿಗಳು, ಮಹಿಳಾ ಉಪನ್ಯಾಸಕ ವೃಂದ, ಆರೋಗ್ಯ ಇಲಾಕೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
Related Posts
Add A Comment