Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜಿಲ್ಲಾ ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆ :ಇಂದು ಪ್ರದಾನ

ಮಾ.೨೨ ರಂದು ಸಂವಿಧಾನ ಜಾಗೃತಿ ಸಮಾವೇಶ :ಮಯೂರ

ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡಿ :ಉಜ್ವಲಾ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಅಂಬರ ಚುಂಬಿತ ಪ್ರೇಮ ಪ್ರೇಮ
ವಿಶೇಷ ಲೇಖನ

ಅಂಬರ ಚುಂಬಿತ ಪ್ರೇಮ ಪ್ರೇಮ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨

ಉದಯರಶ್ಮಿ ದಿನಪತ್ರಿಕೆ

ಈ ಹಿಂದೆ ಅದೆಷ್ಟೋ ಹುಡುಗಿಯರನ್ನು ಕಂಡ ಕಣ್ಣಿಗೆ ಹೀಗೆಂದೂ ಆಗಿರಲಿಲ್ಲ. ಮೊದಲ ಸಲದ ನೋಟವೊಂದು ಅದ್ಭುತ ಕ್ಷಣದಂತಿತ್ತು. ಹಲವು ನಿಮಿಷ ಕಣ್ರೆಪ್ಪೆಗಳನ್ನು ಒಂದಕ್ಕೊಂದು ಅಂಟಿಸದಂತೆ ಮಾಡಿತ್ತು. ಆ ಕ್ಷಣ ಇಡೀ ಜಗತ್ತು ಸ್ತಬ್ಧವಾದಂತೆ ಭಾಸವಾಯಿತು. ಕಣ್ಣುಗಳ ಮಿಲನದಲ್ಲಿ ಹೊಸದೊಂದು ಕನಸಿನ ಲೋಕ ತೆರೆದುಕೊಂಡಂತೆ ಅನಿಸಿತು. ಕಣ್ಣಿನ ಕವಿತೆಯಲ್ಲಿ ಪದಪುಂಜಗಳಿರಲಿಲ್ಲ. ಆದರೂ ಮನವು ಎಲ್ಲವನ್ನೂ ಓದಿತ್ತು. ಮಾತೇ ಹೊರಡದಂತಾಗಿತ್ತು. ಆ ಮೌನದಲ್ಲಿ ಹೊಸದೊಂದು ಲೋಕವೇ ಸೃಷ್ಟಿಯಾಗಿತ್ತು. ನಿನ್ನ ಮುಗಳ್ನಗೆ ಮನೆಯ ಮೂಲೆಯಲ್ಲಿ ಹಚ್ಚಿಟ್ಟ ಪುಟ್ಟ ದೀಪದಂತೆ ಮಿನುಗುತ್ತಿತ್ತು. ಪ್ರೇಮಕವಿ ಬರೆದ ಪ್ರೇಮ ಕಾವ್ಯಕ್ಕೆ ನೀನೇ ಸಾಕ್ಷಾತ್ ರೂಪವಾಗಿ ಬಂದಂತೆನಿಸಿತ್ತು. ಬೀಸುವ ತಂಗಾಳಿಯಲ್ಲಿ ಹಾಗೆ ನೀನು ಕಾಲೇಜಿನ ಪಾರ್ಕಿನಲ್ಲಿ ಹಂಸದಂತೆ ನಡೆದು ಹೋಗುತ್ತಿದ್ದರೆ ನನಗರಿವಿಲ್ಲದೆ ನನ್ನ ಕಾಲುಗಳು ನಿನ್ನ ಹಿಂಬಾಲಿಸಿದವು. ಪರಿಚಯವಿಲ್ಲದ ನಾನು ನಿನ್ನ ಹಿಂಬಾಲಿಸುವುದು ಕಂಡು ಹೆದರಿದ ಹರಿಣಿಸದಂತೆ ಓಡತೋಡಗಿದೆ.
ನಿನ್ನ ಹೆಜ್ಜೆಗೆ ಹೆಜ್ಜೆ ಬೆರೆಸುವ ತವಕದಲ್ಲಿ ಜಗವನ್ನೇ ಮರೆತೆ. ಅಷ್ಟರಲ್ಲಿ ನಿನ್ನ ಗೆಳತಿಯರ ಗುಂಪಿನಲ್ಲಿ ನೀನು ಸೇರಿಬಿಟ್ಟೆ. ನನ್ನ ಕಣ್ಣು ಹೆಂಗಳೆಯರ ಗುಂಪಿನಲ್ಲಿ ನಾಟ್ಯ ಮಯೂರಿಯಂತಿದ್ದ ನಿನ್ನನ್ನೇ ಹುಡುಕತೊಡಗಿತು. ಗೆಳತಿಯರನ್ನು ಸೇರಿ ನನ್ನೆಡೆಗೆ ಬೀರಿದ ನಗು ಇನ್ನೂ ಎದೆಯಲ್ಲಿ ಹಸಿರಾಗಿದೆ. ನಿನ್ನ ಸೌಂದರ್ಯ ಶರತ್ಕಾಲದ ಬೆಳದಿಂಗಳಿನಂತೆ ಪ್ರಶಾಂತವಾಗಿತ್ತು. ಮಾದಕ ಕಂಗಳು ಆಳವಾದ ಭಾವವನ್ನು ವ್ಯಕ್ತಪಡಿಸುತ್ತ ಕಾಂತಿಯುತ ನೋಟ ಬೀರುತ್ತಿದ್ದವು. ಮಧುರವಾದ ನಗು ನಿನ್ನ ವ್ಯಕ್ತಿತ್ವದ ಮೆರಗನ್ನು ಹೆಚ್ಚಿಸಿತ್ತು.


