ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ದೇಶ ಹಾಗೂ ನಾಡು ಕಂಡ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿರುವ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ದೇಶದ ಸನಾತನ ಧರ್ಮದ ಪ್ರಚಾರದ ಜೊತೆಗೆ ರೈತ ಬಾಂಧವರಿಗೆ ಅನುಕೂಲವಾಗುವ ಅನೇಕ ಕೃಷಿ ಚಟುವಟಿಕೆಗಳನ್ನು, ಸಮಾಜ ಮುಖಿ ಕಾರ್ಯ ಮಾಡಿದ್ದಾರೆ. ಇಂತಹ ಶ್ರೀಗಳನ್ನು ವಿಜಯಪುರ ಜಿಲ್ಲೆಗೆ ಪ್ರವೇಶಕ್ಕೆ ಜಿಲ್ಲಾಡಳಿತವು ನಿರ್ಬಂಧ ಆದೇಶ ಹೊರಡಿಸುವದು ಅತ್ಯಂತ ನೋವಿನ ಸಂಗತಿಯಾಗಿದೆ. ಕೂಡಲೇ ಸಿಎಂ ಸಿದ್ದರಾಮಯ್ಯನವರು ಈ ನಿರ್ಬಂಧ ಆದೇಶವನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕೆಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರು ಆಗ್ರಹಿಸಿದರು.
ಪಟ್ಟಣದ ಮಿನಿವಿಧಾನಸೌಧದಲ್ಲಿರುವ ತಹಸೀಲ್ದಾರ ಕಚೇರಿ ಮುಂಭಾಗ ಬಸವಾದಿ ಶರಣರ ಹಿಂದು ವೇದಿಕೆ ಹಾಗೂ ಭಾರತೀಯ ಜನತಾ ಪಕ್ಷದ ಸಹಯೋಗದಲ್ಲಿ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ತೆರವುಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ಹಮ್ಮಿಕೊಂಡಿದ್ದ ಒಂದು ಗಂಟೆ ಕಾಲ ಹಮ್ಮಿಕೊಂಡಿದ್ದ ಸಾಂಕೇತಿಕ ಧರಣಿ ಉದ್ದೇಶಿಸಿ ಮಾತನಾಡಿದ ಅವರು, ಕನ್ಹೇರಿ ಸ್ವಾಮೀಜಿಯವರ ವ್ಯಕ್ತಿತ್ವ ಅನೇಕ ಜನರಿಗೆ ಮಾದರಿಯಾಗಿದೆ. ಶ್ರೀಗಳು ಉತ್ತರ ಕರ್ನಾಟಕದ ಶೈಲಿಯಲ್ಲಿ ಮಾತನಾಡಿದ್ದಾರೆ. ಇದನ್ನು ಮುಂದಿಟ್ಟುಕೊಂಡು ಇಂತಹ ಶ್ರೀಗಳಿಗೆ ವಿಜಯಪುರ ಜಿಲ್ಲಾಡಳಿತವು ಜಿಲ್ಲಾ ಪ್ರವೇಶ ನಿರ್ಬಂಧ ಹೇರಿದ್ದು ಖಂಡನೀಯ. ಕೂಡಲೇ ಜಿಲ್ಲಾಡಳಿತವು ನಿರ್ಬಂಧ ಆದೇಶವನ್ನು ಹಿಂಪಡೆಯಬೇಕು. ಸಿಎಂ ಸಿದ್ದರಾಮಯ್ಯನವರು ಜಿಲ್ಲಾಡಳಿತಕ್ಕೆ ನಿರ್ಬಂಧ ಆದೇಶವನ್ನು ಹಿಂಪಡೆಯಲು ಸೂಚಿಸಬೇಕೆಂದು ಆಗ್ರಹಿಸಿದರು.
ಸಾಂಕೇತಿಕ ಧರಣಿಯಲ್ಲಿ ಅಭಿಯಾನಂದ ಸ್ವಾಮೀಜಿ, ಗಿರಿಷಾನಂದ ಸ್ವಾಮೀಜಿ. ಅರವಿಂದ ಮಹಾರಾಜರು, ಜಿಪಂ ಮಾಜಿ ಸದಸ್ಯ ಸಂತೋಷ ನಾಯಕ, ತಾಪಂ ಮಾಜಿ ಸದಸ್ಯ ಬಸಪ್ಪ ಸಿದ್ದಗೊಂಡ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿಜಾಪುರ, ಮುಖಂಡರಾದ ಸಂಗನಗೌಡ ಯಂಕಚಿ, ಮಲ್ಲನಗೌಡ ರಾಯಗೊಂಡ, ಮಲ್ಲು ಬನಾಶಿ, ಸುರೇಶ ಸಾಸನೂರ, ಬಸವರಾಜ ಗಚ್ಚಿನವರ, ವಿನುತ ಕಲ್ಲೂರ, ಸತೀಶ ಕ್ವಾಟಿ, ಪೃಥ್ವಿ ನಾಯ್ಕೋಡಿ, ಮಲ್ಲು ಸೇಬಗೊಂಡ, ಮುತ್ತು ಸಾತಿಹಾಳ, ಬಲವಂತ ನಾಯಕ, ಅಶೋಕ ಮಿಣಜಗಿ, ಹುಲಿಗೆಪ್ಪ ತಳವಾರ, ಮಹಾಂತೇಶ ಕಿಣಗಿ, ರಾಜು ಮುಳವಾಡ, ಶಿವನಾರಾಯಣ ಚಿಂಚೋಳಿ, ನಾಗರಾಜ ಚಿಂಚೋಳ್ಳಿ, ಶಿವು ಬಿರಾದರ, ಮಂಜುನಾಥ ಬಿರಾದಾರ, ಶಿವನಗೌಡ ಬಿರಾದಾರ, ಜಗದೀಶ ಸುನಗದ, ಮುತ್ತುರಾಜ ಹಾಲಿಹಾಳ ಸೇರಿದಂತೆ ಇತರರು ಭಾಗವಹಿಸಿದ್ದರು.
ಮನವಿ ಪತ್ರವನ್ನು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಸ್ವೀಕರಿಸಿದರು.

