Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಫೆ.೭ರಂದು ಜವಾಹರ ನವೋದಯ ವಿದ್ಯಾಲಯ: ಪ್ರವೇಶ ಪರೀಕ್ಷೆ

ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ನಮಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ಹೆಚ್.ಡಿ.ಕೋಟೆ ತಾಲೂಕು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಆಲಸ್ಯತನ ಓಡಿಸಿ ಅಚ್ಚರಿಗಳ ಸಾಧಿಸಿ
ವಿಶೇಷ ಲೇಖನ

ಆಲಸ್ಯತನ ಓಡಿಸಿ ಅಚ್ಚರಿಗಳ ಸಾಧಿಸಿ

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨

ಉದಯರಶ್ಮಿ ದಿನಪತ್ರಿಕೆ

ಕಳ್ಳತನ ಮಾಡಿ ಸಿಕ್ಕಿ ಬಿದ್ದ ವ್ಯಕ್ತಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರು ‘ನಿನ್ನ ಪರವಾಗಿ ಹೇಳುವುದೇನಾದರೂ ಇದ್ದರೆ ಹೇಳಬಹುದು ಎಂದು ಹೇಳಿದಾಗ ಅದಕ್ಕೆ ಆತ ನ್ಯಾಯಾಧೀಶರೇ, ನನ್ನ ಹೊತೆಗೆ ನನ್ನ ತಂದೆ ತಾಯಿಗೂ ಶಿಕ್ಷೆ ವಿಧಿಸಿ. ಅವರನ್ನೂ ಜೈಲಿಗೆ ಕಳಿಸಿ ಎಂದ. ನ್ಯಾಯಾಧೀಶರು ಕಾರಣ ಕೇಳಿದಾಗ ಕಳ್ಳ ಹೇಳಿದ ’ನಾನು ಚಿಕ್ಕವನಿದ್ದಾಗ ಶಾಲೆಯಲ್ಲಿ ಒಂದು ಪೆನ್ಸಿಲ್ ಕದ್ದೆ ನಮ್ಮ ತಂದೆ ತಾಯಿಗೆ ಗೊತ್ತಾದರೂ ಅವರು ಏನನ್ನೂ ಹೇಳಲಿಲ್ಲ. ನಂತರ ಬೇರೆ ಬೇರೆ ವಸ್ತುಗಳನ್ನು ಕದ್ದು ತರತೊಡಗಿದೆ. ಕಳ್ಳತನದ ವಿಷಯ ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಏನೂ ಹೇಳುತ್ತಿರಲಿಲ್ಲ. ನನ್ನ ಕುಕೃತ್ಯವನ್ನು ಅವರು ನಿರ್ಲಕ್ಷಿಸಿದರು. ಬರಬರುತ್ತ ನನಗೆ ಕಳ್ಳತನ ಚಟವಾಯಿತು. ಇಂದು ನಾನು ದೊಡ್ಡ ಪ್ರಮಾಣದ ಕಳ್ಳನಾಗಲು ಅವರೇ ಕಾರಣ ಹೀಗಾಗಿ ನನ್ನೊಂದಿಗೆ ಅವರನ್ನೂ ಶಿಕ್ಷಿಸಿ.’ ಎಂದುತ್ತರಿಸಿದ. ಕಳ್ಳ ಹೇಳಿದ್ದು ಸರಿಯಾಗಿದೆ. ಪಾಲಕರು ತಮ್ಮ ಜವಬ್ದಾರಿಯನ್ನು ನಿರ್ವಹಿಸದೇ ಇದ್ದುದರಿಂದ ಅಪರಾಧದಲ್ಲಿ ಪಾಲುದಾರರಾದರು. ಈ ದೃಷ್ಟಾಂತವು ಯಾವುದೇ ಕೆಟ್ಟದ್ದನ್ನು ಸಸಿಯಾಗಿದ್ದಾಗ ಚೂಟದಿದ್ದರೆ ಹೆಮ್ಮರವಾಗಿ ಬೆಳೆದು ಬಾಳು ಹಾಳು ಮಾಡುತ್ತದೆ ಎಂಬುದಕ್ಕೆ ನಿದರ್ಶನ. ಸೋಮಾರಿತನವನ್ನು ಸ್ವಲ್ಪದರಲ್ಲಿದ್ದಾಗಲೇ ಚೂಟಬೇಕು ಇಲ್ಲದಿದ್ದರೆ ಜೀವನವನ್ನೇ ನಾಶಮಾಡುತ್ತದೆ. ಆಲಸ್ಯತನಕ್ಕೆ ಮೈಗಳ್ಳತನವೆಂಬ ಶಬ್ದವೂ ಚಾಲ್ತಿಯಲ್ಲಿದೆ. ಆಲಸ್ಯತನವೂ ಒಂದು ರೀತಿಯ ಕಳ್ಳತನವೇ. ಮೈಗಳ್ಳತನ ಮಾಡಿದರೆ ಭವಿಷ್ಯ ಮಣ್ಣು ಪಾಲಾದಂತೆಯೇ ಸರಿ. ‘ನಾನು ಆಲಸಿ’ ಎಂದುಕೊಳ್ಳದೇ ಚಟುವಟಿಕೆಯಿಂದಿರುವುದು ನಮ್ಮ ಕೈಯಲ್ಲೇ ಇದೆ.