ಮೊದಲ ನೋಟದ ಕುರಿತು ಅದೆಷ್ಟು ಸಾರಿ ಹೇಳಿದರೂ ಸಾಲದು. ಅದು ಎಂದೂ ಮರೆಯಲಾಗದ ಕ್ಷಣ. ಇಂದಿಗೂ ನನ್ನ ಕಣ್ಣ ಮುಂದೆ ಹಸಿರಾಗಿದೆ. ಮನದಲ್ಲಿ ಮುದ್ರೆಯೊತ್ತಿದಂತಿದೆ. ನಿನ್ನ ಕಂಡ ಕ್ಷಣದಿಂದ ಬದುಕಿನ ದಾರಿಯೇ ಬದಲಾಗಿದೆ. ಮೊನಲಿಸಾಳ ನಗುವನ್ನೂ ಮೀರಿಸುವ ನಿನ್ನ ಅಂದವಾದ ನಗು, ಮುತ್ತಿನ ಹಾರಗಳಂತಿರುವ ಸವಿನುಡಿಗಳು. ನಿನ್ನ ಇರುವಿಕೆ ಈ ಜಗದಲ್ಲಿಯೇ ಅತ್ಯಂತ ಸುಂದರವಾದದ್ದು ಎನಿಸುತ್ತದೆ. ಈ ಹೃದಯ ಮೊದಲ ನೋಟದಿಂದಲೇ ಹೃದಯದ ಬಡಿತ ಹಿಡಿತಕ್ಕೆ ಸಿಗದೇ ನಿನಗಾಗಿ ಮಿಡಿಯುತ್ತದೆ. ನನ್ನ ಪ್ರತಿ ಉಸಿರಿನಲ್ಲಿ ನಿನ್ನದೇ ನೆನಪು. ನಿನ್ನ ಜೊತೆಗಿನ ಪ್ರತಿಯೊಂದು ಕ್ಷಣವೂ ಒಂದು ಅತ್ಯದ್ಭುತ ಕವಿತೆಯಂತೆ ಕಾಣುತ್ತದೆ. ನನ್ನ ಕೊನೆಯುಸಿರಿನವರೆಗೂ ನಿನ್ನ ನಯವಾದ ಬೆರಳುಗಳಲ್ಲಿ ಬೆರಳು ಸಿಕ್ಕಿಸಿ ನಡೆಯುವ ಆಸೆ ಮನದಲ್ಲಿ ತುಂಬಿದೆ.
ಈಗಿನ ಯುವತಿಯರಿಗೆ ಜೀನ್ಸ್ ಟೀ-ಶರ್ಟ್, ಕುರ್ತಾ ಗೌನ್, ಸ್ಕರ್ಟ್ನಂತಹ ಉಡುಪುಗಳು ಇಷ್ಟವಾಗುತ್ತವೆ. ಆದರೆ ನೀನು ಮಾತ್ರ ಅಪ್ಪಟ ಭಾರತೀಯ ನಾರಿ. ನಿನ್ನ ಮೈ ಮಾಟಕೆ ನಿರಾಭರಣ ಸುಂದರಿಯ ಒಂದು ನೋಟಕೆ ಕಾಲೇಜಿನ ಹುಡುಗರು ಬೆನ್ನು ಬೀಳುತ್ತಿದ್ದರು. ನೀನು ಯಾರಿಗೂ ಸೊಪ್ಪು ಹಾಕುತ್ತಿರಲಿಲ್ಲ. ಕಾಲೇಜಿನ ವಾಚನಾಲಯದಲ್ಲಿ ಹೇಳಬೇಕಾದ ಸಾವಿರ ಮಾತುಗಳಿಗಿಂತ, ಒಬ್ಬರನ್ನೊಬ್ಬರು ನೋಡುತ್ತ ಕಳೆಯುವ ಮೌನದ ಕ್ಷಣಗಳೇ ಹೆಚ್ಚು ಖುಷಿ ನೀಡುತ್ತಿದ್ದವು. ಪ್ರತಿದಿನ ನೀನು ವಾಚನಾಲಯಕ್ಕೆ ಬರುವ ಸಮಯಕ್ಕಾಗಿ ಕಾಯುತ್ತಿದ್ದೆ. ಕಣ್ಣಲ್ಲೇ ಮೂಡುತ್ತಿದ್ದ ನಗು ತುಂಟಾಟದ ನೋಟ ಸರಸಕ್ಕೆ ಮುನ್ನುಡಿ ಬರೆಯುವಂತೆ ಇರುತ್ತಿದ್ದವು. ಅದೊಂದು ರೀತಿಯ ಭಾವನೆಗಳ ಸುಂದರ ಸಂವಾದದಂತೆ ಇರುತ್ತಿತ್ತು.
