ವಿಜಯಪುರ: ಜಿಲ್ಲೆಯ ಹೊನ್ನುಟಗಿಯಲ್ಲಿ ೨೦೦೪-೦೫ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿತು.
ಹೊನ್ನುಟಗಿಯ ಪದವಿಪೂರ್ವ ಕಾಲೇಜ್‌ನಲ್ಲಿ ಅಕ್ಟೋಬರ್ ೮ ರಂದು ಹಮ್ಮಿಕೊಂಡ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಎಲ್ಲಾ ಗುರುಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಾದ ಗುರುಗಳು ತಮ್ಮ ವೃತ್ತಿ ಜೀವನದ ನೆನಪುಗಳನ್ನು ಮೆಲಕು ಹಾಕಿದರು. ಮಿಶನವರ್ ಗುರುಗಳು ಜೀವನದ ಮೌಲ್ಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಲಕರ್ಣಿ ಗುರುಗಳು, ಜೋಶಿ ಗುರುಗಳು, ಪಾಟೀಲ್ ಗುರುಗಳು, ಊಗಿ ಚವಾಣ್ ಗುರುಗಳು, ಬಾಗಲಕೋಟ ಗುರುಗಳು, ನಾಯಕ್ ಗುರುಗಳು, ನಾಯಕ್ ಗುರುಮಾತೆ, ಲಗಳಿ ಗುರುಮಾತೆ, ಬಿಳಗಿ ಗುರುಮಾತೆ, ಸಜ್ಜನ್ ಗುರು ಮಾತೆ, ಎಲ್ಲಾ ಗುರುಗಳು ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಶೀಮತಿ ಲಕ್ಷೀ ಮಠ ಹಾಗೂ ಜಗದೇವಿ ಅಗಸರ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮದ ಸಂಘಟಕ, ಶಿಕ್ಷಕ ಮುತ್ತು ಎನ್.ಕೊಳುರಗಿ ಅವರು ನಿರೂಪಣೆ ಮಾಡಿದರು.
Related Posts
Add A Comment