ಆಲಸ್ಯತನವೆಂದರೆ?


ಆಲಸ್ಯತನವೆಂಬುದು ಏನೂ ಮಾಡದೇ ಇರುವ ಮನಸ್ಥಿತಿ. ನಮ್ಮನ್ನು ಕೆಳಗೆ ನೂಕುವ ವೈರಿ. ‘ಹತ್ತಕ್ಕೆ ಒಂಭತ್ತು ಪಾಲಿನ ದೂಃಖಕ್ಕೆ ಕಾರಣ ಸೋಮಾರಿತನ.’ ಎಂಬುದು ಕಾರ್ಲೈಲ್ ಅಭಿಮತ. ‘ಹೂವನ್ನು ಒಡನೆಯೇ ಕಿತ್ತು ಸ್ವೀಕರಿಸು.. ಇಲ್ಲದಿದ್ದರೆ ಅದು ಬಾಡಿ ಹೋಗುವುದು.’ ಇದು ಕವಿ ಟ್ಯಾಗೋರ ಮಾತು.. ಎಲ್ಲದಕ್ಕೂ ನಿರಾಸಕ್ತಿಯನ್ನು ತೋರುವ ಸ್ಥಿತಿ. ಸವಾಲೆನಿಸುವ ಕಾರ್ಯ ಮಾಡಬೇಕಾದಾಗ ಇಲ್ಲವೇ ಬೋರೆನಿಸಿದಾಗ, ಕೆಲಸದ ಹೊರೆ ಹೆಚ್ಚಾದಾಗಲೂ ಈ ಸ್ಥಿತಿ ಉಂಟಾಗಬಹುದು. ಆಲಸ್ಯತನವೊಂದು ಲಕ್ಷಣವೇ ಹೊರತು ಸಮಸ್ಯೆ ಅಲ್ಲ ಎಂಬುದನ್ನು ಸರಿಯಾಗಿ ನೆನಪಿನಲ್ಲಿಡಿ. ಪ್ರೇರಣೆಯ ಕೊರತೆ, ಭಯ, ದಣಿವು ಕಂಫರ್ಟ್ ಸ್ಥಿತಿಯಲ್ಲಿ ಇರಲು ಇಚ್ಛಿಸುವುದು. ಸಹ ಆಲಸ್ಯತನಕ್ಕೆ ಕಾರಣವಾಗುತ್ತವೆ. ಇದೊಂದು ಜೀವ ಕಳೆಯನ್ನು ಕಳೆದುಕೊಂಡಿರುವ ಸ್ಥಿತಿ. ದೈನಂದಿನ ಚಟುವಟಿಕೆಗಳಲ್ಲೂ ಉಲ್ಲಾಸ ಕಳೆದುಕೊಳ್ಳಬಹುದು.. ಮನಸ್ಸಿನ ಮೇಲೆ ಹಿಡಿತ ಸಾಧಿಸಿದರೆ ಇದರಿಂದ ಹೊರ ಬರುವುದು ಸುಲಭ.