ಹೀಗೆ ಕೆಲವು ದಿನಗಳು ಕಳೆದ ಮೇಲೆ ಸಣ್ಣ ಪುಟ್ಟ ಕಿಚಾಯಿಸುವಿಕೆ ಶುರುವಾಯಿತು. ಪಾರ್ಕಿನಲ್ಲಿ ನೀನು ಮುನಿಸಿಕೊಂಡು ಕುಳಿತುಕೊಳ್ಳುವುದು ಹಠ ಮಾಡುವುದು ನಾನು ರಮಿಸುವುದು. ಇವೆಲ್ಲ ಪ್ರೀತಿಯ ರುಚಿಯನ್ನು ಹೆಚ್ಚಿಸುತ್ತಿದ್ದವು. ಪರೀಕ್ಷೆ ಸಮೀಪಿಸುತ್ತಿದ್ದುರಿಂದ ವಾಚನಾಲಯದಲ್ಲಿ ಟೀಕಾಣಿ ಹೂಡುತ್ತಿದ್ದೆವು.
ಕಾಲೇಜಿನ ಕೊನೆ ದಿನದ ಸಂಜೆ ಮನೆಗೆ ಹೋಗುವಾಗ ಅನಿರೀಕ್ಷಿತವಾಗಿ ಮಳೆ ಹನಿಗಳು ಉದುರತೊಡಗಿದವು. ಇಬ್ಬರ ಬಳಿಯೂ ಕೊಡೆ ಇರಲಿಲ್ಲ. ರಸ್ತೆಯ ಪಕ್ಕದ ಮರದ ಕೆಳಗೆ ಆಸರೆ ಪಡೆಯಲು ಜೊತೆ ನಡೆಯುವಾಗ ನಿನ್ನ ಕೈಗೆ ನನ್ನ ಕೈ ತಾಕಿತು. ಆಗ ಮೈ ನರನಾಡಿಗಳಲ್ಲೆಲ್ಲ ಹಿಂದೆಂದೂ ಕಾಣದಂತಹ ಪುಳಕ. ಆ ತಾಕುವಿಕೆ ನಿನಗೂ ಆ ತರಹದ ರೋಮಾಂಚನ ನೀಡಿತ್ತು ಎಂಬುದು ನಿನ್ನ ಮುಖವನ್ನು ನೋಡಿದಾಗ ನನಗೆನಿಸಿತ್ತು. ಒಬ್ಬರ ಬಿಸಿಯುಸಿರು ಮತ್ತೊಬ್ಬರಿಗೆ ಬಡಿಯುತ್ತಿತ್ತು ಅಷ್ಟು ಸನಿಹದಲ್ಲಿದ್ದೆವು. ಇಬ್ಬರಿಗೂ ಮಾತು ಬಾರದೇನೋ ಎಂಬಂತೆ ನಿಂತಿದ್ದೆವು. ಮಾತು ಮೌನವಾದಾಗ ಕಣ್ಣಾಲಿಗಳು ಭಾಷೆ ಚೆಲ್ಲತೊಡಗಿದವು.. ಸರಸದ ಸನ್ನೆಗಳು ಭಾವನೆಗಳು ರಂಗೇರತೊಡಗಿದವು ಎಲ್ಲಿಂದ ಧೈರ್ಯ ಬಂತೋ ಗೊತ್ತಿಲ್ಲ ಸುರಸುಂದರಿಯ ಮೊಗವ ಅಂಗೈಯಲ್ಲಿ ಹಿಡಿದು ಪ್ರೀತಿಯಿಂದ ಹಣೆಗೆ ಮುತ್ತಿಟ್ಟ್ತೆ. ಮೊದಲ ಸಲದ ಮುತ್ತು ಮತ್ತನ್ನೇರಿಸುವಂತಿತ್ತು.
ಓಲಾಡುವ ಕಿವಿಯೋಲೆ, ಸದ್ದು ಮಾಡುವ ಬಳೆಗಳು, ಮಿನುಗುವ ನಕ್ಷತ್ರದ ಮೂಗುತಿ, ಪುಟ್ಟದಾದ ಕೆಂಪು ಬಿಂದಿ ಕಾಂಜೀವರಂ ಸೀರೆ ಅದಕ್ಕೊಪ್ಪುವ ಉದ್ದ ತೋಳಿನ ರವಿಕೆ ಮಲ್ಲಿಗೆ ಮಾಲೆಯಿಂದ ಅಲಂಕೃತವಾದ ಉದ್ದ ಜಡೆ ಕಣ್ಣಿಗಿಟ್ಟ ಕಾಡಿಗೆ ನೋಟಕ್ಕೆ ಸೂಕ್ತವಾದ ಸರಳವಾದ ಮೇಕಪ್. ನಿನ್ನ ಅಲಂಕಾರವು ನಿನ್ನ ವೈಯಕ್ತಿಕ ಶೈಲಿಯನ್ನು ಪ್ರತಿಬಿಂಬಿಸುತ್ತಿತ್ತು. ಇನ್ನೇನು ಚಂದಿರ ಉದಯಿಸುವ ಸಮಯ. ಚಂದಿರನ ತಂಪು ಇಬ್ಬರ ಮೈಯಲ್ಲೂ ನಡುಕ ಉಂಟು ಮಾಡಿತ್ತು. ಹೂವಿನಂತಹ ನಿನ್ನ ಮೈ ಸೋಕಲು ತುಟಿಯಂಚಿನ ನಗುವು ಹೊರಸೂಸಿತು. ನಾಚಿಕೆಯಿಂದ ಕೆನ್ನೆ ಕೆಂಪೇರಿ ಪ್ರೇಮ ಜ್ವರದ ರಂಗು ಹೆಚ್ಚಿತು. ಬೆರಳಿಗೆ ಬೆರಳು ಸೇರಲು ಬಿಸಿ ಕಂಪನ ಶುರುವಾಯಿತು. ತೋಳುಗಳು ಅಪ್ಪುಗೆಗೆ ಮುಂದಾದವು ಅಧರಗಳಿಗೆ ಅಧರಗಳನು ಸೇರಿಸಲು ಒಪ್ಪಿಗೆ ನೀಡಿತು. ಬಣ್ಣಿಸಲಾಗದ ನಿನ್ನ ಮೈ ಸುಗಂಧ ಪ್ರೀತಿಯ ಮತ್ತನ್ನು ಹೆಚ್ಚಿಸತೊಡಗಿತು. ನನ್ನ ಸೋಂಪಾದ ಕೂದಲಲ್ಲಿ ಹರವಾದ ಎದೆಯಲ್ಲಿ ನಿನ್ನ ಬೆರಳಿನಾಟ. ನಿನ್ನ ಅರ್ಧ ತೆರೆದ ಬೆನ್ನ ಮೇಲೆ ಮೃದುವಾದ ಸ್ಪ಼ರ್ಷ ನನ್ನ ಬೆರಳಿನಿಂದ. ಪರಸ್ಪರರ ಸನಿಹದಲ್ಲಿ ಅನಿರ್ವಚನೀಯ ಸುಖದ ಹೊಳೆ ಹರಿಯಿತು. ಅಷ್ಟರಲ್ಲಿ ಮಳೆಯು ನಿಂತಿತು. ಮಳೆ ಸಿಂಚನದ ಶೃಂಗಾರವು ಅಂಬರ ಚುಂಬಿತ ಪ್ರೇಮವು ಮರೆಯಲಾಗದ ತುಣುಕಾಗಿ ಮನದಲ್ಲಿ ಉಳಿಯಿತು.
ನನ್ನ ನಿನ್ನ ಪ್ರೀತಿ ಪಯಣ ನಿಜಕ್ಕೂ ಬಣ್ಣಿಸಲಾಗದ ಸುಂದರ ಶೃಂಗಾರ ರೀತಿ. ಮುಚ್ಚಿಟ್ಟ ಪ್ರೀತಿ ಹೇಗೋ ಇಬ್ಬರ ಮನೆಯಲ್ಲಿ ಯಾರೋ ಸ್ನೇಹಿತರು ಬಿಚ್ಚಿಟ್ಟಿದ್ದಾರೆ. ಈ ಪ್ರೇಮದ ಬಂಧಕೆ ಒಪ್ಪಿಗೆ ಸಿಕ್ಕಿದ್ದು ಆಗಿದೆ. ಏಳೇಳು ಜನ್ಮದ ನಂಟಿನಲ್ಲಿ ಮೂರು ಗಂಟು ಹಾಕಿದ್ದು ಆಗಿದೆ. ಇಬ್ಬನಿ ಹನಿಯಂತೆ ಮೃದುವಾದ ಸ್ಪರ್ಶಕೆ ಬಿಗಿಯಾದ ಅಪ್ಪುಗೆಗೆ ಒಬ್ಬರ ತೋಳಲಲಿ ಮತ್ತೊಬ್ಬರು ಬಂಧಿಗೆ ಬಿಸಿಯುಸಿರ ತಂಪಲಿ ಪ್ರೇಮದ ಸಂಚಾರಕೆ ಕಾದಿರುವೆ ಮನದನ್ನೆ ಪ್ರತಿ ಇರುಳು ಜಗವ ಮರೆವ ಆಟಕೆ..

