ಸಿಂದಗಿ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ ದಿಢೀರ್ ಭೇಟಿ
ಸಿಂದಗಿ: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವವರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿದ ಅವರು, ಆಸ್ಪತ್ರೆಯ ಎಲ್ಲಾ ವಾರ್ಡ್ಗಳು, ಔಷಧಿ ವಿತರಣಾ ಕೆuಟಿಜeಜಿiಟಿeಜಠಡಿ, ಅಪರೇಷನ್ ಕೆuಟಿಜeಜಿiಟಿeಜಠಡಿ ಸೇರಿದಂತೆ ಎಲ್ಲಾ ವಿಭಾಗಳಿಗೂ ಸಂಚರಿಸಿ ಅಸ್ಪತ್ರೆಯ ಬಗ್ಗೆ ಮಾಹಿತಿ ಪಡೆದರು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ, ವೈದ್ಯರು, ಸಿಬ್ಬಂದಿಗಳು ಹಾಜರಿಲ್ಲದ ಕಾರಣ ಅವರ ವಿರುದ್ಧ ಕೆಂಡ ಮಂಡಲವಾಗಿ, ಶೌಚಾಲಯ ದುಸ್ಥಿತಿ ಸರಿಯಾಗಿ ಕಾಪಡದೆ ಇರುವುದು ಸೇರಿದಂತೆ ಸಿಬ್ಬಂದಿಗಳ ಗೈರು ಹಾಜರಿಯ ಬಗ್ಗೆ ವೈದ್ಯರಿಗೆ ನಾಳೆಯೇ ನೋಟಿಸ್ ಜಾರಿಯಾಗುತ್ತೆ. ನೋಟಿಸ್ ಅಷ್ಟೇ ಅಲ್ಲ, ಇದ್ರೆ ಕೆಲಸ ಮಾಡಬಹುದು ಇಲ್ಲ ಅಂದ್ರೆ ಬಿಟ್ಟು ಹೋಗಬಹುದು ಎಂದು ಖಡಕ್ಕಾಗಿ ಹೇಳಿದರು.
ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿಡೀರ್ ಭೇಟಿ ನೀಡುವುದರಿಂದಲೇ ಇಲ್ಲಿನ ನೈಜ ಚಿತ್ರಣ ತಿಳಿಯಲು ಸಾಧ್ಯ. ಇನ್ನೂ ಶೌಚಾಲಯದ ವಿಷಯ ಬಂದರೆ ನಾನು ಖುದ್ದು ಗಮನಿಸಿದ್ದೇನೆ ಇನ್ನೂ ೨ ದಿನದಲ್ಲಿ ಶೌಚಾಲಯದ ರಿಪೇರಿ ಮಾಡಲಾಗುವುದು. ಸಿಜೇರಿಯನ್ ಮಾಡುವ ವೈದ್ಯಾಧಿಕಾರಿಗಳು ಖಾಸಗಿ ಆಸ್ಪತ್ರೆಯ ವೈದ್ಯರ ಪ್ರಭಾವಕ್ಕೆ ಮಣಿದು ನಿಲ್ಲುತ್ತಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿ ಯಾವುದೇ ಖಾಸಗಿ ಆಸ್ಪತ್ರೆಯ ವೈದ್ಯರ ಪ್ರಭಾವ ಬೀರಿಲ್ಲ. ನಾವು ಸರಿ ಇದ್ದರೆ ಅವರ ನಮಗೇನು ಮಾಡುತ್ತಾರೆ. ಇನ್ನೂ ೧೫ ದಿನದಲ್ಲಿ ಸಿಜೇರಿಯನ್ ವ್ಯವಸ್ಥೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾರಂಭವಾಗುತ್ತದೆ. ೧೦೮ರ ಆಂಬುಲೆನ್ಸ್ ರಾಜ್ಯದ ತುಂಬೆಲ್ಲ ಅದರ ಸಮಸ್ಯೆಯಿದೆ. ಇನ್ನೂ ಕೆಲವೇ ದಿನಗಳಲ್ಲಿ ಹೊಸ ಗಾಡಿ ಬರುವ ಸಾಧ್ಯತೆಗಳಿವೆ ಎಂದರು.
ಸಿಬ್ಬಂದಿ ಗೈರು: ತಾಲೂಕಾ ಆರೋಗ್ಯಧಿಕಾರಿ, ಆಸ್ಪತ್ರೆಯ ವೈದ್ಯರು, ಡಿ ಗ್ಯೂಪ್, ಸೇರಿದಂತೆ ಸುಮಾರು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೇ ಗೈರು ಹಾಜರಾಗಿರುವುದು ಹಾಜರಾತಿ ಪುಸ್ತಕದಿಂದ ಕಂಡು ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಹೇಳಿದರು.