ಬಸವನಬಾಗೇವಾಡಿ: ಪಟ್ಟಣದ ಬಸವ ಭವನದಲ್ಲಿ ಅ.೮ ರಂದು ಮಧ್ಯಾಹ್ನ ೨.೩೦ ಗಂಟೆಗೆ ಬಸವನಾಡಿನ ಹೆಮ್ಮೆಯ ಸಂಗೀತ ವಿದ್ವಾನರಾಗಿದ್ದ ದಿ.ಶ್ರೀಮಂತ ಅವಟಿ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ, ಶ್ರೀಮಂತ ಅವಟಿ ಲಲಿತಕಲಾ ಪ್ರತಿಷ್ಠಾನದಿಂದ ಯುವ ಸಂಗೀತ ಪ್ರತಿಭಾಶಾಲಿಗಳಿಗೆ ದಿ.ಶ್ರೀಮಂತ ಅವಟಿ ಸಂಗೀತ ಯುವ ಪುರಸ್ಕಾರ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಮಾರಂಭದ ಸಾನಿಧ್ಯವನ್ನು ಸ್ಥಳೀಯ ಹಿರೇಮಠದ ಶ್ರೀಗಳು, ವಿರಕ್ತಮಠದಶ್ರೀಗಳು ವಹಿಸುವರು. ಸಮಾರಂಭಕ್ಕೆ ಖ್ಯಾತ ಸುಗಮ ಸಂಗೀತ ಕಲಾವಿದರಾದ ರಾಘವೇಂದ್ರ ಬಿಜಾಡೆ ಸೇರಿದಂತೆ ಇತರರು ಆಗಮಿಸುತ್ತಾರೆ. ಸಮಾರಂಭದಲ್ಲಿ ದಿ.ಶ್ರೀಮಂತ ಅವಟಿಯವರ ಶಿಷ್ಯ ಬಳಗವು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದೆ. ಉತ್ತರ ಕರ್ನಾಟಕದ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಯುವ ಪ್ರತಿಭೆಯನ್ನು ಗುರುತಿಸಿ ಪುರಸ್ಕಾರ ಸಮಿತಿ ಸದಸ್ಯರಾದ ಡಾ.ಹರೀಶ ಹೆಗಡೆ, ವಿರೇಶ ವಾಲಿ, ಶ್ರೀಪಾದ ಅಟ್ಲೆ, ಅಶೋಕ ಹಂಚಲಿ ಆಯ್ಕೆ ಮಾಡಲಿದ್ದಾರೆ ಎಂದು ದಿ.ಶ್ರೀಮಂತ ಅವಟಿ ಲಲಿತಕಲಾ ಪ್ರತಿಷ್ಠಾನ ಅಧ್ಯಕ್ಷ ಶಂಕರ ಅವಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.