ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತನ್ನ ಸಹೋದರನ ನೆರವಿನಿಂದ ಪ್ರಿಯತಮೆ ತನ್ನ ಪ್ರಿಯಕರನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವಿಜಯಪುರ ನಗರದ ಜಾಮೀಯಾ ಮಸೀದಿ ಬಳಿ ಇರುವ ಅಮನ್ ಕಾಲೋನಿಯಲ್ಲಿ ವರದಿಯಾಗಿದೆ.
ಕೊಲೆಗೀಡಾದ ದುರ್ದೈವಿಯನ್ನು ಸಮೀರ್ ಇನಾಮದಾರ (೨೬) ಎಂದು ಗುರುತಿಸಲಾಗಿದೆ. ಕೊಲಗೀಡಾಗಿರುವ ಸಮೀರ್ ತಯ್ಯಬಾ ಅವರ ಪ್ರಿಯಕರ ಎನ್ನಲಾಗಿದ್ದು, ತಯ್ಯಬಾ ತನ್ನ ಸಹೋದರರಾದ ಅಸ್ಲಮ್ ಬಾಗವಾನ ನೆರವಿನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದ್ದು, ದಿನನಿತ್ಯ ಸಮೀರ್ ಕಿರುಕುಳ ನೀಡುತ್ತಿದ್ದು ಇದರಿಂದ ಬೇಸತ್ತು ಈ ಕೊಲೆ ನಡೆದಿದೆ ಎನ್ನಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕವೇ ಸತ್ಯಾಂಶ ಹೊರಬರಲಿದೆ.
ಸಮೀರ್ ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಗೋಳಗುಮ್ಮಟ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

