ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಲ್ಲಿನ ರಾಜಾಜಿನಗರದ ಪ್ರಗತಿ ಶಾಲೆಯ ೨೫ ನೇ ವರ್ಷದ ಬೆಳ್ಳಿ ಹಬ್ಬ ಕಾರ್ಯಕ್ರಮ ಪ್ರಯುಕ್ತ ನ.೧೭ ರಂದು ಬೆಂಗಳೂರು ರೆಸ್ಟೋರೆಂಟನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಜರುಗಿತು. ನ.೧೯ ರಂದು ಬೆಳಗ್ಗೆ ೮ ಗಂಟೆಗೆ ಮುರಾಣಕೇರಿಯ ಕಾಳಿಕಾ ದೇವಸ್ಥಾನದಿಂದ ಆರಂಭವಾಗುವ ಸರಸ್ವತಿ ಮೆರವಣಿಗೆ ಕಾಸಗೇರಿ, ರಾಜಾಜಿನಗರ,ರಾಮನಗರ ಮೂಲಕ ಪ್ರಗತಿ ಶಾಲೆ ತಲುಪಲಿದೆ.
ಸಿದ್ಧೇಶ್ವರ ಬ್ಯಾಂಕ್ ನಿರ್ದೇಶಕ ಹರ್ಷಗೌಡ ಪಾಟೀಲ ಉದ್ಘಾಟಿಸುವರು. ಸಿದ್ಧಸಿರಿ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ರಾಮನಗೌಡ ಪಾಟೀಲ (ಯತ್ನಾಳ) ಅಧ್ಯಕ್ಷತೆ ವಹಿಸಲಿದ್ದು, ಮಹಾನಗರಪಾಲಿಕೆ ಸದಸ್ಯ ಗಿರೀಶ ಬಿರಾದಾರ ನೇತೃತ್ವ ವಹಿಸುವರು. ಪ್ರಗತಿ ಶಾಲೆಯ ಆಡಳಿತ ಮಂಡಳಿ ನಿರ್ದೇಶಕ ಸಂಗಮೇಶ ಮನಹಳ್ಳಿ ಉಪಸ್ಥಿತರಿರುವರು.
ಮಧ್ಯಾಹ್ನ ೧-೩೦ಕ್ಕೆ ಕನ್ನಡ ಪುಸ್ತಕ ಪರಿಷತ್ ಆಶ್ರಯದಲ್ಲಿ ಕನ್ನಡ ಪುಸ್ತಕ ಸಮ್ಮೇಳನ ಜರುಗಲಿದೆ. ತೋಂಟದ ಸಿದ್ಧಲಿಂಗಶ್ರೀ ಪುಸ್ತಕ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಉಪನ್ಯಾಸ ನಡೆಯಲಿದೆ.
ನ.೨೩ ರಂದು ಬೆಳಗ್ಗೆ ೧೦ ಗಂಟೆಗೆ ಭಾರತ ಪಂಕ್ಷನ್ ಗಾರ್ಡನ್ ಒಳಾಂಗಣದಲ್ಲಿ ನಡೆಯುವ ಗುರುವಂದನೆಯಲ್ಲಿ ‘ಭಾರತದಲ್ಲಿ ಗುರು-ಶಿಷ್ಯ ಪರಂಪರೆ’ ವಿಷಯದ ಮೇಲೆ ೧ನೇ ಗೋಷ್ಠಿ ನಡೆಯಲಿದೆ.
ಸೊನ್ನ ವಿರಕ್ತಮಠದ ಡಾ. ಶಿವಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಅಥಣಿ ಮೋಟಗಿಮಠದ ಪ್ರಭುಚನ್ನಬಸವಶ್ರೀ ಸಾನಿಧ್ಯ ವಹಿಸಲಿದ್ದಾರೆ. ಕನ್ನಡದ ಪೂಜಾರಿ ವಿದ್ವಾನ್ ಹಿರೇಮಗಳೂರು ಕಣ್ಣನ್ ಉದ್ಘಾಟಿಸುವರು.
ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಮಹಾನಗರಪಾಲಿಕೆಯ ಮಹಾಪೌರ ಮಡಿವಾಳಪ್ಪ ಕರಡಿ ಸದಸ್ಯ ಪ್ರೇಮಾನಂದ ಬಿರಾದಾರ ವಿಶ್ರಾಂತ ಪ್ರಧಾನ ಸರ್ಕಾರಿ ಅಭಿಯೋಜಕ ಕೆ.ಕೆ.ಕುಲಕರ್ಣಿ ಮುಖ್ಯಅತಿಥಿಗಳಾಗಿ ಆಗಮಿಸುವರು. ರವಿಂದ್ರ ಜ್ಞಾನ ವಿಕಾಸ ವಿದ್ಯಾ ಸಂಸ್ಥೆಯ ಅಧ್ಯಕ್ಷೆ ಗೌರಾಬಾಯಿ ಮನಹಳ್ಳಿ ಸ್ವಾಮಿ ವಿವೇಕಾನಂದ ಸೇನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ ಚೌಧರಿ ಉಪಸ್ಥಿತರಿರುವರು. ಮನಹಳ್ಳಿ ದಂಪತಿಗಳ ೪೧ನೇ ವಿವಾಹ ವಾರ್ಷಿಕೋತ್ಸವ ಮತ್ತು ಹಳೆಯ ಗುರುವೃಂದ ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಜರುಗಲಿದ್ದು ಸ್ವಸ್ತಿ ನೃತ್ಯ ಅಕಾಡೆಮಿ ಕಲಾವಿದರಿಂದ ಸಮೂಹ ನೃತ್ಯಗಳು ನಡೆಯಲಿವೆ.
ಸಂಜೆ ೫-೩೦ ಕ್ಕೆ ಭಾರತ ಪಂಕ್ಷನ್ ಗಾರ್ಡನ್ ಹೊರಾಂಗಣದಲ್ಲಿ ಸ್ನೇಹ ಸಮ್ಮಿಲನದಲ್ಲಿ ಗೋಷ್ಠಿ ಜರುಗಲಿದೆ. ‘ಬಡ ಮಕ್ಕಳ ಕಲಿಕೆಯ ಸಮಸ್ಯೆಗಳು ಮತ್ತು ಪರಿಹಾರಗಳು’ ವಿಷಯ ಉಪನ್ಯಾಸ ಕಾರ್ಯಕ್ರಮದಲ್ಲಿ
ಬಸವನಬಾಗೇವಾಡಿ ಹಿರೇಮಠದ ಶಿವಾಪ್ರಕಾಶ ಸ್ವಾಮೀಜಿ ಸಾನಿಧ್ಯ ವಹಿಸುವರು. ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆ ವಹಿಸುವರು. ಗುಡ್ಡಾಪುರ ದಾನಮ್ಮದೇವಿ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ ಪಾಟೀಲ, ಪೊಲೀಸ್ ಉಪ ಅಧೀಕ್ಷಕ ಬಸವರಾಜ ಯಲಿಗಾರ, ಸಾಹಿತಿ ಪ.ಗು.ಸಿದ್ದಾಪುರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೀರಯ್ಯ ಸಾಲಿಮಠ, ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಬಿರಾದಾರ ಮುಖ್ಯಅತಿಥಿಗಳಾಗಿ ಆಗಮಿಸುವರು. ಸಂಸ್ಥೆಯ ಅಧ್ಯಕ್ಷೆ ಗೌರಾಬಾಯಿ ಮನಹಳ್ಳಿ ನಾಂದೇಡದ ಡಾ. ಸಂತೋಷ ಕೆಸರಾಳೆ, ಮುಖ್ಯಗುರು ಎಸ್.ಬಿ.ಬಿರಾದಾರ ಉಪಸ್ಥಿತರಿರುವರು. ಸ್ವಯಂಭೊ ನೃತ್ಯ ತಕಾಡೆಮಿ ಕಲಾವಿದರಿಂದ ಭರತನಾಟ್ಯ ಸಮೂಹ ನೃತ್ಯಗಳು ನಡೆಯಲಿವೆ.
ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಸಾಹಿತಿ ಸಿದ್ಧಲಿಂಗ ಮನಹಳ್ಳಿ ಹೇಳಿದರು.
ಈ ಕುರಿತು ಮಹಾನಗರಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಗಿರೀಶ ಬಿರಾದಾರ ಮಾತನಾಡಿದರು. ಸಾಹಿತಿ ಮುರುಗೇಶ ಸಂಗಮ, ಶಂಕರ ಬೈಚಬಾಳ, ಬಸವರಾಜ ಗವಿಮಠ, ಜಿ.ಎಸ್.ಭೂಸಗೊಂಡ, ಸಿದ್ಧರಾಮ ಬಿರಾದಾರ, ಮಹಾಂತೇಶ ಹೊಸಮನಿ, ಬಸವರಾಜ ವಾಲಿಕಾರ, ಇದ್ದರು.

