ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ಆಯ್. ಕೆ.ರಾಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳು ಮತ್ತು ಆಟದಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಿ ನಂತರ ಮಕ್ಕಳಿಗೆ ಸಿಹಿ ವಿತರಿಸಲಾಯಿತು..
ಈ ಸಂದರ್ಭದಲ್ಲಿ ಮುಖ್ಯ ಗುರು ಸಂತೋಷ ಚೆಂಗಟ್ಟಿ,ಶಿಕ್ಷಕಿಯರಾದ ಸಂಜನಾ ಬೇನೂರ,ಅಶ್ವಿನಿ ರಸ್ತಾಪೂರಮಠ, ರುಕ್ಸಾನಾ ಬೆಣ್ಣಿಶಿರೂರ, ಹೇಮಾ ಬಪ್ಪನಕೇರ, ಸೀಮಾ ಆಸಂಗಿಹಾಳ, ಪೂಜಾ ಕುಂಟೋಜಿ ,ಶ್ರದ್ದಾ ಅಂಬೂರೆ ಸೇರಿದಂತೆ ಮಕ್ಕಳಿದ್ದರು.