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜಿಲ್ಲಾ ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆ :ಇಂದು ಪ್ರದಾನ

ಮಾ.೨೨ ರಂದು ಸಂವಿಧಾನ ಜಾಗೃತಿ ಸಮಾವೇಶ :ಮಯೂರ

ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡಿ :ಉಜ್ವಲಾ

ಅಗ್ನಿ ಅವಘಡ: ರೂ.50 ಲಕ್ಷ ಮೌಲ್ಯದ ವಸ್ತುಗಳು ಭಸ್ಮ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜಿಲ್ಲಾ ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆ :ಇಂದು ಪ್ರದಾನ
    In (ರಾಜ್ಯ ) ಜಿಲ್ಲೆ
  • ಮಾ.೨೨ ರಂದು ಸಂವಿಧಾನ ಜಾಗೃತಿ ಸಮಾವೇಶ :ಮಯೂರ
    In (ರಾಜ್ಯ ) ಜಿಲ್ಲೆ
  • ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡಿ :ಉಜ್ವಲಾ
    In (ರಾಜ್ಯ ) ಜಿಲ್ಲೆ
  • ಅಂಬರ ಚುಂಬಿತ ಪ್ರೇಮ ಪ್ರೇಮ
    In ವಿಶೇಷ ಲೇಖನ
  • ಅಗ್ನಿ ಅವಘಡ: ರೂ.50 ಲಕ್ಷ ಮೌಲ್ಯದ ವಸ್ತುಗಳು ಭಸ್ಮ!
    In (ರಾಜ್ಯ ) ಜಿಲ್ಲೆ
  • ಏತ ನೀರಾವರಿ ಯೋಜನೆಯ ಪ್ರಾರಂಭಕ್ಕೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಇಡ್ಲಿ-ವಡೆ ಜೊತೆಗೆ ಗ್ಯಾಸ್​ಗೂ ಬಿಲ್! :ಭಾರಿ ವೈರಲ್
    In (ರಾಜ್ಯ ) ಜಿಲ್ಲೆ
  • ಸಚಿವ ಎಂ.ಬಿ.ಪಾಟೀಲ ಜಿಲ್ಲಾ ಪ್ರವಾಸ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯಲ್ಲಿ ಗೃಹ ಬಳಕೆ ಸಿಲಿಂಡರ್ ಕೊರತೆ ಇಲ್ಲ
    In (ರಾಜ್ಯ ) ಜಿಲ್ಲೆ
  • ಸಿಲಿಂಡರ್ ಸ್ಟಾಕ್ ಇಲ್ಲ :ಸಚಿವ ಮುನಿಯಪ್ಪ!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.