ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶವು ಭವ್ಯ ಭಾರತವಾಗಿ ಬೆಳೆಯಲು ಪಿಡಿಜೆ ಸಂಸ್ಥೆಯ ಶಿಕ್ಷಕರ ಹಾಗೂ ಇಲ್ಲಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳ ಕಾಣಿಕೆ ಅಪಾರವಾದುದು ಎಂದು ೯೨ರ ಹರೆಯದ ಮಾಜಿ ಮುಖ್ಯ ಗುರು ಎಂ.ಆರ್.ಕುಲಕರ್ಣಿ ಹೇಳಿದರು.
ಪಿಡಿಜೆ ೧೯೮೨ ರಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ ಪಿಡಿಜೆ ಂ ಃ ಹಾಗೂ bಜe soಛಿieಣಥಿ giಡಿಟ ಊigh sಛಿhooಟ ೧೯೮೨ ವಿಧ್ಯಾರ್ಥಿ ವಿದ್ಯಾರ್ಥಿನಿಯರ ಬಳಗದಿಂದ ಗುರುಗಳಿಗೆ ಸನ್ಮಾನ, ಪಿಡಿಜೆ ರತ್ನ ಪ್ರಶಸ್ತಿ ಹಾಗೂ ವಿಧ್ಯಾರ್ಥಿ ವಿದ್ಯಾರ್ಥಿನಿಯರ ಪುನರ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಪಿಡಿಜೆ ಒಂದು ಸಮುದ್ರ ಅದರಲ್ಲಿ ಮುತ್ತು ರತ್ನಗಳೇ ಅಪಾರ, ಇಲ್ಲಿ ಶಿಸ್ತು, ಸಂಸ್ಸೃತಿಯ ಬೋಧನೆ ಫಲವಾಗಿ ದೇಶ ಉದ್ದರಿಸುವ ವಿದ್ಯಾರ್ತಗಳು ಹೊರ ಬಂದಿದ್ದಾರೆ. ಅದಕ್ಕೆ ತಕ್ಕ ರೀತಿಯಲ್ಲಿ ಇಲ್ಲಿಯ ಶಿಕ್ಷಕರು ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧನೆ ಮಾಡಿದ್ದರಿಂದಲೇ ಎಲ್ಲಾ ರಂಗದಲ್ಲಿ ಇಲ್ಲಿಯ ವಿದ್ಯಾರ್ಥಿಗಳು ಬೆಳೆದಿದ್ದಾರೆ ಎಂದರು.
ಗುರುವಂದನೆ ಸ್ವೀಕರಿಸಿ ಮಾತನಾಡಿದ ಕೆ.ವಿ.ಪಾಟೀಲ ಅವರು, ಪಿಡಿಜೆ ಸಂಸ್ಥೆಯ ಹೆಸರು ಹೇಳಿದ ತಕ್ಷಣ ಒಂದು ಗೌರವ ಹೆಮ್ಮೆ ಬರುವಂತೆ ಎಲ್ಲ ಕಡೆಗಳಲ್ಲಿ ಕೇಳಿಬರುತ್ತಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಹೆಮ್ಮೆಯಿಂದ ಪಿಡಿಜೆ ವಿದ್ಯಾರ್ಥಿ ಎಂದು ಹೇಳುತ್ತಾರೆ. ಉತ್ತಮ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕಾರ್ಖಾನೆ ಈ ಸಂಸ್ಥೆಯದ್ದಾಗಿದೆ ಇಂತಹ ಸಂತೋಷಕ್ಕೆ ಒಂದು ಮಿತಿಯೇ ಇಲ್ಲ ಎಂದು ಸಂಸ್ಥೆಯ ಕುರಿತು ಹೊಗಳಿದರು.
ವಿದ್ಯಾರ್ಥಿಗಳು ಶಿಕ್ಷಕರಿಗೆ ಕೊಡುವ ಗೌರವ ಸನ್ಮಾನ ವಿರ್ದ್ಯಾರ್ಥಿಗಳು ಮಾಡಿದ ಸಾಧನೆಯ ಮೇಲೆ ಅವಲಂಬಿಸಿದೆ ಎಂದು ಹೇಳಿದ ಗುರುಗಳಾದ ವಿ.ಎಲ್.ಮೊಕಾಶಿ ಅವರು ತಾಯಿಯ ಪ್ರೀತಿಯ ಬಗ್ಗೆ ಬಹು ಮಾರ್ಮಿಕವಾಗಿ ಮಾತನಾಡಿದರು.
