ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿದ್ಯಾರ್ಥಿಗಳ ಶೈಕ್ಷಣಿಕ, ಮನರಂಜನೆಯ ಮತ್ತಷ್ಟು ಮೆರಗು ನೀಡುವ ವಿನೂತನವಾದ ಮಾಧ್ಯಮ ನಮ್ಮ ಸಂಸ್ಥೆಯಲ್ಲಿ ಬಿಎಲ್ ಡಿ ಇ ದ್ವನಿ ಸಮುದಾಯ ರೇಡಿಯೋ ಪ್ರಾರಂಭಗಿದೆ. ಬೋಧಕರು ವಿದ್ಯಾರ್ಥಿಗಳ ಈ ರೇಡಿಯೋ ಮಾಧ್ಯಮವನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಪ್ರತಿಭೆ ಅನಾವರಣಕ್ಕೆ ಮುಕ್ತ ವೇದಿಕೆ ಕಲ್ಪಿಸಲಾಗಿದೆ ಎಂದು ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಹೇಳಿದರು.
ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿನಾಂಕ ೦೫-೧೧-೨೦೨೫ ಬುಧವಾರ ದಂದು ಬಿಎಲ್ ಡಿ ಇ ದ್ವನಿ ಸಮುದಾಯ ರೇಡಿಯೋ ಕೇಂದ್ರದಿಂದ ಬಿಲ್ ಡಿ ಇ ದ್ವನಿ ಎಫೆ ಎಂ ೯೮.೬ ಪರಿಚಯಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿ ಅವರು ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ಉತ್ತಮ ಅವಕಾಶ ಹಾಗೂ ವಿವಿಧ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತಿವೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಬಿಎಲ್ ಡಿ ಈ ದ್ವನಿ ನಿರೂಪಕಿ(ಆರ್ ಜೆ) ಶುಭಾ ಹತ್ತಲ್ಲಿ ಮಾತನಾಡಿ ನಮ್ಮ ಬಿಎಲ್ ಡಿ ಈ ದ್ವನಿ ರೇಡಿಯೋ ದಲ್ಲಿ ರೈತರು, ಮಹಿಳೆಯರಿಗಾಗಿ ಸಖೀ ಯಂತಹ ವಿಶೇಷ ಮತ್ತು ಉಪಯುಕ್ತ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದು ಈ ಕಾರ್ಯಕ್ರಮದಲ್ಲಿ ಮಹಿಳಾ ಸಾದಕಿಯರ ಪರಿಚಯ, ಮತ್ತು ಅವರ ಜೀವನಗಾತೆ, ಕವಿಗೋಷ್ಠಿ ಕಥೆ ವಾಚನ ಹಲವಾರು ಕಾರ್ಯಕ್ರಮ ಇರುತ್ತವೆ. ಹಾಗೂ ದಿನನಿತ್ಯ ಹೆಚ್ಚು ಗಮನದಲ್ಲಿರುವ ಘಟನೆಗಳ ಬಗ್ಗೆ “ಸದ್ದು ಮಾಡಿದ ಸುದ್ದಿ” ಎಂಬ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ತಿಳಿಸಿದರು.
ಇನ್ನೋರ್ವ ಆರ್ ಜೆ ಮುತ್ತುರಾಜ್ ಮಾತನಾಡಿ ಸಂಗೀತ ಪ್ರಸಾರ ಕಾರ್ಯಕ್ರಮ ಸ್ನೇಹಿತರಿಗೆ ಶುಭಾಶಯ ಕೋರುವುದು, ಕರೆ ಮಾಡಿ ತಮ್ಮಿಷ್ಟದ ಚಿತ್ರ ಗೀತೆಗಳ ಪ್ರಸಾರ ವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಆರ್ ಜೆ ಮಹಾಂತೇಶ ಮಾತನಾಡಿ ಜನರಿಗೆ ಎಲ್ಲ ರೀತಿಯ ಮನರಂಜನೆ ಒದಗಿಸುವುದು ನಮ್ಮ ಉದ್ದೇಶ. ಅತ್ಯುತ್ತಮ ಮತ್ತು ಎವಗ್ರೀನ್ ಚಿತ್ರಗಳ ಬಗ್ಗೆ ಸಂವಾದ ಮತ್ತು ಚಿತ್ರಗೀತೆಗಳ ಪ್ರಸಾರ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಬಿಎಲ್‌ಡಿಇ ದ್ವನಿ ಸಂಯೊಜಕಿ ಪ್ರೊ.ಶ್ವೇತಾ ಸವನೂರ, ಪ್ರೊ.ಪವನ್ ಮಹೇಂದ್ರಕರ್, ಪ್ರೊ.ವಿದ್ಯಾ ಪಾಟೀಲ, ಡಾ.ಗಿರೀಶ ಹಣಮರೆಡ್ಡಿ, ಡಾ.ಉಷಾದೇವಿ ಹಿರೇಮಠ,ಮಲಿಕ್ ಎಲ್. ಜಮಾದಾರ, ಡಾ.ತರನ್ನುಮ್ ಜಬೀನಖಾನ್, ಡಾ.ಧರ್ಮಗುರು ಡಾ.ಎಂ.ಬಿ.ಪಾಟೀಲ, ಡಾ.ಸುಮಿ ಚೋಪಡೆ,ರೋಪಾ ಮೋಟಗಿ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರೊ.ಶ್ವೇತಾ ಸವನೂರ ಕಾರ್ಯಕ್ರಮ ನಿರ್ವಹಿಸಿದರು.

