ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿಗಳಾದ, ನಮ್ಮೆಲ್ಲರ ಹೆಮ್ಮೆಯ ನಿವೃತ್ತ ಆದರ್ಶ ಶಿಕ್ಷಕರು, ತಮ್ಮ ಇಡೀ ಜೀವನವನ್ನು ಮಕ್ಕಳ ಕಲ್ಯಾಣಕ್ಕಾಗಿ ದುಡಿದಿರುವ ಹ.ಮ ಪೂಜಾರ ಗುರುಗಳಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತದ್ದು, ನಮ್ಮೆಲ್ಲರಿಗೂ ಅಭಿಮಾನದ ಸಂಗತಿ. ಅವರನ್ನು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಪರವಾಗಿ ಅಭಿನಂದಿಸುವುದೆಂದರೆ, ಈ ನಾಡಿನ ಸಮಸ್ತ ಮಕ್ಕಳನ್ನು ಅಭಿನಂದಿಸಿದ ಹಾಗೆ ಎನ್ನುವ ಸಂತೃಪ್ತಿ ನಮ್ಮೆಲ್ಲರದಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಅವರು ಸಿಂದಗಿ ಪಟ್ಟಣದಲ್ಲಿರುವ ಪೂಜಾರ ಗುರುಗಳ ನಿವಾಸಕ್ಕೆ ಭೇಟಿ ನೀಡಿ, ಅವರನ್ನು ಅಕಾಡೆಮಿಯ ಪರವಾಗಿ ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಕ್ಕಳ ಸಾಹಿತಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಶಿಕ್ಷಕ ಬಂದುಗಳು ಸಿಂದಗಿಯ ಹಲವಾರು ಜನ ಗಣ್ಯರು ಉಪಸ್ಥಿತರಿದ್ದರು.