ಆಪಾದಿಸಿದ ಸಂಗತಿ ನಿಜ ಮಾಡಬೇಡಿ
‘‘ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ’ ಎಂಬ ಮಾತಿದೆ. ಹೀಗಾಗಿ ನಾವು ಚಟುವಟಿಕೆಯುಳ್ಳವರಾಗಿ ಸದಾ ಕ್ರಿಯಾಶೀಲರಾಗಿ ಸೃಜನಶೀಲರಾಗಿ ಇರಬೇಕೆಂದರೆ ಚಿಕ್ಕವರಿದ್ದಾಗಿನಿಂದಲೇ ಚುರುಕುತನದಿಂದ ಪಾದರಸದಂತೆ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುಬೇಕು. ನಮ್ಮ ಬಗ್ಗೆ ನಮಗಿರುವ ದುರಭಿಪ್ರಾಯಗಳಲ್ಲಿ ಹಚ್ಚು ನಮ್ಮ ಮೇಲೆ ಇತರರು ಅಪಾದಿಸಿದ ಸಂಗತಿಗಳೇ ಇರುತ್ತವೆ. ಅವುಗಳನ್ನು ಒಪ್ಪಿಕೊಂಡು ನಿಜ ಮಾಡಬೇಡಿ.’ನೀನು ತುಂಬಾ ಆಲಸಿ. ನಿನ್ನಿಂದ ಕೆಲಸ ಸಾಧ್ಯವಿಲ್ಲ ಎಂದು ಅವರೆಂದರೆ ಇಲ್ಲ, ಅದು ನಿಜವಲ್ಲ. ನನಗೆ ಬೇಕೆನಿಸಿದ್ದನ್ನು ಚೆನ್ನಾಗಿ ಉತ್ಸಾಹದಿಂದ ಮಾಡಬಲ್ಲೆ.’ ಎಂದು ಮಾಡಿ ತೋರಿಸಿ. ‘ಮನುಷ್ಯ ತನ್ನ ಕುರಿತು ತಾನೇನು ಅಂದುಕೊಳ್ಳುತ್ತಾನೋ ಅದೇ ಆತನ ಅದೃಷ್ಟವನ್ನು ನಿರ್ಣಯಿಸುತ್ತದೆ..’ ಎಂದಿದ್ದಾನೆ ಎಚ್ ಡಿ ಥೋರೇ. ‘ಯಾವಾಗಲೂ ಬಾತುಕೋಳಿಯಂತೆ ನಡೆದುಕೊಳ್ಳಿ–ಮೇಲ್ಮಟ್ಟದಲ್ಲಿ ಶಾಂತವಾಗಿರಿ ಮತ್ತು ತಳ ಮಟ್ಟದಲ್ಲಿ ಜೋರಾಗಿ ಹುಟ್ಟು ಹಾಕಿ..’
ಕಾರಣದ ಮೇಲೆ ಬೆಳಕು ಚೆಲ್ಲಿ
ಆಲಸ್ಯತನದ ಮೂಲ ಕಾರಣವೇನೆಂದು ಯೋಚಿಸಿ ಅದರ ಮೇಲೆ ಬೆಳಕು ಚೆಲ್ಲಿ. ದಣಿವಾಗಿದ್ದರೆ ಕೆಲ ಹೊತ್ತು ವಿಶ್ರಮಿಸಿಕೊಳ್ಳಿ. ವಿಶ್ರಾಂತಿಯಿಂದ ದಣಿವಾಗುವಷ್ಟು ವಿಶ್ರಾಂತಿ ತೆಗೆದುಕೊಳ್ಳದಿರಿ. ಕಾಂiÀiðದ ಹೊರೆ ಹೆಚ್ಚಾಗಿದ್ದರಿಂದ ಮೈಗಳ್ಳತನ ಉಂಟಾಗಿದ್ದರೆ ಭಾರವೆನಿಸುವ ಕೆಲಸವನ್ನು ಸರಳೀಕರಿಸಿ, ತುಂಡು ತುಂಡಾದ ಭಾಗಗಳಲ್ಲಿ ಹೇಗೆ ಮಾಡುವುದು ಯೋಜಿಸಿ ಕಾರ್ಯಕ್ಕಿಳಿಯಿರಿ. ಮಾಡುತ್ತಿರುವ ಕೆಲಸದ ಬಗ್ಗೆ ಭಯವೇ? ‘ಮಾಡುವ ಕೆಲಸದ ಮೇಲೆ ಗಾಢಾಸಕ್ತಿ ಇರುವ ವ್ಯಕ್ತಿಗೆ ಜೀವನದಲ್ಲಿ ಭಯವಾಗಿಸುವ ಅಂಶ ಯಾವುದೂ ಇಲ್ಲ.’ ಎಂದಿದ್ದಾನೆ ಸ್ಯಾಮ್ಯುವೆಲ್ ಗೋಲ್ಡ್ವಿನ್. ನಿಮ್ಮ ಪ್ರತಿಭೆ ಸಾಮರ್ಥ್ಯದ ಬಗ್ಗೆ ನಂಬಿಕೆ ಬೆಳೆಸಿಕೊಂಡರೆ ಭಯ ಮಂಗಮಾಯ. ಸಾಮಾಜಿಕ ಜಾಲತಾಣದಲ್ಲಿ ಅನಗತ್ಯ ಕಾಲ ಹರಣ ಮಾಡುತ್ತಿದ್ದರೆ ಮೊಬೈಲಿನಿಂದ ದೂರವಿರಿ.
