ಮುದ್ದೇಬಿಹಾಳ: ಗ್ರಾಮ ಪಂಚಾಯತಿಗಳ ಪರಸ್ಪರ ಕಲಿಕಾ ಕ್ಷೇತ್ರ ಭೇಟಿ ಯೋಜನೆಯಡಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುಂಕುವ ಗ್ರಾಮ ಪಂಚಾಯತಿ ಸದಸ್ಯರು ಮಂಗಳವಾರ ಆಲೂರ ಗ್ರಾಮ ಪಂಚಾಯತಿಗೆ ಬೇಟಿ ನೀಡಿ ಮಾಹಿತಿ ಪಡೆದರು.
ಪಿಡಿಒ ಜಯಣ್ಣ ಮತ್ತು ಸದಸ್ಯರ ತಂಡ ಎರಡು ದಿನಗಳ ಭೇಟಿಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಯೋಜನೆಗಳಡಿ ಅನುಷ್ಟಾನಗೊಂಡ ಕಾಮಗಾರಿಗಳನ್ನು ವೀಕ್ಷಿಸಿದರು. ಹಳ್ಳಿಗಳ ಸ್ವಚ್ಛತೆ, ನೈರ್ಮಲ್ಯಕರಣ, ಶಾಲಾ ಮತ್ತು ಅಂಗನವಾಡಿ, ಗ್ರಂಥಾಲಯಗಳ ಅಭಿವೃದ್ಧಿ ಹಾಗೂ ನರೇಗಾ ಯೋಜನೆಯ ಅನುಷ್ಟಾನ ಕುರಿತು ಆಲೂರ ಗ್ರಾಮ ಪಂಚಾಯತಿ ಪಿಡಿಒ ರಾಜು ನಾರಾಯಣ ಅವರು ಕ್ಷೇತ್ರ ಬೇಟಿ ತಂಡಕ್ಕೆ ಮಾಹಿತಿ ನೀಡಿದರು.
ಈ ವೇಳೆ ಕುಂಕುವ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜಾಸ, ಪಿಡಿಒ ಜಯಣ್ಣ, ಆಲೂರ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಕಸ್ತೂರಿಬಾಯಿ ಹುನಗುಂದ, ತಾಲೂಕು ಪಂಚಾಯತ ನರೇಗಾ ಐಇಸಿ ಸಂಯೋಜಕ ಪರಮೇಶ ಹೊಸಮನಿ, ತಾ.ಪಂ. ತರಬೇತಿ ಸಂಯೋಜಕ ಚಂದ್ರಶೇಖರ ಕಲಾಲ, ತಾ.ಪಂ. ತರಬೇತಿ ವಿಷಯ ನಿರ್ವಾಹಕ ಬಾಬು ಪೋತೆಗೊಳ್, ತಾಂತ್ರಿಕ ಸಹಾಯಕ ಮಂಜುನಾಥ ತೇಲಿ, ಡಿಇಒ ರಾಜಶೇಖರ ಕುಂಬಾರ ಇದ್ದರು.
Related Posts
Add A Comment