ವಿಜಯಪುರ: ಅ.೦೭ ರಂದು ಸಾಯಂಕಾಲ ೫ ಗಂಟೆಗೆ ವಿಜಯಪುರ ನಗರದ ಕಂದಗಲ್ ಹಣಮಂತ್ರಾಯ ರಂಗಮಂದಿರದಲ್ಲಿ ಜಿಲ್ಲಾ ಯುವ ಪರಿಷತ್ತು ಮತ್ತು ಸನ್ ಲೈಟ್ಸ್ ಮೆಲೋಡಿಸ್ ಇವರ ಪ್ರಾಯೋಜಕತ್ವದಲ್ಲಿ ಸ್ವರ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಸ್ವರ ಸಂಭ್ರಮ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಮಾನಸಾ ಹೊಳ್ಳ ಮತ್ತು ಮಜಾ ಟಾಕೀಸ ಖ್ಯಾತಿಯ ರೆಮೋ ಹಾಗು ಸರಿಗಮಪ ದ ಜ್ಯೂರಿ ಮೆಂಬರ ಗಾಯಕಿ ಲಕ್ಷ್ಮಿ ವಿಜಯಕುಮಾರ ಕರ್ನಾಟಕದ ಮೊದಲ ಮಹಿಳಾ ವಾದ್ಯಗೋಷ್ಠಿ ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂಗೀತ ಪ್ರೀಯರು ಈ ಕಾರ್ಯಕ್ರಮದ ಸವಿಯನ್ನು ಸವಿಯಬೇಕೆಂದು ಜಿಲ್ಲಾ ಯುವ ಪರಿಷತ್ತಿನ ಅಧ್ಯಕ್ಷ ಶರಣು ಸಬರದ ಪ್ರಕಟಣೆಯಲ್ಲಿ ಕೋರಿದ್ದಾರೆ
Related Posts
Add A Comment