ದಿನಚರಿ ಬದಲಿಸಿ


ಸಂಗೀತ ಆಹಾರ ಹಾಸ್ಯ ಪ್ರಜ್ಞೆಯಿಂದ ದಿನಚರಿಯನ್ನು ಬದಲಿಸಿ. ಕೆಲವು ವಿಷಯಗಳು ಆಗಬೇಕೆಂದು ನೀವು ನಿರೀಕ್ಷಿಸಿದಾಗ ವಿಚಿತ್ರವಾಗಿ ಹಾಗೇ ಆಗುತ್ತವೆ.’ಒಂದು ದೊಡ್ಡ ವಿಚಾರವು ನಮ್ಮ ಬದುಕನ್ನು ಮತ್ತು ಸುತ್ತಲಿನ ವಿಶ್ವವನ್ನೇ ಬದಲಿಸಬಹುದು. ಒಂದೇ ಒಂದು ಮೇದಾವಿ ವಿಚಾರ ಇಡೀ ಪರಿಸ್ಥಿತಿಯನ್ನೇ ಬದಲಿಸಬಲ್ಲದು. ಚೆನ್ನಾಗಿ ಹೇಳುವುದಕ್ಕಿಂತ ಚೆನ್ನಾಗಿ ಮಾಡುವುದು ಉತ್ತಮ.. ಉತ್ಸಾಹ ಕೂಡ್ರಿಸಿಕೊಡುವುದಿಲ್ಲ ಆಲಸ್ಯತನ ಎಬ್ಬಿಸಿಕೊಡುವುದಿಲ್ಲ. ಹೀಗಾಗಿ ನಾವು ಪ್ರಯತ್ನ ಪಟ್ಟಾಗ ಮಾತ್ರ ಗೆಲ್ಲುತ್ತೇವೆ. ಹಾಗಂತ ಒಮ್ಮೆಲೇ ಎಲ್ಲ ಕೆಲಸಗಳನ್ನು ಮಾಡಲು ಹೋಗದಿರಿ. ‘ಅನೇಕ ಕೆಲಸಗಳನ್ನು ಮಾಡಲು ಅತಿ ಚಿಕ್ಕ ದಾರಿಯೆಂದರೆ ಒಂದು ಸಲಕ್ಕೆ ಒಂದು ಕೆಲಸ ಮಾತ್ರ ಮಾಡುವುದು.’
