ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿನ ಜಗತ್ತಿನಲ್ಲಿ ಯಶಸ್ವಿ ಹೊಂದಲು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಬೇಕು. ಗುಣಮಟ್ಟದ ಶಿಕ್ಷಣದ ಜೊತೆಗೆ ಪ್ರಸ್ತುತ ಜಗತ್ತು ಅಪೇಕ್ಷಿತ ಮಟ್ಟದ ವಿಷಯ ಜ್ಞಾನ, ಕೌಶಲ್ಯ, ವಿಶ್ಲೇಷಣಾತ್ಮಕ ಚಿಂತನಾ ಶಕ್ತಿ, ಕಾರ್ಯತತ್ಪರತೆ, ಕ್ರಿಯಾಶೀಲತೆ, ಸೃಜನಾತ್ಮಕತೆ ಮತ್ತು ಪ್ರಾಯೋಗಿಕತೆಯಂತಹ ಔದ್ಯೋಗಿಕ ಕೌಶಲ್ಯಗಳನ್ನು ಪಡೆಯುವುದು ಅಗತ್ಯವಾಗಿದೆ ಎಂದು ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಎಂಪ್ಲೆöÊಯೆಬಿಲಿಟ್ ಸ್ಕಿಲ್ಸ್ ವಿಷಯದ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ “ಔದ್ಯೋಗಿಕ ಮತ್ತು ಸ್ಪರ್ಧಾತ್ಮಕ ಕೌಶಲ್ಯಗಳ ಕಾರ್ಯಾಗಾರ” ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಸ್ಪರ್ಧಾತ್ಮಕ ಪರೀಕ್ಷೆಗಳು ಸರ್ಕಾರಿ ಉದ್ಯೋಗ ಮತ್ತು ಪ್ರತಿಷ್ಠಿತ ಖಾಸಗಿ ವಲಯದ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳನ್ನು ಗಿಟ್ಟಿಸಿಕೊಳ್ಳಲು ಪ್ರವೇಶದ್ವಾರವಾಗಿವೆ. ಇಂದು ಕೇವಲ ವಿಷಯ ಜ್ಞಾನ, ಅಂಕ ಮತ್ತು ಪದವಿ ಪಡೆದರೆ ಸಾಲದು. ಅದಕ್ಕಿಂತ ಮುಖ್ಯವಾಗಿ ಶಿಸ್ತು, ಉದಾತ್ತ ಗುರಿ, ಯೋಜಿತ ತಯಾರಿ, ನಿರಂತರ ಕಲಿಕೆ, ಕಠಿಣ ಪರಿಶ್ರಮ, ಸಕಾರಾತ್ಮಕ ಚಿಂತನೆ ಮತ್ತು ಆ ಗುರಿಯ ಸಾಧಿಸುವ ಅಚಲ ವಿಶ್ವಾಸದೊಂದಿಗೆ ಮುನ್ನಡೆದರೆ ಖಂಡಿತ ಯಶಸ್ವಿ ಹೊಂದಬಹುದು ಎಂದರು. ಔದ್ಯೋಗಿಕ ಕೌಶಲ್ಯಗಳಲ್ಲಿ ಸಂವಹನ ಕಲೆ, ತಂಡದ ಕೆಲಸ, ಸಮಸ್ಯೆ ಪರಿಹರಿಸುವಿಕೆ, ವಿಮರ್ಶಾತ್ಮಕ ಚಿಂತನೆ, ಯೋಜನೆ ಮತ್ತು ಸಂಘಟನೆ, ನಾಯಕತ್ವ, ತಾಂತ್ರಿಕ ಕೌಶಲ್ಯಯೊಂದಿಗೆ ಹೊಂದಾಣಿಕೆಯಂತಹ ಗುಣಗಳನ್ನಯ ಹೊಂದಿದ್ದೆಯಾದರೆ ಅವಕಾಶಗಳು ಕೈ ಬೀಸಿ ಕರೆಯುತ್ತವೆ ಎಂದು ಸಲಹೆ ನೀಡಿದರು.
ಈ ಔದ್ಯೋಗಿಕ ಕೌಶಲ್ಯಗಳು ವಿಷಯದ ಪಠ್ಯಕ್ರಮದ ಜತೆಗೆ ಸ್ಪಧಾತ್ಮಕ ಪರೀಕ್ಷೆಗಳಾದ ಎಫ್.ಡಿ.ಎ, ಎಸ್.ಡಿ.ಎ, ಐ.ಬಿ.ಪಿ.ಎಸ್, ಸ್ಟಾಫ್ ಸಿಲೆಕ್ಷನ್ ಕಮಿಷನ್ ಹೀಗೆ ವಿವಿಧ ಸ್ಪಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ನೀಡಲಾಯಿತು.
ಈ ಕಾರ್ಯಾಗಾರದಲ್ಲಿ ಬಿ,ಕಾಂ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

