ಹೂವಿನಹಿಪ್ಪರಗಿ: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ ಕನಿಷ್ಠ ೮ ತಾಸುಗಳವರಗೆ ಪೂರ್ಣ ಪ್ರಮಾಣದ ವಿದ್ಯುತ್ ಪೂರೈಸಬೇಕೆಂದು ಸೋಮವಾರ ಹೂವಿನಹಿಪ್ಪರಗಿ ಗ್ರಾಮದ ಪರಮಾನಂದ ವೃತ್ತದಲ್ಲಿ ಅಖಂಡ ಕರ್ನಾಟಕ ರೈತ ಸಂಘ, ಕರವೇ ಕಾರ್ಯಕರ್ತರು, ಡಿಎಸ್‌ಎಸ್ ಮುಖಂಡರು ಹಾಗೂ ಹೂವಿನಹಿಪ್ಪರಗಿ ಹೋಬಳಿ ವ್ಯಾಪ್ತಿಯ ರೈತರು ಸುಮಾರು ಒಂದು ತಾಸು ರಾಜ್ಯ ಬಿಜ್ಜಳ ರಸ್ತೆ ತಡೆ ನಡಿಸಿ ಟೈಯರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದರು.
ನಂತರ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಕರವೇ ತಾಲೂಕಾ ಅಧ್ಯಕ್ಷ ಸಿದ್ದು ಮೇಟಿ ಹಾಗೂ ಡಿಎಸ್‌ಎಸ್ ಮುಖಂಡ ಗುರುರಾಜ ಗುಡಿಮನಿ ಮಾತನಾಡಿ, ಈ ವರ್ಷ ಮುಂಗಾರು ಹಂಗಾಮಿನಲ್ಲಿ ಆಗಬೇಕಾದ ಮಳೆ ಸಂಪೂರ್ಣ ಕೈಕೂಟ್ಟಿದ್ದು ಭೀಕರ ಬರಗಾಲ ಆವರಿಸಿದೆ. ಇದರಿಂದ ರೈತರು ತೀವ್ರ ಆಘಾತಕ್ಕೂಳಗಾಗಿದ್ದಾರೆ. ಬಿತ್ತನೆ ಮಾಡಿದ ಮುಂಗಾರ ಬೆಳೆ ನೀರಿಲ್ಲದೇ ಸಂಪೂರ್ಣ ನೆಲಕಚ್ಚಿದೆ. ಕೆಲವು ರೈತರ ಜಮೀನುಗಳಲ್ಲಿರುವ ಕೊಳವೆಭಾವಿ, ತೆರೆದಭಾವಿಯಿಂದಾಗಲಿ ಬೆಳೆಗಳಿಗೆ ನೀರು ಬಿಡಬೇಕೆಂದರೆ ಕೃಷಿ ಪಂಪ್‌ಲೆಟ್‌ಗಳಿಗೆ ಸರಿಯಾಗಿ ಗುಣಮಟ್ಟದ ವಿದ್ಯುತ್ ಕೂಡಾ ಪೂರೈಸುತ್ತಿಲ್ಲ. ಹೆಸ್ಕಾಂ ಇಲಾಕೆಯವರು ಅನಾವಶ್ಯಕವಾಗಿ ರೈತರಿಗೆ ತೊಂದರೆ ಕೊಡುವುದು ನಡೆದಿದೆ. ಸರ್ಕಾರ ರೈತರ ಬದುಕಿನೊಂದಿಗೆ ಚಲ್ಲಾಟವಾಡದೇ ರೈತರಿಗೆ ಅಗತ್ಯವಿರುವ ವಿದ್ಯುತ್ ರೈತರ ಬೇಡಿಕೆಯಂತೆ ದಿನಕ್ಕೆ ಹಗಲು ಹೂತ್ತಿನಲ್ಲಿ ೪ ಗಂಟೆ ಹಾಗೂ ರಾತ್ರಿ ಸಮಯದಲ್ಲಿ ೪ ಗಂಟೆ ಗುಣಮಟ್ಟದ ವಿದ್ಯುತ್ತನ್ನು ಪೂರೈಸಬೇಕು. ಇಲ್ಲದಿದ್ದರೆ ಮುಂದಿನ ದಿನಮಾನದಲ್ಲಿ ಹೆಸ್ಕಾಂ ಕಛೇರಿಗೆ ಬೀಗ ಜಡಿದು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು,
ನಂತರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಬಸವನಬಾಗೇವಾಡಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗುರುರಾಜ ಸಂಪಣ್ಣವರ ಮನವಿ ಸ್ವೀಕರಿಸಿ ಮಾತನಾಡಿ, ಇನ್ನು ಮೇಲೆ ಹಗಲು ಹೊತ್ತಿನಲ್ಲಿ ತ್ರಿಪೇಸ್ ೪ ತಾಸು ಹಾಗೂ ರಾತ್ರಿ ಸಮಯದಲ್ಲಿ ತ್ರೀಪೇಸ್ ೩ ತಾಸು ಹಾಗೂ ಸಾಯಂಕಾಲ ೬ ಗಂಟೆಯಿಂದ ರಾತ್ರಿ ೧೦ರವರೆಗೆ ಸಿಂಗಲ್‌ಫೇಸ ವಿದ್ಯುತ್ ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ಆ ಬಳಿಕ ರೈತರು ತಾವು ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆದರು.
ಈ ಸಂಧರ್ಭದಲ್ಲಿ ಹೂವಿನಹಿಪ್ಪರಗಿ ಹೆಸ್ಕಾಂ ಶಾಖಾಧಿಕಾರಿ ಎಮ್ ಎಲ್ ರಜಪೂತ, ಹಣಮಂತರಾಯ ಗುಣಕಿ, ಮಲ್ಲು ಗುಂಡಾನವರ, ಮಲ್ಲನಗೌಡ ನಾಡಗೌಡ, ನಿಂಗನಗೌಡ ಬಿರಾದಾರ, ಹಾಜಿಮಲಂಗ ಚಪ್ಪರಬಂದ, ಮಲ್ಲನಗೌಡ ಬಿರಾದಾರ, ಆನಂದ ಕಾಖಂಡಕಿ ಉಮೇಶ ನಡುವಿನಮನಿ, ಪ್ರಕಾಶ ಪಾಟೀಲ, ಮಹಮ್ಮದ ಮುಲ್ಲಾ, ಬಸನಗೌಡ ಪಾಟೀಲ, ಬಸನಗೌಡ ಬಿರಾದಾರ, ಕುಮಾರಗೌಡ ಪಾಟೀಲ, ರುದ್ರಗೌಡ ನಾಡಗೌಡ, ಸೇರಿದಂತೆ ಹೂವಿನಹಿಪ್ಪರಗಿ ಹೂಬಳಿ ವ್ಯಾಪ್ತಿಯ ನೂರಾರು ರೈತರು ಇದ್ದರು.
Related Posts
Add A Comment