ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ವೃಕ್ಷ ಮಾತೆ ಎಂದೇ ಹೆಸರಾಗಿದ್ದ ಸಾಲು ಮರದ ತಿಮ್ಮಕ್ಕ ಇಂದು ನಮ್ಮನ್ನು ಅಗಲಿರಬಹುದು ಆರದೆ ಅವರು ಬೆಳೆಸಿದ ಮರಗಳು ಪರಿಸರ ಕಾಳಜಿಯ ಪಾಠಗಳ ಮೂಲಕ ಅವರು ಅಜರಾಮರರಾಗಿದ್ದಾರೆ ಎಂದು ಗ್ರಾ.ಪಂ. ಮಾಜಿ ಅಧ್ಯಕಷ ಪರಪ್ಪಾ ಪಾಲಭಾವಿ ಹೇಳಿದರು.
ಗ್ರಾಮದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದ ಆವರಣದಲ್ಲಿ ಭಾಜಪ ಘಟಕದಿಂದ ಶನಿವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಶೃಧ್ಧಾಂಜಲಿ ಸಭೆಯಲ್ಲಿ ಮೌನಾಚರಣೆ ನೆರವೇರಿಸಿದ ನಂತರ ಮಾತನಾಡಿದ ಅವರು ತಿಮ್ಮಕ್ಕ ಕಾಯಕವೇ ಕೈಲಾಸ ಎಂಬ ಮನಸ್ಸನ್ನು ಹೊಂದಿದ್ದರು ಸಾವಿರಾರು ಮರಗಳನ್ನು ನೆಟ್ಟು ಮಕ್ಕಳಂತೆ ಪೋಷಣೆ ಮಾಡಿ ದೇಶಕ್ಕೆ ಮಾದರಿಯಾಗಿರುವ ತಿಮ್ಮಕ್ಕನವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದರು.
ಉಪನ್ಯಾಸಕ ಪ್ರವೀಣ ಮೈತ್ರಿ ಮಾತನಾಡಿ, ೧೧೪ ವರ್ಷಗಳ ಸಂತ್ರಪ್ತ ಜೀವನ ಸಾಗಿಸಿದ ತಿಮ್ಮಕ್ಕ ಪರಿಸರ ಕಾಳಜಿಯಲ್ಲಿ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದರು. ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಗುರಲಿಂಗಪ್ಪ ಪೂಜಾರಿ, ಬಸವರಾಜ ಕುಂಚನೂರ, ಮನೋಜ ಹಟ್ಟಿ, ಬಾಳೇಶ ಬ್ಯಾಕೋಡ, ನಾಗಪ್ಪ ಆಲಕನೂರ, ಪ್ರಭು ಗೋವಿಂದಗೋಳ, ಕೇಶವ ವಂದಾಲ, ಅಮಜದಖಾನ ಜಮಖಂಡಿ, ಹಣಮಂತ ಬಜಂತ್ರಿ, ಶೀವಪ್ಪ ದಿನ್ನಿಮನಿ, ಮಹಾಂತೇಶ ಯಂಕAಚಿ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.

