ವಿಜಯಪುರ: ಮೂರನೇ ಹಾಗೂ ಅಂತಿಮ ಸುತ್ತಿನ ಮಿಷನ್ ಇಂದ್ರಧನುಷ್ ಅಭಿಯಾನ ೫.೦ ಜಿಲ್ಲೆಯಲ್ಲಿ ಅ.೯ರಿಂದ ೧೪ರವರೆಗೆ ನಡೆಯಲಿದ್ದು, ಈ ಮೊದಲು ಎರಡು ಸುತ್ತಿನ ಇಂದ್ರಧನುಷ್ ಕಾರ್ಯಕ್ರಮ ಯಶಸ್ವಿಯಾಗಿದ್ದು, ಅಂತಿಮ ಸುತ್ತಿನ ಕಾರ್ಯಕ್ರಮವನ್ನು ಸಮನ್ವಯದ ಮೂಲಕ ಯಶಸ್ವಿಗೊಳಿಸಲು ವೈದ್ಯಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ಬಸವರಾಜ ಹುಬ್ಬಳ್ಳಿ ರವರು ಹೇಳಿದರು.
ಜಿಲ್ಲಾ ಮಟ್ಟದ ಪರಿಣಾಮಕಾರಿ ಮಿಷನ್ ಇಂದ್ರಧನುಷ್ ಅಭಿಯಾನ ೫.೦ ಕಾರ್ಯಕ್ರಮ ಕುರಿತು ಜಿಲ್ಲಾಮಟ್ಟದ ವೈದ್ಯಾಧಿಕಾರಿಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮೂರನೇ ಸುತ್ತಿನಲ್ಲೂ ತಾಲೂಕು ಮಟ್ಟದ ಹಾಗೂ ಸ್ಥಳೀಯ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಸಮನ್ವಯದಿಂದ ಕರ್ತವ್ಯ ನಿರ್ವಹಿಸಿ ಅಂತಿಮ ಸುತ್ತಿನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಹುಟ್ಟಿದ ಶಿಶುವಿನಿಂದ ೫ ವರ್ಷದೊಳಗಿನ ಮಕ್ಕಳಿಗೆ ನಾನಾ ಕಾಯಿಲೆಗಳಿಂದ ರಕ್ಷಣೆ ನೀಡಲು ಒಟ್ಟು ೧೩ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ. ಆದರೆ ನಿಗದಿತ ಅಂತರದಲ್ಲಿ ನೀಡುವ ೧೩ ಲಸಿಕೆಗಳ ಪೈಕಿ ಕೆಲ ಮಕ್ಕಳು ಒಂದಿಷ್ಟು ಲಸಿಕೆ ಪಡೆದು ಕೊಂಡಿರುವದಿಲ್ಲಾ, ಅಂತಹ ಮಕ್ಕಳನ್ನು ನಮ್ಮ ಜಿಲ್ಲೆಯ ತಾಲೂಕ, ಗ್ರಾಮ, ಪ್ರಾ.ಆ.ಕೇಂದ್ರ, ಸ.ಆ.ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ೩ನೇ ಸುತ್ತಿನ ಅಕ್ಟೋಬರ್ ೦೯ ರಿಂದ ೧೪ ವರೆಗೆ ಪರಿಣಾಮಕಾರಿ ಮಿಷನ್ ಇಂದ್ರಧನುಷ್ ಅಭಿಯಾನದಲ್ಲಿ ೫.೦ ಉಚಿತ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಿದ್ದತೆ ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು ಲಸಿಕಾ ಕೇಂದ್ರಗಳು-೮೨೫ ಇದ್ದು ಅದರಲ್ಲಿ ಲಸಿಕಾ ಫಲಾನುಭವಿಗಳ ಸಂಖ್ಯೆ: ೧) ೦-೨ ವರ್ಷದ ಮಕ್ಕಳು-೬೬೫೦, ೨) ೨-೫ ವರ್ಷದ ಮಕ್ಕಳು-೧೪೫೧, ೩) ಗರ್ಭಿಣಿಯರು-೧೯೬೦ ಎಲ್ಲ ಫಲಾನುಭವಿಗಳಿಗೆ ಬಿಟ್ಟು ಹೋದ ಲಸಿಕೆಗಳನ್ನು ಪೂರ್ಣಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ|| ಕೆ. ಡಿ ಗುಂಡಬಾವಡಿ ಎಸ್.ಎಮ್.ಓ (ಡಬ್ಲ್ಯೂ.ಹೆಚ್.ಓ) ಅಧಿಕಾರಿಗಳಾದ ಡಾ|| ಮುಕುಂದ ಗಲಗಲಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ರಾಜೇಶ್ವರಿ ಗೊಲಗೇರಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ: ಸಂಪತ್ ಗುಣಾರಿ, ಜಿಲ್ಲಾ ಮಲೇರಿಯಾ ಅಧಿಕಾರಿಗಳಾದ ಡಾ|| ಜೈಬುನಿಸಾ ಬೀಳಗಿ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಡಾ|| ಕವಿತಾ ದೊಡಮನಿ, ಎಲ್ಲಾ ತಾಲೂಕಾ ಆರೋಗ್ಯ ಅಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಿ.ಎಮ್ ಕೊಲೂರ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಸಭೆಯಲ್ಲಿ ಹಾಜರಿದ್ದರು.
Related Posts
Add A Comment