ಭವಿಷ್ಯತಿನ ಬಗ್ಗೆ ಆಲೋಚಿಸಿ
ಇವತ್ತು ನಾನು ಆರಾಮಿದಿನಿ ಎಂದು ಕಾಲಿನ ಮೇಲೆ ಕಾಲು ಹಾಕಿ ಸೋಮಾರಿತನ ತೋರಿದರೆ ಭವಿಷ್ಯತ್ತಿನಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ. ‘ಭವಿಷ್ಯತ್ ಬಗ್ಗೆ ಆಲೋಚಿಸುವವನೇ ಸರಿಯಾದ ದೃಷ್ಟಿಕೋನವಿರುವ ವ್ಯಕ್ತಿ.’ಎಂದು ಇನ್ಯೆನ್ ಹೇಳಿದ್ದಾನೆ. .’ಇಬ್ಬರು ವ್ಯಕ್ತಿಗಳು ಕಿಟಕಿಯ ಮೂಲಕ ನೋಡುತ್ತಾರೆ. ಒಬ್ಬನು ಮಣ್ಣನ್ನು ನೋಡುತ್ತಾನೆ. ಇನ್ನೊಬ್ಬನು ನಕ್ಷತ್ರಗಳನ್ನು ನೋಡುತ್ತಾನೆ.’ ನಾವು ನಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಂಡಿರುವುದರ ಕಡೆಗೆ ಚಲಿಸುತ್ತೇವೆ. ಇಂದು ನಿಮ್ಮಲ್ಲಿರುವ ಶಕ್ತಿ ಪ್ರತಿಭೆಗಳನ್ನು ಗುರಿಯೆಡೆಗೆ ಸರಿಯಾಗಿ ಅಳವಡಿಸಿ. ಇದು ಆಲಸ್ಯತನದಿಂದ ಮುಂದೂಡುವ ಕೆಟ್ಟ ಚಟವನ್ನು ಅದರಿಂದುಂಟಾಗುವ ಕೆಡುಕನ್ನು ನಿವಾರಿಸುತ್ತದೆ. ಆಲಸಿಗಳು ಅವಕಾಶದ ಬದಲು ರಕ್ಷಣೆಯ ಕುರಿತಾಗಿ ಚಿಂತಿಸುತ್ತಾರೆ. ಸೋಮಾರಿಗಳಿಗೆ ಸಾವಿಗಿಂತ ಹೆಚ್ಚಾಗಿ ಜೀವನವೆಂದರೆ ಭಯ ಎನಿಸುತ್ತದೆ.
ಮನಸ್ಸಿನ ಅಂಗವಿಕಲತೆಗೆ ಸೊಪ್ಪು ಹಾಕದಿರಿ
‘ಒಂದು ಹಾವನ್ನೋ ದುರ್ಜನನ್ನೋ ಆರಿಸಿಕೊಳ್ಳಬೇಕಾದಾಗ ಹಾವನ್ನೇ ಆರಿಸಿಕೋ. ಹಾವು ಆತ್ಮ ರಕ್ಷಣೆಗಾಗಿ ಮಾತ್ರ ಕಚ್ಚುತ್ತದೆ. ದುರ್ಜನರು ನಿಷ್ಕಾರಣವಾಗಿ ಹೆಜ್ಜೆ ಹೆಜ್ಜೆಗೂ ಕಚ್ಚುತ್ತಾರೆ.’ ಎಂದಿದ್ದಾನೆ ಚಾಣಕ್ಯ. ಇದೇ ರೀತಿಯಲ್ಲಿ ಇತ್ತೀಚಿನ ಸ್ಪರ್ಧಾ ಜಗತ್ತಿನಲ್ಲಿ ಅಸಮರ್ಥನನ್ನೋ ಆಲಸಿಯನ್ನೋ ಆರಿಸಿಕೊಳ್ಳಬೇಕಾದಾಗ ಅಸಮರ್ಥನನ್ನು ಆರಿಸಿಕೋ ಎನ್ನುತ್ತಾರೆ. ಏಕೆಂದರೆ ಅಸಮರ್ಥನಿಗೆ ತಿಳಿ ಹೇಳಿ ತರಬೇತಿ ನೀಡಿ ಕೆಲಸ ತೆಗೆಯಬಹದು. ಆದರೆ ಆಲಸಿ ತನ್ನೊಂದಿಗೆ. ಸಮರ್ಥರನ್ನೂ ಹಾಳು ಮಾಡುತ್ತಾನೆ ‘ಸಮರ್ಥತೆ ಇಲ್ಲದೇ ಆರ್ಥಿಕತೆ ಇರಲಾರದು.’ ಶರೀರಕ್ಕೆ ಅಂಗವಿಕಲತೆ ಇದ್ದರೂ ಗೆದ್ದು ತೋರಿದ ಮಹನೀಯರು ಹಲವರು. ಅದರಲ್ಲಿ ಕುಂಟನಾದರೂ ಅಮೇರಿಕದಂಥ ದೇಶವನ್ನು ಅತ್ಯದ್ಭುತವಾಗಿ ಮುನ್ನಡೆಸಿದ ರೂಸ್ ವೆಲ್ಟ್ .