ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದ್ರಾಕ್ಷಿ ಬೆಳೆ ವಿಮಾ ಮೊತ್ತ ಸಂದಾಯದಲ್ಲಿ ವಿಳಂಬವಾಗಿರುವ ಕುರಿತು ಸೋಮವಾರ ಜಿಲ್ಲಾಧಿಕಾರಿಗಳನ್ನು ಖುದ್ದಾಗಿ ದ್ರಾಕ್ಷಿ ಬೆಳೆಗಾರ ಸಂಘದ ವತಿಯಿಂದ ಭೇಟಿ ಮಾಡಿ ದ್ರಾಕ್ಷಿ ಬೆಳೆ ವಿಮೆ ಕುರಿತು ಚರ್ಚಿಸಲಾಯಿತು.
ಜಿಲ್ಲಾಧಿಕಾರಿ ಆನಂದ ಕೆ. ಅವರು ಸ್ಪಂದಿಸಿದ್ದು ನವಂಬರ್ 25 ರಂದು ಬೆಳೆವಿಮೆ ಸಮೀಕ್ಷೆಯ ಎಲ್ಲ ವರದಿಯನ್ನು ವಿಮಾ ಕಂಪನಿಗೆ ಕಳುಹಿಸಲಾಗುತ್ತಿದ್ದು, ಆದಷ್ಟು ಬೇಗನೆ ಡಿಸೆಂಬರ್ 5 ರ ಒಳಗಾಗಿ ರೈತರ ಖಾತೆಗಳಿಗೆ ಬೆಳೆ ವಿಮೆ ಮೊತ್ತವನ್ನು ಸಂದಾಯ ಮಾಡುವುದಾಗಿ ಮಾನ್ಯ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕಾರಣ ರೈತರು ಯಾವುದೇ ರೀತಿಯಲ್ಲಿ ಗೊಂದಲಕ್ಕೆ ಒಳಗಾಗಬಾರದು ಎಂದಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಅಭಯಕುಮಾರ ನಾಂದ್ರೇಕರ, ಪ್ರಾದೇಶಿಕ ಕಚೇರಿ ವಿಜಯಪುರದ ಅಧ್ಯಕ್ಷ ಎಂ. ಎಸ್. ಲೋಣಿ, ಪ್ರಧಾನ ಕಾರ್ಯದರ್ಶಿ ಸಿದಗೊಂಡ ರುದ್ರಗೌಡರ, ಉಪಾಧ್ಯಕ್ಷ ಭರತೇಶ ಜಮಖಂಡಿ, ನಿರ್ದೇಶಕ ಗುರು ಮಾಳಿ, ಬಿ. ಸಿ. ಮಸಳಿ, ರವಿಗೌಡ ಬಿರಾದಾರ, ಮಲಕನಗೌಡ ರುದ್ರಗೌಡರ, ವಿಶ್ವನಾಥ ಅವಟಿ, ಹಾಗೂ ಇನ್ನಿತರರು ಸದರಿ ಸಭೆಯಲ್ಲಿ ಉಪಸ್ಥಿತರಿದ್ದರೆಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಎಸ್.ಆರ್. ರುದ್ರಗೌಡರ ತಿಳಿಸಿದ್ದಾರೆ.

