ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಈ ಬಾರಿ ನಡೆಯುತ್ತಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ಟಿವಿ9 ವಾಹಿನಿಯ ಹಿರಿಯ ವರದಿಗಾರ ಅಶೋಕ ಯಡಳ್ಳಿ ಸ್ಪರ್ಧೆ ಮಾಡಿದ್ದು, ಅವರನ್ನು ಗೆಲ್ಲಿಸಲು ಮಾಧ್ಯಮ ಮಿತ್ರರು ಕೈಜೋಡಿಸಬೇಕೆಂದು ಇನ್ ನ್ಯೂಜ್ ವಾಹಿನಿ ಜಿಲ್ಲಾ ವರದಿಗಾರ ವಿಜಯಕುಮಾರ ಸಾರವಾಡ ಮನವಿ ಮಾಡಿಕೊಂಡಿದ್ದಾರೆ.
ಗುರುವಾರ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಅಶೋಕ ಯಡಳ್ಳಿ ಅವರು ಮಾಧ್ಯಮ ಕ್ಷೇತ್ರದಲ್ಲಿ ತಮ್ಮ ನಿಷ್ಠೆ, ಪ್ರಾಮಾಣಿಕತೆ ಹಾಗೂ ಧೈರ್ಯಶಾಲಿ ವರದಿಗಾರಿಕೆಯಿಂದ ಹೆಸರುವಾಸಿಯಾಗಿದ್ದಾರೆ. ಪತ್ರಕರ್ತರ ಹಿತಕ್ಕಾಗಿ ಸದಾ ಕಾಳಜಿ ವಹಿಸುವ ಮನೋಭಾವ ಇವರಿಗಿದೆ. ಜಿಲ್ಲೆಯ ಅನೇಕ ಸಾಮಾಜಿಕ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ತಮ್ಮ ವರದಿಗಳ ಮೂಲಕ ಬೆಳಕಿಗೆ ತಂದು, ಅವುಗಳ ಪರಿಹಾರಕ್ಕಾಗಿ ಶ್ರಮಿಸಿದ್ದಾರೆ. ಕಾರಣ ಅವರಂತಹ ನಿಷ್ಠಾವಂತ, ಸಹೃದಯಿ ಪತ್ರಕರ್ತ ಸಂಘದ ಅಧ್ಯಕ್ಷನಾದರೆ ನಮ್ಮೆಲ್ಲರ ಧ್ವನಿಗೂ ಬಲ ದೊರೆಯುತ್ತದೆ, ಪತ್ರಕರ್ತರ ಹಿತಾಸಕ್ತಿ ಇನ್ನಷ್ಟು ಬಲಪಡುತ್ತದೆ. ಹೀಗಾಗಿ ಈ ಚುನಾವಣೆಯಲ್ಲಿ ಅಶೋಕ ಯಡಳ್ಳಿ ಅವರಿಗೆ ಮತ ನೀಡಿ ಗೆಲುವು ಸಾಧಿಸಲು ಸಹಕರಿಸಬೇಕೆಂದು ವಿಜಯಕುಮಾರ ಸಾರವಾಡ ಕೋರಿದ್ದಾರೆ.

