ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಚಾಂದಕವಠೆ ಗ್ರಾಮದ ಶ್ರೀಪರಮಾನಂದ ಪ್ರೌಢಶಾಲೆಯಲ್ಲಿ ೯ನೇ ತರಗತಿಯಲ್ಲಿ ಓದುತ್ತಿರುವ ಆದರ್ಶ ವಿದ್ಯಾರ್ಥಿನಿ ಸಾವಿತ್ರಿ ಸಿದ್ದಪ್ಪ ಯರನಾಳ ಅವರು ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ದ ಜಿಗಿತದಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ವಿದ್ಯಾರ್ಥಿಯ ಈ ಸಾಧನೆಗೆ ಶ್ರೀಪರಮಾನಂದ ಪ್ರೌಢಶಾಲಾ ಮುಖ್ಯಗುರು ಅರುಣ ಕೂಚಬಾಳ, ನಿವೃತ ದೈಹಿಕ ಶಿಕ್ಷಕ ಪಿ.ಟಿ ಬಿರಾದಾರ, ದೈಹಿಕ ಶಿಕ್ಷಕ ಕಂಟ್ಟೆಪ್ಪ ಕಂಟಿಗೊಂಡ, ದೈಹಿಕ ಶಿಕ್ಷಕ ಪ್ರವೀಣ ಬಿರಾದಾರ. ಕಬ್ಬಡ್ಡಿ ತರಬೇತಿದಾರ ಶ್ರೀಧರ ಕಂಟಿಗೊಂಡ ಸೇರಿದಂತೆ ಪಾಲಕರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

