ಮಕ್ಕಳ ಸಾಹಿತ್ಯ ಸಂಗಮದ ಜಿಲ್ಲಾಧ್ಯಕ್ಷ ಪ್ರೊ. ಎ.ಆರ್.ಹೆಗ್ಗನದೊಡ್ಡಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಡಿಸೆಂಬರ್ 24 ರಂದು ಆಲಮೇಲದ ವಿಶ್ವೇಶ್ವರ ದೇವಸ್ಥಾನದಲ್ಲಿ ಜರುಗಲಿರುವ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಪೂರ್ವ ಭಾವಿ ಸಭೆಯನ್ನು ವಿಶ್ವೇಶ್ವರ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.
ಮಕ್ಕಳ ಸಾಹಿತ್ಯ ಸಂಗಮದ ಜಿಲ್ಲಾಧ್ಯಕ್ಷ ಪ್ರೊ. ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ಸಾಂಸ್ಕೃತಿಕ ಹಬ್ಬ ಹರಿದಿನಗಳಿಗೆ ಹೆಸರು ವಾಸಿಯಾಗಿರುವ ಆಲಮೇಲ ಪಟ್ಟಣ. ಈ ಸಮ್ಮೇಳನವು ವಿಶ್ವೇಶ್ವರ ಬಾಲಭಾರತಿ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಹಾಗೂ ಆಲಮೇಲ ತಾಲ್ಲೂಕು ಮಕ್ಕಳ ಸಾಹಿತ್ಯ ಸಂಗಮದ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಮಕ್ಕಳ ಸಾಹಿತ್ಯದ ತೊಟ್ಟಿಲು ಎಂದು ಕರೆಯುವ ವಿಜಯಪುರ ಜಿಲ್ಲೆಯಲ್ಲಿ ಯುವ ಮಕ್ಕಳನ್ನು ಸಾಹಿತ್ಯದ ಕಡೆಗೆ ಸೆಳೆಯಲು ಸಮ್ಮೇಳನ ಹಮ್ಮಿಕೊಂಡಿದ್ದು .
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಬಿ.ಆರ್.ನಾಡಗೌಡರ ರವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದಲ್ಲಿ ಸರ್ವಾಧ್ಯಕ್ಷರ ಸಾರೋಟ ಮೆರವಣಿಗೆ , ಉದ್ಘಾಟನಾ ಸಮಾರಂಭ, ವಿಶೇಷವಾಗಿ 3 ಗೋಷ್ಠಿಗಳು ,ಹಿರಿಯರ ಚಿಂತನ ಗೋಷ್ಠಿ, ಚಿಣ್ಣರ ಚಿಂತನ ಗೋಷ್ಠಿ ಹಾಗೂ ಮಕ್ಕಳ ಸಾಹಿತ್ಯದ ಕವಿ ಗೋಷ್ಠಿ ಆಯೋಜನೆ ಮಾಡಲಾಗಿದ್ದು .ಸಾಯಂಕಾಲ ಸಮಾರೋಪ ಸಮಾರಂಭ ರಾತ್ರಿ ಮಕ್ಕಳ ಸಾಂಸ್ಕೃತಿಕ ಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ. ಹಾಗಾಗಿ ಈ ಸಮ್ಮೇಳನಕ್ಕೆ ಆಲಮೇಲದ ಎಲ್ಲ ಸಂಘ ,ಸಂಸ್ಥೆಗಳು, ಶಾಲಾ ಕಾಲೇಜುಗಳು ,ಆಲಮೇಲ ಜನತೆ ಸಹಕಾರ ನೀಡಬೇಕು ಎಂದು ಮಾತನಾಡಿದರು.
ಈ ವೇಳೆ ಮಕ್ಕಳ ಸಾಹಿತ್ಯ ಸಂಗಮದ ಜಿಲ್ಲಾ ಕಾರ್ಯದರ್ಶಿ ಎಸ್.ಎಸ್.ಸಾತಿಹಾಳ, ಶಿವಕುಮಾರ ಶಿವಶಿಂಪಿಗೇರ , ಸಂಸ್ಥೆಯ ಅಧ್ಯಕ್ಷ ಎಸ್.ಆಯ್.ಜೋಗೂರ ಆಲಮೇಲ ತಾಲ್ಲೂಕು ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಲಕ್ಷ್ಮೀಪುತ್ರ ಕಿರನಳ್ಳಿ, ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ಸೀತಾ ಆರೇಶಂಕರ, ಸುನೀತಾ ಗುಂಡದ, ವೀಣಾ ರಾಂಪೂರಮಠ, ಲಕ್ಷ್ಮೀ ಗುಣಾರಿ ಮುಂತಾದವರು ಉಪಸ್ಥಿತರಿಗುಂಡದ

