ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನೂತನವಾಗಿ ನೋಂದಣಿಯಾಗಿರುವ ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟದ (ಯುನಿಯನ್) ಕಚೇರಿ ನಗರದ ಸೋಲಾಪುರ ರಸ್ತೆ ಚಾಲುಕ್ಯ ನಗರದಲ್ಲಿ ಮಹಾಲಕ್ಷ್ಮಿ ಪೂಜೆಯನ್ನು ನೆರವೇರಿಸಿ ಪ್ರಾರಂಭ ಮಾಡಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಸಂಜಯ ಪಾಟೀಲ ಕನಮಡಿ , ಉಪಾಧ್ಯಕ್ಷರಾದ ಚಂದ್ರಶೇಖರ ಕವಟಗಿ, ನೂತನ ಆಡಳಿತ ಮಂಡಳಿ ಸದಸ್ಯರಾದ ಅರುಣ ವಾರದ , ಸುರೇಶ ಬಿರಾದಾರ್, ಸಿದ್ದು ಮಲ್ಲಿಕಾರ್ಜುನ ಮಠ, ಅರುಣ ಮಠ, ಮೌನೇಶ ಪತ್ತಾರ, ಸತೀಶ ಶಿಂತ್ರೆ , ವಿವೇಕಾನಂದ ಶಿರೋಳ್ಕರ್ , ಯಮನಪ್ಪ ಸಾತಿಹಾಳ (ವಿಜಯಪುರ ಗ್ರಾಮಾಂತರ) ಭಾಲಚಂದ್ರ ಮುಂಜಾನೆ (ಬಸವನಬಾಗೇವಾಡಿ), ರಾಜು ಹಂಚಾಟೆ (ತಾಳಿಕೋಟ್ / ಮುದ್ದೇಬಿಹಾಳ), ಚಂದ್ರಶೇಖರ ಪಾಟೀಲ ( ಚಡಚಣ ತಾ. ಇಂಡಿ ) ಮಲಕಪ್ಪ ರೊಟ್ಟಿ (ತಾಂಬಾ, ತಾ ಇಂಡಿ), ಹಾಗೂ ಸಹಕಾರ ಭಾರತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೀಪಕ ಶಿಂತ್ರೆ , ಪ್ರಧಾನ ಕಾರ್ಯದರ್ಶಿ ಪರಶ್ರಾಮ ಚಿಂಚಲಿ ಮತ್ತಿತರರು ಉಪಸ್ಥಿತರಿದ್ದರು.

