ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ತಿಳಗೂಳ ಗ್ರಾಮದ ಸಾಹಿತಿ, ವ್ಯಕ್ತಿತ್ವ ವಿಕಸನ ತರಭೇತುದಾರ ಜಗದೀಶ ಸಾತಿಹಾಳ ತಮ್ಮ ಎರಡು ವರ್ಷದ ಮಗಳು ಬಸವಪ್ರೀಯಾ ಸಾತಿಹಾಳ ಇವರ ಜನ್ಮದಿನದ ಅಂಗವಾಗಿ ತಿಳಗೂಳ ಗ್ರಾಮದ ವಿವಿಧ ಸರ್ಕಾರಿ ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು, ವಿವಿದ ಕಛೇರಿಗಳಿಗೆ ಗೋಡೆ ಗಡಿಯಾರಗಳನ್ನು ಕಾಣಿಕೆಯಾಗಿ ನೀಡುವ ಮೂಲಕ ತಮ್ಮ ಮಗಳ ಹುಟ್ಟುಹಬ್ಬವನ್ನು ಆಚರಿಸಿದರು.
ಜಗದೀಶ ಸಾತಿಹಾಳ ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

