ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಡಣಿ ಸಾಹಿತ್ಯ ಸಮ್ಮೇಳನ ದತ್ತಿಯಿಂದ ಮಮತಾ ಮುಳಸಾವಳಗಿ(ಗುಮಶೆಟ್ಟಿ) ಅವರ ಮಮತೆಯ ಮರುಳಾರಾಧ್ಯ ಶತವಚನಗಳು ಕೃತಿಯು ಜಿಲ್ಲಾ ಮಟ್ಟದ ಅತ್ಯುತ್ತಮ ಕೃತಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಅಲ್ಲದೆ ಕಡಣಿ ಗುರುವಂದನಾ ದತ್ತಿಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ತಾರಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಅಶೋಕ ಬಡಿಗೇರ ಇವರನ್ನು ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿಯನ್ನು ರವಿವಾರ ದಿನಾಂಕ ೧೫-೦೩-೨೦೨೬ ಗಂಟೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಮುಂಜಾನೆ ೧೧:೦೦ ಗಂಟೆಗೆ ಜರುಗುವುದು. ಷ.ಬ್ರ. ಸಿದ್ದರಾಮ ಶಿವಾಚಾರ್ಯರು ಹಿರೇಮಠ ಸಂಸ್ಥಾನ ಕಲಕೇರಿ ಸಾನಿಧ್ಯ ವಹಿಸುವರು. ಡಾ. ವಿ.ಎಂ. ಬಾಗಾಯತ ವಿಶ್ರಾಂತ ಪ್ರಾಚಾರ್ಯರು ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಡಿ.ಎಂ. ಘೋರ್ಪಡೆ ವಿಶ್ರಾಂತ ಪ್ರಾಚಾರ್ಯರು ಅಧ್ಯಕ್ಷತೆ ವಹಿಸಲಿದ್ದಾರೆ. ಶಿಲ್ಪಾ ಭಸ್ಮೆ ಜಿಲ್ಲಾ ಗೌರವ ಕಾರ್ಯದರ್ಶಿ ಹಾಗೂ ಸಿದ್ರಾಮಯ್ಯ ಲಕ್ಕುಂಡಿಮಠ ಅಧ್ಯಕ್ಷರು ತಾಲೂಕಾ ಕಸಾಪ ತಿಕೋಟಾ ಉಪನ್ಯಾಸ ನೀಡಲಿದ್ದಾರೆ. ಶಿವಶರಣ ಗುಂದಗಿ ಅಧ್ಯಕ್ಷರು, ತಾಲೂಕಾ ಕಸಾಪ ಆಲಮೇಲ, ಅಶೋಕ ಕೊಳಾರಿ ಗೌರವ ಕೋಶಾಧ್ಯಕ್ಷರು ಆಲಮೇಲ, ಡಾ. ರಮೇಶ ಕತ್ತಿ ಮಾಜಿ ಅಧ್ಯಕ್ಷರು ತಾಲೂಕಾ ಕಸಾಪ ಆಲಮೇಲ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ ಎಂದು ಪದಾಧಿಕಾರಿಗಳಾದ ಹಾಸಿಂಪೀರ ವಾಲಿಕಾರ, ಅಭಿಷೇಕ ಚಕ್ರವರ್ತಿ ಹಾಗೂ ಜಯಶ್ರೀ ಹಿರೇಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