ವಿವಿಧ ಅಂಗಗಳ ವಿಕಲತೆಯಿಂದ ಕಂಗೆಡದೇ ಗೆದ್ದು ತೋರಿದ ಹೆಲೆನ್ ಕೆಲ್ಲರ್. ಜಗತ್ತು ಕಂಡು ಬೆರಗಾದ ಸ್ಟೀಫನ್ ಹಾಕಿಂಗ್ ಹೀಗೆ ಪಟ್ಟಿ ಬೆಳೆಯುತ್ತದೆ. ಆಲಸ್ಯತನವೊಂದು ಮನಸ್ಸಿನ ಅಂಗವಿಕಲತೆ. ಇದರ ಬಲಿಗೆ ಬಿದ್ದರೆ ಮುಗಿದು ಹೋಯಿತು. ಎಂಥ ಮೇದಾವಿ, ಅಪ್ರತಿಮ ಪ್ರತಿಭಾವಂತನೂ ಹೇಳ ಹೆಸರಿಲ್ಲದಂತಾಗುವುದನ್ನು ಕಣ್ಣಾರೆ ಕಾಣುತ್ತೇವೆ. ನೀವು ನಿಮ್ಮ ಮನಸ್ಸಿನಿಂದ ಆಳಲಗುತ್ತಿದ್ದರೆ ಒಬ್ಬ ಅರಸ ದೇಹದಿಂದಾರೆ ಗುಲಾಮ. ತನ್ನನ್ನು ತಾನು ಗೆಲ್ಲುವ ಶಕ್ತಿ ಹೊಂದಿರುವವನನ್ನು ತಡೆಯುವಂಥದ್ದು ಯಾವುದೂ ಇಲ್ಲ. ಆಲಸ್ಯತನ ಓಡಿಸಿ ಅಚ್ಚರಿಗಳ ಸಾಧಿಸಿ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಫೆ.೭ರಂದು ಜವಾಹರ ನವೋದಯ ವಿದ್ಯಾಲಯ: ಪ್ರವೇಶ ಪರೀಕ್ಷೆ

ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ನಮಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ಹೆಚ್.ಡಿ.ಕೋಟೆ ತಾಲೂಕು

ಅರ್ಜುನ ನೆನಪಿಸಲು ಇದೇ 30 ರಂದು ಬರ್ತಿದೆ ‘ಮಾವುತ’

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಫೆ.೭ರಂದು ಜವಾಹರ ನವೋದಯ ವಿದ್ಯಾಲಯ: ಪ್ರವೇಶ ಪರೀಕ್ಷೆ
    In (ರಾಜ್ಯ ) ಜಿಲ್ಲೆ
  • ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
    In (ರಾಜ್ಯ ) ಜಿಲ್ಲೆ
  • ನಮಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ಹೆಚ್.ಡಿ.ಕೋಟೆ ತಾಲೂಕು
    In (ರಾಜ್ಯ ) ಜಿಲ್ಲೆ
  • ಅರ್ಜುನ ನೆನಪಿಸಲು ಇದೇ 30 ರಂದು ಬರ್ತಿದೆ ‘ಮಾವುತ’
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯಲ್ಲಿ ೨೦ಸಾವಿರ ಅಕ್ರಮ ಬಾಂಗ್ಲಾ ವಾಸಿಗಳು!
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯಲ್ಲಿ ೨೦ಸಾವಿರ ಅಕ್ರಮ ಬಾಂಗ್ಲಾ ವಾಸಿಗಳು!
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಜಲಾಶಯ ಭದ್ರತೆ ಪರೀಕ್ಷಿಸಿದ ಕಮಾಂಡೆಂಟ್ 
    In (ರಾಜ್ಯ ) ಜಿಲ್ಲೆ
  • ಟೆಂಡರ್ ರದ್ದಿಗೆ ಆಗ್ರಹಿಸಿ ದಿನಗೂಲಿ ನೌಕರರ ಸಂಘದಿಂದ ಧರಣಿ
    In (ರಾಜ್ಯ ) ಜಿಲ್ಲೆ
  • ಆರೋಗ್ಯ ಮತ್ತು ನೇತ್ರ ಉಚಿತ ತಪಾಸಣೆ ಶಿಬಿರ
    In (ರಾಜ್ಯ ) ಜಿಲ್ಲೆ
  • ಸಂಗಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಲ್ಲಕ್ಕಿ ಉತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.