ಈ ಗುರುವಂದನೆ ಕಾರ್ಯಕ್ರಮದಲ್ಲಿ ಎಂ.ಆರ್. ಕುಲಕರ್ಣಿ, ವಿ.ಎಲ್.ಮೊಕಾಶಿ, ಆರ್.ಎಚ್.ಕಮತಗಿ, ಕೆ.ವಿ.ಪಾಟೀಲ, ಬಿ.ಬಿ.ಕುಲಕರ್ಣಿ, ಅಂಬಾದಾಸ ಜೋಶಿ, ಆರ್.ಆರ್.ಕುಲಕರ್ಣಿ, ವಿ.ಬಿ.ಡಂಬಳ, ಸಂಸ್ಥೆಯ ಸಿಬ್ಬಂದಿ ಶ್ಯಾಮ ಜೋಶಿ, ಶಂಬು ಜೋಶಿ, ಎ.ಆರ್. ಕುಲಕರ್ಣಿ, ಎಮ್.ಎನ್.ಕಟ್ಟಿ ಹಾಗೂ ಶಿಪಾಯಿಗಳಾದ ಬಸಪ್ಪ ಮುರಿಗೆಪ್ಪ ಅವರುಗಳನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಪಿಡಿಜೆ ರತ್ನ ಪ್ರಶಸ್ತಿಗಳನ್ನು ಡಾಕ್ಟರ ಉಪೇಂದ್ರ ನರಸಾಪುರ, ಸುಶೀಲೇಂದ್ರ ನಾಯಕ, ಅಶೋಕ್ ಡಿ ದೇಶಪಾಂಡೆ, ಶ್ರೀಮತಿ ಸುಜಾತಾ ಜಾಧವ, ಸುಧೀರ ತೆಂಕಸಾಲಿ, ಶ್ರೀಮತಿ ಮಾಯಾ ಚಿಕ್ಕೇರೂರ ಹಾಗೂ ಮುಕುಂದ ಗಲಗಲಿ ಅವರಿಗೆ ಪ್ರಧಾನ ಮಾಡಲಾಯಿತು.
ಗೌರವ ಸ್ವೀಕರಿಸಿದ ನರಸಾಪುರ ಅವರು ಮಾತನಾಡಿ, ನನ್ನ ವೈದ್ಯಕೀಯದಲ್ಲಿ ಪಿಡಿಜೆ ಶಿಕ್ಷಕರಿಗೆ ಹಾಗೂ ನನ್ನ ಪಿಡಿಜೆ ಸಹೋದ್ಯೋಗಿಗಳಿಗೆ ಉಚಿತ ಚಿಕಿತ್ಸೆ ನಿಡಿದ್ದೇನೆ. ಆ ತೃಪ್ತಿ ನನ್ನಲ್ಲಿದೆ. ಪಿಡಿಜೆ ರತ್ನ ಪ್ರಶಸ್ತಿ ಇಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಲ್ಲಬೇಕು ಎಂದರು.
ಅದೇ ರೀತಿಯಲ್ಲಿ ಪಿಡಿಜೆ ರತ್ನ ಪ್ರಶಸ್ತಿ ಸ್ವೀಕರಿಸಿದ ಅಶೋಕ್ ಡಿ ದೇಶಪಾಂಡೆ, ಶ್ರೀಮತಿ ಸುಜಾತಾ ಜಾಧವ, ಸುಧೀರ ತೆಂಕಸಾಲಿ, ಶ್ರೀಮತಿ ಮಾಯಾ ಚಿಕ್ಕೇರೂರ, ಸುಶೀಲೇಂದ್ರ ನಾಯಕ ಅವರುಗಳು ಸಂಸ್ಥೆ ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
೮೦ ವಿದ್ಯಾರ್ಥಿಗಳು ಪಿಡಿಜೆ ೧೯೮೨ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮುಂಬೈ, ಪುಣಾ, ಬರೋಡಾ, ಬೆಂಗಳೂರು ಹೈದ್ರಾಬಾದ, ಕರ್ನಾಟಕದ ವಾಸಿಸುವ ೧೯೮೨ ರ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿ ಜೀವನದ ಘಟನೆಗಳನ್ನು ಮೆಲಕು ಹಾಕಿ ಸಾಯಂಕಾಲ ೬ ಗಂಟೆಯವರಗೆ ಪರಸ್ರರ ಪರಿಚಯ ವಿನಿಮಯ ಹಾಗೂ ಸಂಗೀತ ಸ್ಮಧೆಯಲ್ಲಿ ಸಂಭ್ರಮಿಸಿದರು.
ಗುರುರಾಜ ಕುಲಕರ್ಣಿ ಹಾಗೂ ಭೀಮಾಶಂಕರ ಹದನೂರ ಅವರು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.

