ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ಸಿಗಬೇಕು ಎಂದು ಎಸ್ ಎನ್ ಹಪ್ತಿ ಹೇಳಿದರು.
ಅವರು ತಾಲೂಕಿನ ಮೋರಟಗಿ ಗ್ರಾಮದ ಶ್ರೀ ಸಿದ್ಧರಾಮೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ರಾಜಕೀಯ ಸಾಮಾಜಿಕ ಆರ್ಥಿಕ ಸಬಲತೆ ಹೊಂದಿದಾಗ ಕುಟುಂಬದ ಅಭಿವೃದ್ಧಿಗೆ ಅಲ್ಲದೆ ದೇಶದ ಬೆಳವಣಿಗೆಗೂ
ಕಾರಣವಾಗುತ್ತಾಳೆ ಎಂದು ಹೇಳಿದರು.
ಉದ್ಘಾಟನೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಬಿ ಎಸ್ ಪಾಟೀಲ್ ನೆರವೇರಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ.ವೀರಭದ್ರ ಗೋಲಾ ಮಾತನಾಡಿ, ಮಹಿಳೆ ಒಂದು ದೇಶದ ಪ್ರಗತಿಯ ಸಂಕೇತ ಅವಳಿಗೆ ಉತ್ತಮವಾದ ಶಿಕ್ಷಣ ನೀಡಿ, ಎಲ್ಲರಂತೆ ಅವಕಾಶಗಳನ್ನು ಸಮಾನವಾಗಿ ಪಡೆಯಲು ಸಮರ್ಥಲಾಗಿದ್ದಾಳೆ ಎಂದರು.
ಸಬಲೀಕರಣದ ಅಧಿಕಾರಿ ವ್ಹಿ ಎಸ್ ಶಹಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅತಿಥಿಗಳಾಗಿ ಪ್ರೊ ಆರ್ ವೈ ಕಂಬಾರ ಪ್ರೊ ಎಸ್ ಎಂ ಹರನಾಳ ಡಾ. ಐ ಜಿ ಕೋನಸಿರಸಗಿ ವಿದ್ಯಾರ್ಥಿನಿ ಉಮಾಶ್ರೀ ಬಿಜಾಪುರ ಮಾತನಾಡಿದರು .
ಗೌರಿ ಶಾಬಾದಿ ಪ್ರಾರ್ಥಿಸಿದರು ನಾಜಿಯಾ ಮುಲ್ಲಾ ನಿರೂಪಿಸಿದರು ಶರಣಮ್ಮ ಚೌಡಾಪುರ ಸ್ವಾಗತಿಸಿದರು ಪದ್ಮಾವತಿ ವಂದಿಸಿದರು.

